ಕೂಡಿಗೆ, ನ. ೨೬: ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆಯಲ್ಲಿ ಪೋಷಕರ ಮತ್ತು ಪೋಷಕ ಪರಿಷತ್ತು ರಚನೆ ಮಾಡುವ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ವ್ಯವಸ್ಥಾಪಕ ಎಂ.ಬಿ. ಮೊಣ್ಣಪ್ಪ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಆಡಳಿತ ಮಂಡಳಿಯ ಖಜಾಂಚಿ ಎಂ.ಬಿ. ಜಯಂತ್ ಮಾತನಾಡಿ, ಹತ್ತನೇ ತರಗತಿಯ ವಿದ್ಯಾರ್ಥಿಗಳು ಆಸಕ್ತಿವಹಿಸಿ ಓದಿ ಕೀರ್ತಿ ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ಹಿತನುಡಿಗಳನ್ನು ನುಡಿದರು.

ಈ ಸಂದರ್ಭ ಪೋಷಕ ಪರಿಷತ್ತು ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕ ಅರುಣ್ ಕುಮಾರ್ ಶಾಲಾ ಮುಖ್ಯ ಶಿಕ್ಷಕ ದುರ್ಗೇಶ್, ವಿದ್ಯಾರ್ಥಿಗಳ ಪರಿಷತ್ತಿನ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷ ಮನು, ಶಾಲಾ ಶಿಕ್ಷಕರಾದ ಸುರೇಶ್, ಎಸ್.ಎಸ್. ಶಿವಪ್ರಸಾದ್, ಪುಷ್ಪ, ಸಿಬ್ಬಂದಿ ವರ್ಗದವರಾದ ಸುಲೋಚನ, ಹೇಮಲತಾ, ಕುಸುಮ, ಸೇರಿದಂತೆ ಪೋಷಕರು ಹಾಜರಿದ್ದರು.