ಮಡಿಕೇರಿ, ನ. ೨೪: ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಸದಸ್ಯರುಗಳ ಚುನಾವಣೆಗಾಗಿ ಚುನಾವಣಾ ಕ್ಷೇತ್ರವನ್ನು ನಿರ್ಧರಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದ ಬದಲಾಗಿ ಇದೀಗ ಸರಕಾರದ ಹೊಸ ಆದೇಶದಂತೆ ರಚಿಸಲಾಗಿರುವ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ವಹಿಸಲಾಗಿದೆ.

ಈ ಆಯೋಗಕ್ಕೆ ಅಧ್ಯಕ್ಷರನ್ನಾಗಿ ಸರಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಂ. ಲಕ್ಷಿö್ಮ ನಾರಾಯಣ ಅವರನ್ನು ನೇಮಿಸಲಾಗಿದೆ. ಈ ಆಯೋಗವು ಈಗಾಗಲೇ ಬೆಂಗಳೂರಿ ನಲ್ಲಿ ಕಾರ್ಯಾರಂಭವನ್ನೂ ಮಾಡಿದೆ. ಇದೀಗ ಈ ಆಯೋಗದ ರಚನೆ ಹಾಗೂ ಆಯೋಗದ ಅಧಿಕಾರಿಗಳು ಮತ್ತು ಪ್ರಧಾನ ಕಾರ್ಯಗಳ ಬಗ್ಗೆ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಕುರಿತಾಗಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿ ಡಾ. ಎಂ.ಆರ್. ಏಕಾಂತಪ್ಪ ಅವರು ತಾ. ೧೭ ರಂದು ಹೊರಡಿಸಿರುವ ಆದೇಶದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಯನ್ನು ನೀಡಲಾಗಿದೆ.

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಪ್ರಕಾರ್ಯಗಳು ಇಂತಿವೆ

ಹಿAದಿನ ಜನಗಣತಿಯ ಜನಸಂಖ್ಯೆಯನ್ನಾಧರಿಸಿ ಗ್ರಾಮ ಪಂಚಾಯಿತಿ,

(ಮೊದಲ ಪುಟದಿಂದ) ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಚುನಾಯಿಸಬೇಕಾದ ಒಟ್ಟು ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸುವುದಕ್ಕಾಗಿ ಸರಕಾರಕ್ಕೆ ಶಿಫಾರಸ್ಸಿನ ವರದಿ ಸಲ್ಲಿಸುವುದು.

ಹಿಂದಿನ ಜನಗಣತಿಯ ಜನಸಂಖ್ಯೆಯನ್ನಾಧರಿಸಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಚುನಾಯಿಸಬೇಕಾದ ಅಭ್ಯರ್ಥಿಗಳಿಗೆ ವಾರ್ಡ್ ಮತ್ತು ಕ್ಷೇತ್ರಗಳ ಗಡಿಗಳನ್ನು ನಿರ್ಧರಿಸುವ ಬಗ್ಗೆ ಸೂಕ್ತ ಶಿಫಾರಸ್ಸನ್ನು ಸರಕಾರಕ್ಕೆ ಸಲ್ಲಿಸುವುದು.

ಕ್ಷೇತ್ರಗಳ ಜನಸಂಖ್ಯೆಯನ್ನು ನಿರ್ಧರಿಸುವಾಗ ಸಾಧ್ಯವಾಗುವಷ್ಟರ ಮಟ್ಟಿಗೆ ಸಮಾನವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು. ಹಾಗೂ ಚುನಾವಣಾ ಕ್ಷೇತ್ರಗಳು ಕಾರ್ಯಸಾದುವಾಗುವಷ್ಟರ ಮಟ್ಟಿಗೆ ಭೌಗೋಳಿಕವಾಗಿ ಸಮೀಪ ಪ್ರದೇಶಗಳನ್ನು ಒಳಗೊಂಡಿರುವುದನ್ನು ಖಚಿತಪಡಿಸಿಕೊಂಡು ಸರಕಾರಕ್ಕೆ ಶಿಫಾರಸ್ಸು ಸಲ್ಲಿಸುವುದು.

ಸರಕಾರವು ಆಗಿಂದಾಗ್ಗೆ ವಹಿಸುವ ಇತರೆ ಜವಾಬ್ದಾರಿಗಳನ್ನು ಸಹ ಆಯೋಗ ನಿರ್ವಹಿಸಬೇಕು.

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯದ ಆಯೋಗವು ಅದರ ಸ್ವಂತ ಕಾರ್ಯವಿಧಾನವನ್ನು ನಿರ್ಧರಿಸುತ್ತದೆ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸುವುದಕ್ಕೆ ಸಂಬAಧಿಸಿದAತೆ ದಾವೆ ವಿಚಾರಣೆಯನ್ನು ನಡೆಸುವಾಗ ಸಿವಿಲ್ ಪ್ರಕ್ರಿಯೆ ಸಂಹಿತೆ ೧೯೦೮(೧೯೦೮ ರ ಕೇಂದ್ರ ಅಧಿನಿಯಮ ಗಿ) ರಡಿಯಲ್ಲಿ ಸಿವಿಲ್ ನ್ಯಾಯಾಲಯದ ಎಲ್ಲಾ ಅಧಿಕಾರಗಳನ್ನು ಹೊಂದಿರುತ್ತದೆ. ಆಯೋಗದ ಪರ್ಯಾಲೋಚನೆಗೆ ಅವಶ್ಯವಿರುವ ವಿಷಯಕ್ಕೆ ಸಂಬAಧಿಸಿದAತೆ ಉಪಯುಕ್ತವಾಗಬಹುದೆಂದು ಅಥವಾ ಸಂಬAಧಪಡಬಹುದೆAದು ಅಭಿಪ್ರಾಯಪಡುವಂತಹ

ಅಂಶಗಳು ಅಥವಾ ವಿಷಯಗಳ ಕುರಿತ ಯಾವುದೇ ಮಾಹಿತಿಯನ್ನು ಒದಗಿಸುವಂತೆ ಯಾರೇ ವ್ಯಕ್ತಿಯನ್ನು ಅಗತ್ಯಪಡಿಸುವ ಅಧಿಕಾರವನ್ನು ಹೊಂದಿರುತ್ತದೆ.

ಈ ತಿದ್ದುಪಡಿಯಲ್ಲಿ ತಾತ್ಕಾಲಿಕ ಉಪಬಂಧವನ್ನು ಸೇರಿಸಲಾಗಿದ್ದು, ಇದರನ್ವಯ ಈ ಅಧಿನಿಯಮವು ಜಾರಿಗೆ ಬಂದ ದಿನಾಂಕ ೧೮.೦೯.೨೦೨೧ ರಂದು ಅಸ್ತಿತ್ವದಲ್ಲಿ ಇದ್ದ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳ ಕ್ಷೇತ್ರಗಳ ಎಲ್ಲಾ ಸೀಮಾ ನಿರ್ಣಯ ಮತ್ತು ಕ್ಷೇತ್ರಗಳ ಮೀಸಲಾತಿ ಹಾಗೂ ಸಂಬAಧಪಟ್ಟ ಅಧಿಸೂಚನೆಗಳು ರದ್ದಾಗಿರುತ್ತವೆ.