ವೀರಾಜಪೇಟೆ, ನ. ೨೫: ಕನಕದಾಸರ ಜಯಂತಿ ಅಂಗವಾಗಿ ವೀರಾಜಪೇಟೆ ತಾಲೂಕು ಕಚೇರಿ ಸಂಭಾAಗಣದಲ್ಲಿ ತಹಶೀಲ್ದಾರ್ ಆರ್. ಯೋಗಾನಂದ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿ, ಕನಕದಾಸರು ಜಾತಿ ವಿಚಾರದ ಬಗ್ಗೆ ಹೋರಾಟ ನಡೆಸಿದ್ದರು, ಸಾಹಿತ್ಯದ ಬಗ್ಗೆ ಹೆಚ್ಚು ಅಭಿಮಾನ ಇಟ್ಟುಕೊಂಡAತಹ ಮಹಾನ್ ದಾಸರ ಆದರ್ಶಗಳನ್ನು ನಾವುಗಳು ಪಾಲಿಸಬೇಕು ಎಂದರು. ಈ ಸಂದರ್ಭ ತಾಲೂಕು ಕಚೇರಿಯ ಶಿರಸ್ತೆದಾರ ಪ್ರದೀಪ್ ಕುಮಾರ್, ಹೆಚ್.ಕೆ. ಪೊನ್ನು, ಅಣ್ಣು ನಾಯಕ್, ಸಿಬ್ಬಂದಿಗಳಾದ ಮಂಜುನಾಥ ಮತ್ತು ಇತರರು ಹಾಜರಿದ್ದರು.ಶನಿವಾರಸಂತೆ: ಶನಿವಾರಸಂತೆ ಚೆಸ್ಕಾಂ ಶಾಖಾ ಕಚೇರಿಯಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಶಾಖಾಧಿಕಾರಿ ಹೇಮಂತ್ ಕುಮಾರ್, ಮೇಲ್ವಿಚಾರಕ ಹೆಚ್.ಡಿ. ಲೋಕೇಶ್ ಹಾಗೂ ಸಿಬ್ಬಂದಿ ಇದ್ದರು.