ಡಿ. ೧೫ ರಿಂದ ಅಂರ್ರಾಷ್ಟಿçÃಯ ವಿಮಾನಯಾನ ಪುನರಾರಂಭ
ನವದೆಹಲಿ, ನ. ೨೬: ಭಾರತ ಡಿಸೆಂಬರ್ ೧೫ ರಿಂದ ಅಂರ್ರಾಷ್ಟಿçÃÃಯ ವಿಮಾನಯಾನವನ್ನು ಪುನರಾರಂಭಿಸಲು ಸಿದ್ಧವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ತಿಳಿಸಿದೆ. ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಮಾಲೋಚಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿಮಾನಯಾನ ಸಚಿವಾಲಯ ಇಂದು ಪ್ರಕಟಣೆಯಲ್ಲಿ ತಿಳಿಸಿದೆ. ಎರಡು ದಿನಗಳ ಹಿಂದಷ್ಟೇ ಅಂರ್ರಾಷ್ಟಿçÃಯ ವಿಮಾನ ಸೇವೆ ಈ ವರ್ಷಾಂತ್ಯದ ವೇಳೆಗೆ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಅವರು ಹೇಳಿದ್ದರು. ಕೋವಿಡ್ -೧೯ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ಮಾರ್ಚ್ ೨೩ ರಿಂದ ಭಾರತದಲ್ಲಿ ನಿಗದಿತ ಅಂರ್ರಾಷ್ಟಿçÃಯ ವಿಮಾನಯಾನವನ್ನು ಸ್ಥಗಿತಗೊಳಿಸಲಾಗಿತ್ತು. ಆದಾಗ್ಯೂ, ವಿಶೇಷ ಅಂತ ರ್ರಾಷ್ಟಿçÃಯ ಪ್ರಯಾಣಿಕ ವಿಮಾನಗಳು ಕಳೆದ ವರ್ಷ ಜುಲೈನಿಂದ ಸುಮಾರು ೨೮ ದೇಶಗಳೊಂದಿಗೆ ಏರ್ ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ಸಂಚರಿಸುತ್ತಿವೆ.
ಭಾರತವನ್ನು ಒಗ್ಗೂಡಿಸುವಲ್ಲಿ ಸಂವಿಧಾನ ಪಾತ್ರ ಮಹತ್ವದ್ದು:ಸಿಎಂ
ದಾವಣಗೆರೆ, ನ. ೨೬: ಭಾರತವನ್ನು ಒಗ್ಗೂಡಿಸುವಲ್ಲಿ ಸಂವಿಧಾನ ಮಹತ್ವದ ಪಾತ್ರವಹಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಹೇಳಿದ್ದಾರೆ. ಇಂದು ಸಂವಿಧಾನ ದಿನದ ಅಂಗವಾಗಿ ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಓದಿದ ನಂತರ ಮಾತನಾಡಿದ ಸಿಎಂ, ಈ ದಿನ ಸಂವಿಧಾನವನ್ನು ಅಂಗೀಕರಿಸಿದ ಮಹತ್ವದ ದಿನ. ಭಾರತದ ಸಂವಿಧಾನ ವಿಶ್ವದ ಅತ್ಯಂತ ಶ್ರೇಷ್ಠ ಸಂವಿಧಾನ. ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಚಟುವಟಿಕೆಗಳಿಗೆ ಸ್ವಾತಂತ್ರ್ಯ ಜೊತೆಗೆ ಸಮಾನತೆ, ಭ್ರಾತೃತ್ವ, ಪರಸ್ಪರ ಪ್ರೀತಿ ವಿಶ್ವಾಸ, ಎಲ್ಲ ಧರ್ಮೀಯರ ಬಗ್ಗೆ ಗೌರವ ಮುಂತಾದ ಅಂಶಗಳನ್ನು ಈ ಸಂವಿಧಾನ ಒಳಗೊಂಡಿದೆ. ದೇಶದ ಉತ್ತಮ ಭವಿಷ್ಯಕ್ಕಾಗಿ ಈ ಸಂವಿಧಾನ. ರಚನೆಯಾಗಿದೆ ಎಂದು ತಿಳಿಸಿದರು. ದೇಶವನ್ನು ಮುನ್ನೆಡೆಸುವ ಬಗೆ, ಕಾನೂನು, ಹಕ್ಕು, ಕರ್ತವ್ಯಗಳ ಬಗ್ಗೆ ತೀರ್ಮಾನಿಸಲು ಸಂವಿಧಾನದ ಸಮಿತಿ ರಚನೆಯಾಯಿತು. ಡಾ. ಅಂಬೇಡ್ಕರ್ರವರ ನೇತೃತ್ವ ಸಮಿತಿ ನೀಡಿರುವ ಶ್ರೇಷ್ಠ ಸಂವಿಧಾನ. ಒಂದು ಪಕ್ಷ ಸಂವಿಧಾನವಿಲ್ಲದಿದ್ದರೆ ಭಾರತ ದೇಶದ ಐಕ್ಯತೆ, ಅಖಂಡತೆ, ನಾಗರಿಕ ಹಕ್ಕುಗಳು ಯಾವುದು ಕೂಡ ನೋಡಲು ಸಾಧ್ಯವಾಗುತ್ತಿರಲಿಲ್ಲ. ಈ ದೇಶವನ್ನು ಒಗ್ಗೂಡಿಸುವಲ್ಲಿ ಸಂವಿಧಾನ ಮಹತ್ವದ ಪಾತ್ರ ವಹಿಸಿದೆ. ನಮ್ಮನ್ನಾಳಿದ ಬ್ರಿಟೀಷರಿಗೂ ಕೂಡ ಲಿಖಿತ ಸಂವಿಧಾನವಿಲ್ಲ. ಇಂಗ್ಲೆಡಿನಲ್ಲಿರುವ ಇವತ್ತಿನ ವ್ಯಕ್ತಿ ಸ್ವಾತಂತ್ರ್ಯ, ಕಾನೂನುಗಳನ್ನು ನೋಡಿದಾಗ ನಮ್ಮ ದೇಶದ ಕಾನೂನುಗಳು ಅತ್ಯಂತ ಶ್ರೇಷ್ಠವಾಗಿವೆ. ಬದುಕು, ತತ್ವಗಳು ಶಿಕ್ಷಣ, ಆಡಳಿತ, ತಂತ್ರಜ್ಞಾನದಲ್ಲಿಯೂ ಸಾಕಷ್ಟು ಬದಲಾವಣೆಯಾಗುತ್ತದೆ. ಬದಲಾವಣೆಗೆ ಅನುಗುಣವಾಗಿ ಸ್ಪಂದಿಸಲು ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟು ದೇಶದ ಸಂವಿಧಾನದಲ್ಲಿ ಜೀವಂತಿಕೆಯಿAದಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಭಾರೀ ಶಬ್ದ; ಬೆಚ್ಚಿಬಿದ್ದ ಜನತೆ
ಬೆಂಗಳೂರು, ನ. ೨೬: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ನಿಗೂಢ ಶಬ್ದ ಕೇಳಿಬಂದಿದ್ದು, ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಹಲವರು ಬೆಚ್ಚಿಬಿದ್ದ ಘಟನೆ ನಡೆದಿದೆ. ಬೆಂಗಳೂರಿನ ಕೆಂಗೇರಿ, ಕಗ್ಗಲೀಪುರ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಭೂಮಿ ಕಂಪಿಸಿದAತಹ ಅನುಭವ ಆಗಿದ್ದು, ಮಾತ್ರವಲ್ಲದೇ ಭಾರಿ ಶಬ್ಧಕೂಡ ಕೇಳಿಬಂದಿದೆ. ನಗರದ ಪಶ್ಚಿಮ ಭಾಗದಲ್ಲಿ ಅನೇಕ ಬೆಂಗಳೂರಿಗರಿಗರಿಗೆ ಕಂಪನದ ಅನುಭವಾಗಿದ್ದು, ಸ್ಥಳೀಯರು ದೊಡ್ಡ ಸ್ಫೋಟದ ಶಬ್ದವನ್ನು ಕೇಳಿದ್ದಾರೆ. ಭೂಮಿ ಕಂಪಿಸಿದAತ ಅನುಭವದಿಂದಾಗಿ ಬೆಂಗಳೂರಿನ ಜನರು ಬೆಚ್ಚಿ ಬಿದ್ದಿದ್ದಾರೆ. ಕೆಲವೆಡೆ ಮನೆಯಿಂದ ಹೊರ ಓಡಿ ಬಂದAತ ಜನರು, ಆತಂಕದಲ್ಲಿ ಕೆಲ ಕಾಲ ಕಳೆಯುವಂತೆ ಆಗಿದೆ. ಭೂಕಂಪನ ವಿಚಾರ ಭಾರೀ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಈ ಸಂಬAಧ ರಾಜ್ಯ ಭೂಕಂಪನ ಮಾಪನ ಇಲಾಖೆ ಕೂಡ ಪ್ರತಿಕ್ರಿಯೆ ನೀಡಿದ್ದು, ನಗರದಲ್ಲಿ ಯಾವುದೇ ರೀತಿಯ ಭೂಕಂಪನ ದಾಖಲಾಗಿಲ್ಲ. ಯಾವುದೇ ಭೂಕಂಪ ಅಥವಾ ಅಂತಹ ಚಟುವಟಿಕೆ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಯಾವುದೇ ಭೂಕಂಪ ಅಥವಾ ಅಂತಹ ಚಟುವಟಿಕೆ ವರದಿಯಾಗಿಲ್ಲ. ಆದರೆ ಸ್ಥಳೀಯ ನಿವಾಸಿಗಳಿಂದ ಸೌಮ್ಯವಾದ ಕಂಪನಗಳಿಗೆ ಸಂಬAಧಿಸಿದ ಧ್ವನಿಯ ವರದಿಗಳನ್ನು ಸ್ವೀಕರಿಸಲಾಗಿದೆ. ಬೆಂಗಳೂರಿನ ಹೆಮ್ಮಿಗೆಪುರ, ಕೆಂಗೇರಿ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ ಮತ್ತು ಕಗ್ಗಲಿಪುರದಿಂದ ಬೆಳಿಗ್ಗೆ ೧೧.೫೦ ರಿಂದ ಮಧ್ಯಾಹ್ನ ೧೨.೧೫ ರವರೆಗೆ ವರದಿಯಾಗಿದೆ. ಹೇಳಲಾದ ಅವಧಿಯಲ್ಲಿ ಯಾವುದೇ ಭೂಕಂಪನ ಅಥವಾ ಸಂಭವನೀಯ ಭೂಕಂಪದ ಸಂಕೇತಗಳು ಮಾಪನದಲ್ಲಿ ದಾಖಲಾಗಿಲ್ಲ.
ಸುಡಾನ್ನಲ್ಲಿ ಸಂಘರ್ಷ: ೪೩ ಜನ ಸಾವು-೪೬ ಹಳ್ಳಿಗಳು ಭಸ್ಮ
ಖರ್ಟೌಮ್, ನ. ೨೬: ಸುಡಾನ್ನ ಪಶ್ಚಿಮ ದರ್ಪುರ್ ಪ್ರದೇಶದಲ್ಲಿ ಅರಬ್ ದನಗಾಹಿಗಳು ಮತ್ತು ಮಿಸ್ಸೆರಿಯಾ ಜೆಬೆಲ್ ರೈತರ ನಡುವೆ ನಡೆದ ಸಂಘರ್ಷದಲ್ಲಿ ಕನಿಷ್ಟ ೪೩ ಜನ ಮೃತಪಟ್ಟಿದ್ದು, ೧,೦೦೦ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ನವೆಂಬರ್ ೧೭ ರಂದು ಚಾಡ್ನ ಗಡಿಗೆ ಸಮೀಪವಿರುವ ಒರಟಾದ ಜೆಬೆಲ್ ಮೂನ್ ಪರ್ವತಗಳಲ್ಲಿ ಶಸ್ತçಸಜ್ಜಿತ ಅರಬ್ ದನಗಾಹಿಗಳ ನಡುವೆ ಹಿಂಸಾಚಾರ ಭುಗಿಲೆದ್ದಿತು ಎಂದು ವೆಸ್ಟ್ ದರ್ಫುರ್ ರಾಜ್ಯದ ಸುಡಾನ್ನ ಮಾನವೀಯ ನೆರವು ಕಮಿಷನರ್ ಒಮರ್ ಅಬ್ದೆಲ್ಕರಿಮ್ ಅವರು ಹೇಳಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ, ಕನಿಷ್ಟ ೪೩ ಜನರು ಕೊಲ್ಲಲ್ಪಟ್ಟಿದ್ದಾರೆ, ೪೬ ಹಳ್ಳಿಗಳನ್ನು ಸುಟ್ಟುಹಾಕಲಾಗಿದೆ ಮತ್ತು ಲೂಟಿ ಮಾಡಲಾಗಿದೆ. ಈಗ ನಡೆಯುತ್ತಿರುವ ಹೋರಾಟದಲ್ಲಿ ಅಪರಿಚಿತ ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಕ್ಕಳು ಸೇರಿದಂತೆ ಬಹಳಷ್ಟು ಜನರು ನಾಪತ್ತೆಯಾಗಿದ್ದಾರೆ ಎಂದು ಸುಡಾನ್ ಅಧಿಕಾರಿಗಳು ಹೇಳಿದ್ದಾರೆ. ಸುಡಾನ್ನ ಮಾಜಿ ಅಧ್ಯಕ್ಷ ಓಮರ್ ಅಲ್ ಬಶೀರ್ ಅವರ ಕಾಲಾವಧಿ ೨೦೦೩ ರಿಂದಲೂ ಈ ನಾಗರಿಕ ಸಂಘರ್ಷ ನಡೆಯುತ್ತಿದೆ. ಆದರೆ, ಇನ್ನೂ ಕೆಲ ಸಂಘಟನೆಗಳು ಒಪ್ಪಂದಕ್ಕೆ ಸಹಿಹಾಕಿಲ್ಲ. ಜೆಬೆಲ್ ಮೂನ್ ಪ್ರದೇಶದಲ್ಲಿ ಸುಮಾರು ೬೬,೫೦೦ ಮಂದಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದು, ೪೩,೦೦೦ಕ್ಕೂ ಅಧಿಕ ಜನರಿಗೆ ಮಾನವೀಯ ನೆಲೆಯಲ್ಲಿ ನೆರವಿನ ಅಗತ್ಯವಿದೆ ಎಂದು ೨೦೨೧ರ ವರದಿ ಹೇಳಿತ್ತು.
ಬೆಂಗಳೂರಿನಲ್ಲಿ ಐವರು ಬಾಂಗ್ಲಾ ಅಕ್ರಮ ವಲಸಿಗರು ಸಿಸಿಬಿ ವಶಕ್ಕೆ
ಬೆಂಗಳೂರು, ನ. ೨೬: ಬೆಂಗಳೂರಿನಲ್ಲಿ ಐವರು ಅಕ್ರಮ ವಲಸಿಗರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇಂದು ಸಿಸಿಬಿ ಪೊಲೀಸರು ಐದು ಜನ ಬಾಂಗ್ಲಾ ಅಕ್ರಮ ವಲಸಿಗರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ವಲಸಿಗರ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಿದೆ. ಅಕ್ರಮ ವಲಸಿಗರ ಪಟ್ಟಿ ಮಾಡಲು ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಲಾಗಿದೆ. ಅವರ ಪಟ್ಟಿ ಮಾಡಿ ಅವರನ್ನು ಡಿಟೆಂಷನ್ ಸೆಂಟರ್ಗೆ ತಂದು ಹಾಕಲು ಸೂಚನೆ ನೀಡಲಾಗಿದೆ. ಅಕ್ರಮ ವಲಸಿಗರು ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ ಎಂದು ತಿಳಿಸಿದರು. ಅಂತೆಯೇ ಅವರು ಹೇಗೆ ಬಂದಿದ್ದಾರೆ, ಯಾರು ಕರೆದುಕೊಂಡು ಬಂದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅಕ್ರಮ ವಲಸಿಗರು ಕಟ್ಟಡ ಕೆಲಸ, ಕಾಫಿ ಎಸ್ಟೇಟ್ ಕೆಲಸಕ್ಕೆ ಬಂದಿದ್ದಾರೆ. ಅವರನ್ನು ಯಾರು ಕರೆದುಕೊಂಡು ಬರುತ್ತಾರೆ ಎಂಬುದನ್ನು ತಿಳಿಯಲು ತನಿಖೆ ಮಾಡಲಾಗುವುದು. ಅವರನ್ನು ವಶಕ್ಕೆ ಪಡೆದು ಬಾಯಿ ಬಿಡಿಸುವ ಕೆಲಸ ಆಗಲಿದೆ. ಅಕ್ರಮ ವಲಸಿಗರಿಗೆ ದಾಖಲೆ ಕೊಡಿಸುವ ಜಾಲವೇ ಇದೆ. ಅವರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸಿಗುತ್ತದೆ ಆದರೆ ನಮ್ಮ ಬಡವರಿಗೆ ಸಿಗುತ್ತಿಲ್ಲ. ಕರ್ನಾಟಕದಲ್ಲಿ ಅಲ್ಲ, ಅಸ್ಸಾಂ ಭಾಗದಲ್ಲಿ ಇಂತಹ ಜಾಲ ಇದೆ. ಅಂತಹವರನ್ನು ಹೊರಗೆ ಕಳುಹಿಸುವ ಪ್ರಯತ್ನ ನಡೆಯುತ್ತಿದೆ. ವೀಸಾ ಅವಧಿ ಮುಗಿದರೂ ಇಲ್ಲಿಯೇ ಇರುವವರನ್ನು ಬಂಧಿಸಬೇಕು, ಇಲ್ಲವೇ ಹೊರ ಹಾಕಬೇಕು. ಬಾಂಗ್ಲಾದೇಶದ ಅಕ್ರಮ ವಲಸಿಗರು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದ್ದಾರೆ. ಈ ವಲಸಿಗರು ಕಸ ವಿಲೇವಾರಿ ಘಟಕಗಳಲ್ಲಿ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ. ಭೂ ಮಾಲೀಕರ ಜತೆಗೆ ಮಾತನಾಡಿ ಅವರು ಶೆಡ್ ನಿರ್ಮಿಸಿಕೊಳ್ಳಲು ನೆರವು ನೀಡುತ್ತಿದ್ದಾರೆ. ಕಸ ವಿಲೇವಾರಿ ಮಾಡುವವರು ವಸತಿ ಸಂಕೀರ್ಣಗಳ ಸಮೀಪ ಅವುಗಳನ್ನು ಸುರಿಯುವ, ಬೆಂಕಿ ಹಚ್ಚಿ ಸುಡುವ ಕೆಲಸ ಮಾಡುತ್ತಿದ್ದಾರೆ.