ಮಡಿಕೇರಿ, ನ. ೨೫: ಮಡಿಕೇರಿ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಮಡಿಕೇರಿ ಉಪ ವಿಭಾಗ ಆವರಣದಲ್ಲಿ ತಾ. ೨೬ ರಂದು ಬೆಳಿಗ್ಗೆ ೧೧ ಗಂಟೆಯಿAದ ೧ ಗಂಟೆಯವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಆದ್ದರಿಂದ ಗ್ರಾಹಕರು ಜನಸಂಪರ್ಕ ಸಭೆಗೆ ಹಾಜರಾಗಿ ಕುಂದುಕೊರತೆ ನಿವಾರಿಸಿಕೊಳ್ಳುವಂತೆ ಮಡಿಕೇರಿ ಉಪ ವಿಭಾಗದ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಅವರು ಕೋರಿದ್ದಾರೆ.