* ವೀರಾಜಪೇಟೆ, ನ. ೨೫: ಸೆಂಟ್ ಆನ್ಸ್ ಪದವಿ ಕಾಲೇಜಿನ ದ್ವಿತೀಯ ಬಿಎಸ್‌ಸಿ ವಿದ್ಯಾರ್ಥಿ ಆದಿತ್ಯ ಬಿ.ಜೆ. ಭಾರತೀಯ ಯುವ ಕ್ರೀಡಾ ಒಕ್ಕೂಟದ ವತಿಯಿಂದ ಗೋವಾ ರಾಜ್ಯದಲ್ಲಿ ನಡೆದ ಆರನೇ ರಾಷ್ಟಿçÃಯ ಯುವ ಕ್ರೀಡೆ -೨೦೨೧ ರಲ್ಲಿ ಭಾಗವಹಿಸಿ ಮೊದಲ ಸ್ಥಾನವನ್ನು ಪಡೆದು ಚಿನ್ನದ ಪದಕ ಪಡೆದು ಕೊಂಡಿದ್ದಾನೆ.

ಈ ಕುರಿತು ಮಾಹಿತಿ ನೀಡಿದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ. ಫಾ. ಮದಲೈ ಮುತ್ತು ಅವರು, ವಿದ್ಯಾರ್ಥಿ ಆದಿತ್ಯ ಬಹುಮುಖ ಪ್ರತಿಭೆಯಾಗಿದ್ದು, ಸಂತ ಅನ್ನಮ್ಮ ಪಿ. ಯು. ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುವಾಗಲೂ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾನೆ. ಪ್ರಥಮ ಬಿ. ಎಸ್. ಸಿ. ಯಲ್ಲಿಯೂ ಪದವಿ ಪೂರ್ವ ಶಿಕ್ಷಣದ ರೀತಿಯಲ್ಲೇ ಅತ್ಯುನ್ನತ ಶ್ರೇಣಿಯಲ್ಲಿ ಅಂಕಗಳನ್ನು ಪಡೆದಿದ್ದು ಹಾಗೂ ಕ್ರೀಡೆಯಲ್ಲಿಯೂ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದ್ದಾರೆ. ಈತ ಹೆಗ್ಗಳ ಗ್ರಾಮದ ನಿವೃತ್ತ ಪೊಲೀಸ್ ಅಧಿಕಾರಿ ಬಿ. ಎಸ್. ಜನಾರ್ಧನ ಹಾಗೂ ಲೀಲಾವತಿ ದಂಪತಿಯರ ಪುತ್ರ.