ಮಡಿಕೇರಿ, ನ. ೨೫: ನೆಲಜಿಯ ಅಂಬಲ ಮಹಿಳಾ ಸಮಾಜದ ವತಿಯಿಂದ ಡಿಸೆಂಬರ್ ೫ ರಂದು ಜಿಲ್ಲಾಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಹಾಗೂ ಹಗ್ಗಜಗ್ಗಾಟ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ನೆಲಜಿ ಅಂಬಲ ಶಾಲಾ ಮೈದಾನದಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಡಿ. ೫ ರಂದು ಬೆಳಿಗ್ಗೆ ೯.೩೦ ರಿಂದ ಆರಂಭವಾಗಲಿದೆ. ಸಾರ್ವಜನಿಕರು, ಪುರುಷರು ಮತ್ತು ಮಹಿಳೆಯರಿಗೆ ಸಮಾಜದ ಅಧ್ಯಕ್ಷೆ ಮಣವಟ್ಟಿರ ಕಮಲ ಬೆಳ್ಳಿಯಪ್ಪ ನೇತೃತ್ವದಲ್ಲಿ ಸ್ಪರ್ಧೆಗಳು ಜರುಗಲಿವೆ.

.೨೨ ಹಾಗೂ ೧೨ ಬೋರ್‌ನಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಇದೆ. ಸ್ಪರ್ಧೆಯನ್ನು ಎಸ್.ಪಿ. ಕ್ಷಮಾ ಮಿಶ್ರಾ ಅವರು ಉದ್ಘಾಟಿಸಲಿದ್ದಾರೆ. .೨೨ ವಿಭಾಗದ ಸ್ಪರ್ಧೆಗೆ ಅಪ್ಪುಮಣಿಯಂಡ ಸನ್ನು ಸೋಮಣ್ಣ, ೧೨ ಬೋರ್ ವಿಭಾಗಕ್ಕೆ ಮುಕ್ಕಾಟಿರ ಚಿಣ್ಣಪ್ಪ, ಹಗ್ಗಜಗ್ಗಾಟ ಪುರುಷರಿಗೆ ಅಂಬೀ, ಮಹಿಳಾ ಸಮಾಜ ಹಾಗೂ ಮಹಿಳೆಯರಿಗೆ ಅಲ್ಲಾರಂಡ ಭಾರತಿ ಧನುಕುಮಾರ್ ಟ್ರೋಫಿ ಪ್ರಾಯೋಜಿಸಿದ್ದಾರೆ.