ಕಣಿವೆ, ನ. ೨೬: ರಾಜ್ಯ ಒಕ್ಕಲಿಗರ ಸಂಘದಿAದ ಕೊಡಗು ಜಿಲ್ಲೆಯ ಒಕ್ಕಲಿಗರಿಗೆ ಯಾವುದೇ ರೀತಿಯ ಪ್ರಯೋಜನಗಳಾಗುತ್ತಿಲ್ಲ ಎಂದು ತಾಲೂಕು ಸಮಾನ ಮನಸ್ಕ ಒಕ್ಕಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕುಶಾಲನಗರದ ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆಸಿದ ತಾಲೂಕು ಸಮಾನ ಮನಸ್ಕ ಒಕ್ಕಲಿಗರು, ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ರಾಜ್ಯ ಒಕ್ಕಲಿಗರ ಚುನಾವಣೆಗೆ ಕೊಡಗಿನಿಂದ ಮತಗಳನ್ನು ಪಡೆದು ಗೆದ್ದು ಹೋಗುವವರಿಂದ ಅಥವಾ ರಾಜ್ಯ ಒಕ್ಕಲಿಗ ಸಮಾಜದಿಂದ ಯಾವುದೇ ಪ್ರಯೋಜನಗಳಾಗುತ್ತಿಲ್ಲ. ಆರ್ಥಿಕವಾಗಿ ಬಲಿಷ್ಠವಾಗಿರುವ ರಾಜ್ಯ ಒಕ್ಕಲಿಗರ ಸಂಘದಲ್ಲಿ ಹಲವು ವಿದ್ಯಾಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು, ಆಸ್ಪತ್ರೆಗಳಿವೆಯಾದರೂ ಯಾವುದೇ ಪ್ರಯೋಜನವಾಗಲಿ ಇಲ್ಲ. ಇದರ ಸೌಲಭ್ಯಗಳನ್ನು ದೊರಕಿಸಿಕೊಡು ವವರೂ ಕೂಡ ಇಲ್ಲ. ಸಂಘದಲ್ಲಿನ ಕೆಲವು ಮೇನೇಜ್‌ಮೆಂಟ್ ಸೀಟುಗಳು ಕೂಡ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಮಾರಾಟವಾಗುತ್ತಿವೆ.

ಹಾಗಾಗಿ ಈ ಬಾರಿ ಒಕ್ಕಲಿಗರ ಚುನಾವಣೆಯಲ್ಲಿ ನಾವು ಭಾಗಿಯಾಗಬೇಕಾ ಬೇಡವಾ ಎಂದು ಸದ್ಯದಲ್ಲೇ ತೀರ್ಮಾನಿಸುವುದಾಗಿ ಸಭೆಯಲ್ಲಿ ಸಮಾನ ಮನಸ್ಕರು ಚರ್ಚಿಸಿದರು.