ಮಡಿಕೇರಿ, ನ. ೨೬: ಡಿಸೆಂಬರ್ ೨೪ ರಿಂದ ೨೬ ರವರೆಗೆ ಮರಗೋಡು ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗೌಡ ಜನಾಂಗಕ್ಕೆ ಫುಟ್ಬಾಲ್ ಪಂದ್ಯಾವಳಿ ಏರ್ಪಡಿಸ ಲಾಗಿದೆ ಎಂದು ಮರಗೋಡು ವೈಷ್ಣವಿ ಫ್ರೆಂಡ್ಸ್ ಸಂಘದ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅವರು ಮಾಹಿತಿ ನೀಡಿದರು. ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪ, ಕೊರೊನಾ ಕಾರಣಗಳಿಂದಾಗಿ ಕ್ರೀಡಾಕೂಟಗಳ ಆಯೋಜನೆ ಕಡಿಮೆಯಾಗಿದೆ. ಕ್ರೀಡೆಯತ್ತ ಮತ್ತೆ ಜನರನ್ನು ಆಕರ್ಷಿಸಲು ಕೊಡಗಿನ ಗೌಡ ಜನಾಂಗಕ್ಕೆ ಪ್ರತಿ ತಂಡದಲ್ಲಿ ೭ ಮಂದಿ (೫+೨) ಯನ್ನೊಳಗೊಂಡ ಫುಟ್ಬಾಲ್ ಟೂರ್ನಿ ಆಯೋಜಿಸಲಾಗಿದೆ.

ಪಂದ್ಯಾವಳಿಯ ವಿಜೇತರಿಗೆ ಟ್ರೋಫಿ ಹಾಗೂ ನಗದು ರೂ.೩೦,೦೦೦, ದ್ವಿತೀಯ ಬಹುಮಾನ ಟ್ರೋಫಿ ಹಾಗೂ ನಗದು ರೂ.೨೦,೦೦೦,

(ಮೊದಲ ಪುಟದಿಂದ) ತೃತೀಯ ಹಾಗೂ ನಾಲ್ಕನೇ ಬಹುಮಾನ ಪಡೆದವರಿಗೆ ನಗದು ತಲಾ ರೂ.೫,೦೦೦ ನೀಡಲಾಗುವುದಾಗಿ ತಿಳಿಸಿದರು. ಇದರೊಂದಿಗೆ ಅತ್ಯುತ್ತಮ ಆಟಗಾರ, ಗೋಲ್‌ಕೀಪರ್, ಅತಿ ಹೆಚ್ಚು ಗೋಲ್ ಬಾರಿಸಿದ ಆಟಗಾರರಿಗೂ ಪ್ರಶಸ್ತಿ ನೀಡಲಾಗುವುದಾಗಿ ಹೇಳಿದರು.

ಡಿಸೆಂಬರ್ ೨೦ ರೊಳಗೆ ತಂಡಗಳು ಪಂದ್ಯಾವಳಿಗೆ ನೋಂದಣಿ ಮಾಡಿಕೊಳ್ಳಬೇಕು. ಮೊದಲ ೯೦ ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದಾಗಿ ಅವರು ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ ಮೊ:೯೯೮೦೦೦೪೩೭೪, ೯೪೮೩೭೦೩೧೦೧, ೯೬೧೧೫೦೨೨೭೦ ಹಾಗೂ ೯೪೪೯೪೭೬೧೩೯ ಸಂಪರ್ಕಿಸಬಹುದು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪರ್ಲಕೋಟಿ ಸತ್ಯ, ಕಾರ್ಯದರ್ಶಿ ಪಾಣತ್ತಲೆ ವಿಕ್ರಂ, ಖಜಾಂಚಿ ಕಾಂಗಿರ ಮಿಲನ್ ಹಾಗೂ ಸದಸ್ಯ ಪೇರಿಯನ ಯೋಗೇಶ್ ಉಪಸ್ಥಿತರಿದ್ದರು.