ನಾಪೋಕ್ಲು, ನ. ೨೬: ನಕಲಿ ಚಿನ್ನವನ್ನು ಪಟ್ಟಣದ ಜ್ಯುವೆಲ್ಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ ಮೂವರು ವ್ಯಕ್ತಿಗಳನ್ನು ಬಂಧಿಸುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಳಕೇರಿ ಜಬ್ಬಾರ್ ಹಾಗೂ ಕೇರಳದ ಅನಾಜ್, ಆಶಿಕ್ ಬಂಧಿತ ಆರೋಪಿಗಳು. ಇವರು ಪಟ್ಟಣದ ನಂದಿ ಜ್ಯುವೆಲ್ಲರಿಯಲ್ಲಿ ನಕಲಿ ಚಿನ್ನವನ್ನು ಕಲಬೆರಕೆ ಮಾಡಿ ಗಿರವಿ ಇಡಲು ಕಾರಿನಲ್ಲಿ ಆಗಮಿಸಿ ಜ್ಯುವೆಲ್ಲರಿ ಮಾಲಿಕನಿಂದ ೨೦ ಸಾವಿರ ರೂ. ಹಣವನ್ನು ಮುಂಗಡವಾಗಿ ಪಡೆದಿದ್ದರು. ಅನುಮಾನಗೊಂಡ ಅಂಗಡಿ ಮಾಲೀಕ ಚಿನ್ನದ ಸರವನ್ನು ಪರೀಕ್ಷಿಸಿದಾಗ ೨೨ ಕ್ಯಾರೆಟ್ ಚಿನ್ನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತಾಮ್ರವನ್ನು ಕಲಬೆರಕೆ ಮಾಡಿರುವದು ಕಂಡು ಬಂತು. ಈ ಬಗ್ಗೆ ಅವರು ನಾಪೋಕ್ಲು ಠಾಣೆಯಲ್ಲಿ ದೂರು ನೀಡಿದ್ದರು.
ಇದಕ್ಕೆ ಸಂಬAಧಿಸಿದAತೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಅವರ ನಿರ್ದೇಶನದಂತೆ ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರ ನೇತೃತ್ವದಲ್ಲಿ ನಾಪೋಕ್ಲು ಪೊಲೀಸ್ ಠಾಣಾ ಉಪನಿರೀಕ್ಷಕ ಆರ್.ಕಿರಣ್, ಎಎಸ್ಐ ಕುಶಾಲಪ್ಪ, ಹೆಡ್ಕಾನ್ಸ್ ಟೆಬಲ್ಗಳಾದ
(ಮೊದಲ ಪುಟದಿಂದ) ಮೋಹನ್, ಗಣೇಶ್, ರವಿ, ಸಜಾನ್, ರಾಮಕೃಷ್ಣ, ಕಾನ್ಸ್ಟೆಬಲ್ಗಳಾದ ನವೀನ್, ಹರ್ಷ, ಆಶಿಕ್, ಗಿರೀಶ್, ಚಾಲಕ ಶರೀಫ್ ಒಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ನಾಪೋಕ್ಲು ಪಟ್ಟಣ ಸಮೀಪ ಮೂವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಹೋಂಡಾ ಅಮೇಜ್ ಕಾರು ಹಾಗೂ ಅಂದಾಜು ರೂ. ೧.೨೦ ಲಕ್ಷ ಬೆಲೆಬಾಳುವ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ದಾಖಲಾಗಿ ೨೪ ಗಂಟೆಗಳಲ್ಲಿ ಪ್ರಕರಣವನ್ನು ಬೇಧಿಸಿದ ಪೊಲೀಸರ ಕಾರ್ಯ ಕ್ಷಮತೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾರ್ವಜನಿಕರು ಅಪರಿಚಿತರಿಂದ ಯಾವದೇ ರೀತಿಯ ಚಿನ್ನಾಭರಣಗಳನ್ನು ಖರೀದಿಸಬಾರದು. ಈ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಿದ್ದಾರೆ. -ಪಿ.ವಿ.ಪ್ರಭಾಕರ್