ಶನಿವಾರಸಂತೆ, ನ. ೨೬: ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟಿçÃಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಆಚರಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಆಲೂರು ಸಿದ್ದಾಪುರದ ವೈದ್ಯಾಧಿಕಾರಿ ಗಳಾದ ಡಾ. ಸುಪರ್ಣ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಜಂತುಹುಳು ಹೇಗೆ ದೇಹವನ್ನು ಸೇರುತ್ತದೆ ಮತ್ತು ಅದು ಹೇಗೆ ಸೇವಿಸಿದ ಆಹಾರದ ಪೋಷಕಾಂಶಗಳನ್ನು ಹೀರಿ ವ್ಯಕ್ತಿಯಲ್ಲಿ ನಿಶ್ಯಕ್ತಿ, ಸುಸ್ತು, ಇನ್ನಿತರ ರೋಗಗಳನ್ನು ಬಾಧಿಸುತ್ತದೆ ಎಂಬುದನ್ನು ತಿಳಿಸಿದರು. ಜಂತುಹುಳು ನಿವಾರಣೆಗಾಗಿ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಆರೋಗ್ಯ ಅಧೀಕ್ಷಕ ಪ್ರವೀಣ್ ಪ್ರತಿ ವಿದ್ಯಾರ್ಥಿಗಳಿಗೆ ಅಲ್ಬೆಂಡಜೋಲ್ ಮಾತ್ರೆಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಮಂಜುನಾಥ್, ಶಿಕ್ಷಕ ಸತೀಶ್, ಆರೋಗ್ಯ ಕಾರ್ಯ ಕರ್ತೆ ಸ್ವಾತಿ, ಪ್ರಜ್ವಲ್, ಆಶಾ ಕಾರ್ಯ ಕರ್ತೆ ರೂಪ ಉಪಸ್ಥಿತರಿದ್ದರು.