ಮಡಿಕೇರಿ, ನ. ೨೫: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ೩೧ನೇ ವರ್ಷದ “ಕೊಡವ ನ್ಯಾಷನಲ್ ಡೇ” ತಾ. ೨೬ ರಂದು (ಇಂದು) ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆಯಲಿದೆ.

ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕೊಡವ ರಾಷ್ಟಿçÃಯ ದಿನಾಚರಣೆಯಲ್ಲಿ ಕೊಡವರ ಹಿತಾಸಕ್ತಿ ಕಾಪಾಡುವ ಮಹತ್ವದ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಕೊಡವರನ್ನು ಬುಡಕಟ್ಟು ಜನಾಂಗವೆAದು ಗುರುತಿಸಬೇಕು, ಸಂವಿಧಾನದ ೩೪೦ ಮತ್ತು ೩೪೨ನೇ ವಿಧಿಯಡಿಯಲ್ಲಿ ಕೊಡವ ಬುಡಕಟ್ಟು ಜನಾಂಗಕ್ಕೆ ಎಸ್‌ಟಿ ಟ್ಯಾಗ್ ನೀಡಬೇಕು, ಸಂವಿಧಾನದ ೩೭೧ನೇ ವಿಧಿಯಡಿಯಲ್ಲಿ ಕೊಡವ ಲ್ಯಾಂಡ್‌ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮಾನ್ಯತೆ ನೀಡಬೇಕು, ಆರ್ಟಿಕಲ್ ೨೫ ಮತ್ತು ೨೬ರ ಅಡಿಯಲ್ಲಿ ನಮ್ಮ "ಧಾರ್ಮಿಕ ಸಂಸ್ಕಾರ ಗನ್"ಗೆ ಸಂವಿಧಾನದ ರಕ್ಷಣೆ ಘೋಷಿಸಬೇಕು, ಸಂವಿಧಾನದ ೮ನೇ ಶೆಡ್ಯೂಲ್‌ನಲ್ಲಿ ಕೊಡವ ಭಾಷೆಯನ್ನು ಸೇರಿಸಬೇಕು, ಕೊಡವ ಜಾನಪದ ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೋದ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಪರಿಗಣಿಸಬೇಕು ಸೇರಿದಂತೆ ವಿವಿಧ ಹಕ್ಕೋತ್ತಾಯಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಗಮನ ಸೆಳೆಯುವ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ನಾಚಪ್ಪ ಮಾಹಿತಿ ನೀಡಿದ್ದಾರೆ.