ಮಡಿಕೇರಿ ನ.೨೬ : ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಇದೇ ತಾ. ೨೭ ಮತ್ತು ೨೮ ರಂದು ನಗರದ ಹೊರವಲಯದಲ್ಲಿ ರೋಟರಿ ಫೌಂಡೇಶನ್ ವಿಚಾರಸಂಕಿರಣ ದಿಶ ಆಯೋಜಿತವಾಗಿದ್ದು ರೋಟರಿಯ ರಾಷ್ಟಿçÃಯ ಮಟ್ಟದ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಮಡಿಕೇರಿ ಹೊರವಲಯದಲ್ಲಿನ ಕ್ಯಾಪಿಟಲ್ ವಿಲೇಜ್‌ನಲ್ಲಿ ತಾ.೨೭ ರಂದು (ಇಂದು) ಸಂಜೆ ೬ ಗಂಟೆಗೆ ರೋಟರಿ ಫೌಂಡೇಶನ್ ವಿಚಾರಸಂಕಿರಣವನ್ನು ಅಂತರ ರಾಷ್ಟಿçÃಯ ರೋಟರಿಯ ರಾಷ್ಟಿçÃಯ ನಿರ್ದೇಶಕ ಎ.ಎಸ್.ವಂಕಟೇಶ್ ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲಾ ರಾಜ್ಯಪಾಲ ಎ.ಆರ್.ರವೀಂದ್ರಭಟ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾಪೂವಯ್ಯ, ಕಾರ್ಯದರ್ಶಿ ಪಿ.ಆರ್. ರಾಜೇಶ್, ರೋಟರಿ ರಾಷ್ಟಿçÃಯ ಮುಖಂಡ ರವಿವಡ್ಲಮನಿ, ರೋಟರಿ ಜಿಲ್ಲಾ ಸಲಹೆಗಾರ ಲಕ್ಷಿö್ಮನಾರಾಯಣ್, ಡಾ.ಭಾಸ್ಕರ್, ತರಬೇತುದಾರ ಮಾತಂಡ ಸುರೇಶ್ ಚಂಗಪ್ಪ, ಶೇಖರ್ ಶೆಟ್ಟಿ, ಮುಂದಿನ ಸಾಲಿನ ರೋಟರಿ ಜಿಲ್ಲಾ ರಾಜ್ಯಪಾಲ ಪ್ರಕಾಶ್ ಕಾರಂತ್, ನಿಯೋಜಿತ ರಾಜ್ಯಪಾಲ ಹೆಚ್.ಆರ್.ಕೇಶವ್, ರೋಟರಿ ಫೌಂಡೇಶನ್ ಪ್ರಮುಖರಾದ ಜಿ.ಕೆ.ಬಾಲಕೃಷ್ಣ, ಡಾ.ಸೂರ್ಯನಾರಾಯಣ್ ಪಾಲ್ಗೊಳ್ಳಲಿದ್ದಾರೆ ಎಂದು . ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ. ವಿಚಾರಸಂಕಿರಣ ಸಮಿತಿ ಅಧ್ಯಕ್ಷ ಮೋಹನ್ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಟರಿ ಜಿಲ್ಲೆ ೩೧೮೧ ಗೆ ಸೇರಿದ ೮೬ ಸಂಸ್ಥೆಗಳಿAದ ಸದಸ್ಯರು ಎರಡು ದಿನಗಳ ಈ ವಿಚಾರಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂತರರಾಷ್ಟಿçÃಯ ರೋಟರಿ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಕೈಗೊಳ್ಳುವ ಸಾಮಾಜಿಕ ಸೇವಾ ಯೋಜನೆಗಳು ಮತ್ತು ದೇಣಿಗೆ ಸಂಬAಧಿತ ಈ ಮಹತ್ವದ ವಿಚಾರಸಂಕಿರಣದಲ್ಲಿ ಚರ್ಚೆಗಳು ನಡೆಯಲಿವೆ.