*ಸಿದ್ದಾಪುರ, ನ. ೨೬: ಬಿಪಿಎಲ್ ಕಾರ್ಡ್ ಹೊಂದಿ ರುವ ಕುಟುಂಬಗಳಿಗೆ ಇಂಗುಗುAಡಿ ನಿರ್ಮಿಸಿಕೊಡುವ ಕೇಂದ್ರ ಸರಕಾರದ ಯೋಜನೆಯೊಂದು ಅನುಷ್ಠಾನದಲ್ಲಿದೆ. ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಯೋಜನೆ ದುರುಪಯೋಗವಾಗುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಅಭ್ಯತ್‌ಮAಗಲ ಪೈಸಾರಿಯ ನಿವಾಸಿ ಸುಬ್ರಮಣ್ಯ ಎಂಬವರಿಗೆ ಇಂಗುಗುAಡಿಯೊAದನ್ನು ನಿರ್ಮಿಸಿಕೊಡಲಾಗುತ್ತಿದೆ. ಗ್ರಾ.ಪಂ. ಅಧ್ಯಕ್ಷರ ಕಾಳಜಿಯಿಂದ ಈ ಕಾಮಗಾರಿ ಆರಂಭಗೊAಡಿತು.
ಆದರೆ ಇಲ್ಲಿ ಹೊಂಡವೊAದನ್ನು ನಿರ್ಮಿಸಲಾಯಿತೇ ಹೊರತು ಕಳೆದ ೨ ತಿಂಗಳಿನಿAದ ಇದು ಇಂಗುಗುAಡಿಯ ರೂಪವನ್ನು ಪಡೆದುಕೊಂಡಿಲ್ಲ. ಹೊಂಡದ ತುಂಬಾ ನೀರು ನಿಂತಿದ್ದು, ದುರ್ವಾಸನೆ ಬೀರುತ್ತಿದೆ. ಈ ತೆರೆದ ಗುಂಡಿಗೆ ನಾಯಿಯೊಂದು ಬಿದ್ದು ಮೃತಪಟ್ಟಿದೆ. ಸೊಳ್ಳೆಗಳ ಕಾಟ ಮಿತಿ ಮೀರಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಮಕ್ಕಳು ಈ ಭಾಗದಲ್ಲಿ ಓಡಾಡುವಾಗ ಅನಾಹುತ ಎದುರಾಗಬಹುದು ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ಅಪೂರ್ಣಗೊಂಡಿದ್ದರೂ ಸುಮಾರು ೧೮ ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದೇ ಮಾದರಿಯ ನಿಷ್ಪçಯೋಜಕ ಇಂಗುಗುAಡಿಗಳನ್ನು ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆ ನಿರ್ಮಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಯೋಜನೆ ದುರುಪಯೋಗವಾಗುವುದನ್ನು ತಡೆಯಲು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.