ಮಡಿಕೇರಿ, ನ. ೨೬: ತಾರ್ಕಿಕ ಅಂತ್ಯದ ತನಕ ಸಂಘಟಿತವಾಗಿ ಹೋರಾಟ ಮಾಡಿದರೆ ಕೊಡವರ ನ್ಯಾಯಯುತ ಬೇಡಿಕೆಗಳು ಈಡೇರುತ್ತವೆ. ಈ ನಿಟ್ಟಿನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ನಡೆಸುತ್ತಿರುವ ಹೋರಾಟಕ್ಕೆ ಎಲ್ಲರೂ ಕೈಜೋಡಿಸ ಬೇಕೆಂದು ಹಂಪಿ ವಿಶ್ವವಿದ್ಯಾಲಯದ ಮಾನವಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ. ಮೇತಿ ಕರೆ ನೀಡಿದರು.
ನಗರದ ಹೊರವಲಯದಲ್ಲಿರುವ ಕ್ಯಾಪಿಟಲ್ ವಿಲೇಜ್ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆದ ೩೧ನೇ ವರ್ಷದ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದಿನ ಜನಗಣತಿಯ ಪ್ರಕಾರ ಕೊಡವರು ಸಾಂಪ್ರದಾಯಿಕ ಬುಡಕಟ್ಟು ಜನಾಂಗ ಎಂದು ಪರಿಗಣಿಸಲ್ಪಟ್ಟಿದೆ. ಕೊಡವ ಭಾಷೆ ಆದಿದ್ರಾವಿಡದ ಭಾಗವಾದ ಗೊಂಡಿ ಭಾಷೆಯ ಮೂಲವಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಸೇರಿದಂತೆ ಇತರ ಭಾಷೆಗಳ ಪ್ರಭಾವ ಕೊಡವ ಭಾಷೆ ಮೇಲೆ ಬೀರಿರುವುದು ಗೋಚರಿಸುತ್ತದೆ. ಇದರಿಂದ ಸಂಸ್ಕೃತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದು ಸತ್ಯ. ಕೊಡವ ಭಾಷೆ ಉಳಿಸಿಕೊಳ್ಳುವುದು ಸಂಘಟನೆಯ ಆದ್ಯತೆಯಾಗಬೇಕು. ಭಾಷೆ ಉಳಿದರೆ ಮಾತ್ರ ಬೇಡಿಕೆಗಳಿಗೆ ಮನ್ನಣೆ ದೊರಕುತ್ತದೆ. ಇದರಿಂದ ೮ನೇ ಶೆಡ್ಯೂಲ್ ಪಟ್ಟಿಯಲ್ಲಿ ಸೇರಬಹುದಾಗಿದೆ. ಕೊಡವ ಅಸ್ಮಿತೆಗೆ ಆದ್ಯತೆ ನೀಡಬೇಕು. ಭಾಷೆಯ ಪೋಷಣೆಯಾಗಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.
ಸಂಸ್ಕೃತಿಯೇ ಜನಾಂಗದ ಶಕ್ತಿಯಾಗಿದೆ. ಸರಕಾರದ ಮಟ್ಟದಲ್ಲಿ ಜನರ ಬೇಡಿಕೆಗೆ ಜನಪ್ರತಿನಿಧಿಗಳು ಧ್ವನಿಯಾಗಬೇಕಾಗಿದ್ದು, ಈ ಹಿನ್ನೆಲೆ ರಾಜಕೀಯವಾಗಿಯೂ ಕೊಡವರು ಮುಂದೆ ಬರಬೇಕು. ಕೊಡವರ ಬೇಡಿಕೆ ಸಂಬAಧ ಭಿನ್ನವಾದಗಳಿರಬಾರದು. ಎಲ್ಲ ಸಂಘಟನೆಗಳು ಒಂದಾಗಿರಬೇಕು ಎಂದು ಸಲಹೆ ನೀಡಿದ ಅವರು, ಪ್ರಕೃತಿಯ ಆರಾಧಕರು ಬುಡಕಟ್ಟು ಜನಾಂಗಕ್ಕೆ ಸೇರುತ್ತಾರೆ. ಕೊಡವರು ಪ್ರಕೃತಿಯನ್ನು ದೇವರೆಂದು ನಂಬಿದ್ದಾರೆ. ಇದರಿಂದ ಸ್ಪಷ್ಟವಾಗಿ ಕೊಡವರು ಇಲ್ಲಿನ ಮೂಲನಿವಾಸಿ ಗಳೆಂದು ತಿಳಿಯುತ್ತದೆ. ಸಿ.ಎನ್.ಸಿ.ಯ ೭ ಪ್ರಮುಖ ಬೇಡಿಕೆಗಳು ನ್ಯಾಯಯುತವಾಗಿದ್ದು, ೮ನೇ ಶೆಡ್ಯೂಲ್ಗೆ ಸೇರಬೇಕೆಂದಿರುವ ದೇಶದ ಎಲ್ಲಾ ಜನಾಂಗದ ಪ್ರಮುಖರು ಒಂದೂಗೂಡಿ ತಂಡದ ರೂಪದಲ್ಲಿ ಕೆಲಸ ಮಾಡಿ ಲೋಕಸಭೆಯಲ್ಲಿ ಪ್ರಸ್ತಾಪಿಸಿದರೆ ಹೋರಾಟ ಮತ್ತಷ್ಟೂ ಪರಿಣಾಮಕಾರಿ ಯಾಗಿ ಹೊರಹೊಮ್ಮುತ್ತದೆ. ಅಕಾಡೆಮಿಗಳು ಕೂಡ ಕೇವಲ ಕಲೆ, ಸಾಹಿತ್ಯಕ್ಕೆ ಸೀಮಿತವಾಗದೆ ಆಧ್ಯಯನಕ್ಕೆ ಒತ್ತು ನೀಡಬೇಕು. ಕೊಡವ ಕುಲಶಾಸ್ತç ಅಧ್ಯಯನ ಸಮರ್ಪಕವಾಗಿ ನಡೆಯಬೇಕೆಂದು ಒತ್ತಾಯಿಸಿದರು.
ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರಬೇಕು - ಬ್ರಿಜೇಶ್
ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪಾಲಚಂಡ ಬ್ರಿಜೇಶ್ ಕಾಳಪ್ಪ ಮಾತನಾಡಿ, ಕೊಡವ ಜನಾಂಗ, ಸಂಸ್ಕೃತಿ ಸಂರಕ್ಷಣೆಗೆ ನಿರಂತರವಾಗಿ ಹೋರಾಟ ಮಾಡುತ್ತಿರುವ ಸಿ.ಎನ್.ಸಿ. ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು. ವಿಭಿನ್ನ ಆಚಾರ-ವಿಚಾರ, ಸಂಸ್ಕೃತಿ ಹೊಂದಿರುವ ಕೊಡವರಿಗೆ ಬುಡಕಟ್ಟು ಸ್ಥಾನ ದೊರಕಬೇಕು. ಬುಡಕಟ್ಟು ಸ್ಥಾನಮಾನ ದೊರೆತಲ್ಲಿ ಕೀಳು ಮಟ್ಟದಲ್ಲಿ ನೋಡುತ್ತಾರೆ ಎಂಬ ಮನಸ್ಥಿತಿಯಿಂದ ನಾವೆಲ್ಲ ಹೊರಬರಬೇಕು. ರಾಜಕೀಯವಾಗಿ ಕೊಡವರು ಪ್ರವರ್ಧಮಾನಕ್ಕೆ ಬರಬೇಕು. ಇದರಿಂದ ಜನಾಂಗದ ಹಿತಾಸಕ್ತಿ ಉಳಿಯುತ್ತದೆ. ಅಲ್ಲದೆ ಆಡಳಿತ ನಡೆಸುವವರು
(ಮೊದಲ ಪುಟದಿಂದ) ಯಾರೇ ಇರಲಿ ತಪ್ಪು ಎಂದು ಕಂಡುಬAದಲ್ಲ್ಲಿ ಪ್ರಶ್ನೆ ಮಾಡದಿರುವುದು ಕೂಡ ಜನಾಂಗದ ಅಸ್ತಿತ್ವ ಕುಸಿಯಲು ಮೂಲ ಕಾರಣವಾಗಿದೆ ಎಂದು ಅಭಿಪ್ರಾಯಿಸಿದರು.
ದೆಹಲಿಯಲ್ಲಿ ನಿರಂತರ ಒಂದು ವರ್ಷಗಳ ಕಾಲ ರೈತರು ನಡೆಸಿದ ಹೋರಾಟದ ಫಲವಾಗಿ ಕೃಷಿ ಮಸೂದೆಗಳನ್ನು ಸರಕಾರ ಹಿಂಪಡೆದುಕೊAಡಿದೆ. ನಾವುಗಳು ವೈಯುಕ್ತಿಕ ಹಿತಾಸಕ್ತಿ ಮರೆತು ಜನಾಂಗಕ್ಕಾಗಿ ಒಂದಾಗಿ ಹೋರಾಟ ಮಾಡಿದರೆ ಗೆಲುವು ಸಾಧ್ಯ. ಸರಕಾರದ ಮುಂದೆ ನಾವು ಬಿಕ್ಷೆ ಬೇಡುತ್ತಿಲ್ಲ. ನ್ಯಾಯಯುತ ಬೇಡಿಕೆ ಮುಂದಿಡು ತ್ತಿದ್ದೇವೆ. ಇದನ್ನು ಜನಪ್ರತಿನಿಧಿಗಳು ಅರಿತು ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.
ಕುಲಶಾಸ್ತç ಅಧ್ಯಯನ ಸರಿಯಾಗಿ ನಡೆದಿಲ್ಲ - ಮಂಜುನಾಥ್
ಕೊಡವರ ಕುಲಶಾಸ್ತç ಅಧ್ಯಯನ ಸಮರ್ಪಕವಾಗಿ ನಡೆದಿಲ್ಲ ಎಂದು ಬುಡಕಟ್ಟು ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಕವಳ್ಳಿ ಮಂಜುನಾಥ್ ಆರೋಪಿಸಿ ದರು.
ಪ್ರಪಂಚದ ಮೂಲೆಮೂಲೆಯಲ್ಲಿ ನೆಲೆಸಿರುವವರು ಸಿ.ಎನ್.ಸಿ. ಹೋರಾಟಕ್ಕೆ ಬಹಿರಂಗವಾಗಿ ಬೆಂಬಲ ನೀಡಬೇಕು. ಸಂಘಟನಾ ಸಭೆಗಳು ಕೊಡವರು ನೆಲೆಸಿರುವ ಇತರ ಭಾಗಗಳಲ್ಲಿಯೂ ನಡೆಸಬೇಕು. ಕೊಡವ ಕುಲಶಾಸ್ತç ಅಧ್ಯಯನ ವರದಿಯಲ್ಲಿ ಆಗಿರುವ ಲೋಪ ದೋಷಗಳ ಬಗ್ಗೆ ಗಮನಸೆಳೆಯುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ತೆಗೆದುಕೊಳ್ಳದಿದ್ದಲ್ಲಿ ನ್ಯಾಯಾಂಗ ಹೋರಾಟ ರೂಪಿಸ ಲಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಪ್ರಸ್ತಾವಿಕವಾಗಿ ಮಾತನಾಡಿ, ಸಂಘಟನೆ ಪರಿಣಾಮಕಾರಿಯಾಗಿ ಹೋರಾಟ ಮಾಡುತ್ತ ಬಂದಿದ್ದು, ಅಪಾರ ಜವಾಬ್ದಾರಿಗಳಿವೆ. ಕೊಡವ ಸಂಸ್ಕೃತಿ, ಅಸ್ಮಿತೆ, ನೆಲ-ಜಲ ಸಂರಕ್ಷಣೆ ನಮ್ಮ ಆದ್ಯತೆಯಾಗಿದೆ. ಹಲವು ಅಡೆ-ತಡೆ ಎದುರಿಸಿಕೊಂಡು ನ್ಯಾಯಯುತ ಬೇಡಿಕೆಗಳನ್ನು ಸರಕಾರದ ಮುಂದಿಡುತ್ತಿದ್ದೇವೆ. ಭಾರತದ ಸಂವಿಧಾನ ಪ್ರಪಂಚದಲ್ಲಿ ಅತ್ಯುತ್ತಮ ಸಂವಿಧಾನವಾಗಿದೆ. ಆದರೆ, ಕೊಡವರು ಸಂವಿಧಾನದ ಬಗ್ಗೆ ತಿಳಿದು ಕೊಳ್ಳದಿರುವುದು ವಿಪರ್ಯಾಸವಾಗಿದೆ. ಕೆಲವರಿಂದ ಕೊಡವರನ್ನು ದಾರಿತಪ್ಪಿಸುವ ಕೆಲಸ ಕೂಡ ಆಗುತ್ತಿರುವುದು ವಿಷಾದನೀಯ. ನಮ್ಮಗಳ ರಾಜಕೀಯ ಚಿಂತನೆ ಕೂಡ ಬದಲಾಗಬೇಕು. ಕೊಡವರು ಕೈಕಟ್ಟಿ ಕೂರದೆ ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ಮಾಡಬೇಕು. ಬೇರೆ ಜನಾಂಗಗಳಿಗೆ ಸಿಗುತ್ತಿರುವ ಮನ್ನಣೆ ಕೊಡವರಿಗೂ ಸಿಗಬೇಕು. ಸ್ವಯಂಕೃತ ಅಪರಾಧಗಳಿಂದ ಜನಾಂಗ ವಿನಾಶಕ್ಕೆ ತಲುಪುವ ಆತಂಕವಿದೆ. ಈ ಬಗ್ಗೆ ಜಾಗ್ರತೆಗೊಳ್ಳ ದಿದ್ದಲ್ಲಿ ಮುಂದೆ ದೊಡ್ಡ ಮಟ್ಟದ ಸಮಸ್ಯೆ ಎದುರಿಸಬೇಕಾಗುತ್ತದೆ. ಕೊಡವ ಜನಾಂಗ ವೈಜ್ಞಾನಿಕವಾಗಿ ಚಿಂತಿಸುವ ಸಮುದಾಯವಾಗಿದೆ ಎಂದರು.
ಹೋರಾಟದಲ್ಲಿ ರಾಜಕೀಯ ಇರಬಾರದು. ಸಂಸ್ಕೃತಿಯ ಉಳಿವು ನಮ್ಮ ಹಿತಾಸಕ್ತಿಯಾಗಿರಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಬೇರೆ ಜನಾಂಗ ವನ್ನು ಗೌರವಿಸುವುದರ ಜೊತೆಗೆ ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂದು ಕರೆ ನೀಡಿದ ಅವರು, ತಾರ್ಕಿಕ ಅಂತ್ಯದ ತನಕ ಹೋರಾಟವನ್ನು ಕೊಂಡೊಯ್ಯ ಲಾಗುವುದು. ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಉಳಿಸಬೇಕಾದ ಕರ್ತವ್ಯ ನಮ್ಮದಾಗಿದೆ ಎಂದು ಕಿವಿಮಾತನ್ನಾಡಿದರು.