ಸೋಮವಾರಪೇಟೆ,ನ.೨೫: ರಾಜ್ಯದ ಪ್ರತಿಷ್ಠಿತ ಸಂಘಗಳಲ್ಲಿ ಒಂದಾಗಿರುವ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ಕೊಡಗು ಜಿಲ್ಲೆಯಿಂದಲೂ ಓರ್ವರು ನಿರ್ದೇಶಕರು ಆಯ್ಕೆಯಾಗಬೇಕಿದ್ದು, ಅಂತಿಮವಾಗಿ ನಾಲ್ವರು ಕಣದಲ್ಲಿ ಉಳಿದು ಕೊಂಡಿದ್ದಾರೆ.

ಕೊಡಗು ಜಿಲ್ಲಾ ನಿರ್ದೇಶಕ ಸ್ಥಾನ(ಒಂದು ಸ್ಥಾನ)ಕ್ಕೆ ೯ ಮಂದಿ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ವಾಪಸ್ ಪಡೆಯಲು ಅವಕಾಶವಿದ್ದ ಇಂದು ೫ ಮಂದಿ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದರು. ಅಂತಿಮವಾಗಿ ಕಣದಲ್ಲಿ ನಾಲ್ವರು ಉಳಿದುಕೊಂಡಿದ್ದು,ತಾ. ೨೬ರಂದು (ಇಂದು) ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಲಾಗುವುದು.

ಅಂತಿಮವಾಗಿ ಕಣದಲ್ಲಿ ಸೋಮವಾರಪೇಟೆಯ ಹೆಚ್.ಎನ್. ರವೀಂದ್ರ ಹರಪಳ್ಳಿ, ಚೌಡ್ಲು ಗ್ರಾಮದ ಸಿ.ಕೆ. ರಾಜೀವ, ಹೆಬ್ಬಾಲೆಯ ಹೆಚ್.ಎಸ್. ಚೇತನ್, ಕೊಡ್ಲಿಪೇಟೆಯ ಕೆ.ಎನ್. ಮಂಜುನಾಥ್ ಅವರುಗಳು ಉಳಿದುಕೊಂಡಿದ್ದಾರೆ.

ನಾಮಪತ್ರ ಸಲ್ಲಿಸಿದ್ದ ವೀರಾಜಪೇಟೆಯ ಶುಭಾಷಿಣಿ, ಮಡಿಕೇರಿಯ ವಿ.ಜಿ. ಮೋಹನ್, ತಾಕೇರಿ ಗ್ರಾಮದ ಸುರೇಂದ್ರ, ಹಾನಗಲ್ಲು ಗ್ರಾಮದ ಹೆಚ್.ವಿ. ಮಿಥುನ್‌ಕುಮಾರ್, ಕೊಡ್ಲಿಪೇಟೆಯ ತೇಜಕುಮಾರ್ ಅವರುಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದುಕೊಂಡಿದ್ದಾರೆ.

ಡಿ.೧೨ಕ್ಕೆ ಚುನಾವಣೆ: ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟವಾಗಿದ್ದು, ತಾ. ೨೬ರಂದು ಅಭ್ಯರ್ಥಿಗಳಿಗೆ ಚಿಹ್ನೆ ನಿಗದಿ, ಡಿ.೧೨ರಂದು ಬೆಳಿಗ್ಗೆ ೭ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಮಡಿಕೇರಿ ಹಾಗೂ ಸೋಮವಾರಪೇಟೆಯಲ್ಲಿ ಮತದಾನ, ಡಿ.೧೫ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.