ಕರಿಕೆ, ನ. ೨೬: ಕರ್ನಾಟಕ ಹಾಗೂ ಕೇರಳ ಗಡಿಯಂಚಿನ ಬ್ರಹ್ಮಗಿರಿ ವನ್ಯಧಾಮ ವ್ಯಾಪ್ತಿಯ ಊರುಟಿ ಹಾಗೂ ಮಾಕುಟ್ಟ ಪ್ರಾದೇಶಿಕ ವಲಯದ ಕೆರೆಟಿ ‘ಮೀಸಲು ಅರಣ್ಯ ವ್ಯಾಪ್ತಿಯ ಅರಣ್ಯದೊಳಗೆ ತ್ಯಾಜ್ಯ’ ಸುರಿದ ಬಗ್ಗೆ ತಾ. ೧೫ರಂದು ಮೀಸಲು ಅರಣ್ಯದಲ್ಲಿ ಕೇರಳ ರಾಜ್ಯದ ತ್ಯಾಜ್ಯ ಎಂಬ ತಲೆ ಬರಹ ದಡಿಯಲ್ಲಿ ‘ಶಕ್ತಿ' ಚಿತ್ರ ಸಮೇತ ವರದಿ ಪ್ರಕಟಿಸಿ ಇಲಾಖೆಯ ಗಮನ ಸೆಳೆದಿತ್ತು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ತ್ಯಾಜ್ಯದ ಫೋಟೋ ವೀಡಿಯೋ ವೈರಲ್ ಆಗಿ ತ್ಯಾಜ್ಯ ಎಸೆದವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಿ ವನ್ಯಜೀವಿ, ವನ್ಯಧಾಮ, ಮೀಸಲು ಅರಣ್ಯವನ್ನು ಸಂರಕ್ಷಿಸಬೇಕೆAದು ಸಾರ್ವಜನಿಕರು ಆಗ್ರಹಿಸಿದ್ದರು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆಯ ವನಜೀವಿ ವಲಯದ ಸಿಬ್ಬಂದಿ ಹಾಗೂ ಪ್ರಾದೇಶಿಕ ವಲಯದ ಸಿಬ್ಬಂದಿಗಳು ತ್ಯಾಜ್ಯವನ್ನು ಸಂಗ್ರಹಿಸಿ ಬೇಟೋಳಿ ಗ್ರಾ.ಪಂ. ಸಹಕಾರದಿಂದ ತ್ಯಾಜ್ಯವನ್ನು ಅರಣ್ಯದಿಂದ ಸ್ಥಳಾಂತರ ಮಾಡಿದ್ದಾರೆ. - ಸುಧೀರ್ ಹೊದ್ದೆಟ್ಟಿ