ಗೋಣಿಕೊಪ್ಪಲು, ನ. ೨೩: ಹುದಿಕೇರಿ ಸಮೀಪ ಬೇಗೂರು ಬೊಳ್ಳಿಯಂಗಡ ಐನ್‌ಮನೆಯಲ್ಲಿ ಹುತ್ತರಿ ಹಬ್ಬ ಆಚರಿಸಲಾಯಿತು. ಸ್ಥಳೀಯ ಪೂಳೆಮಾಡು ಈಶ್ವರ ದೇವಸ್ಥಾನದಲ್ಲಿ ಮೊದಲು ದೇವರ ಕದಿರು ತೆಗೆದ ನಂತರ ಭಕ್ತಾದಿಗಳು ತಮ್ಮ ಮನೆಗೆ ತೆರಳಿ ತಮ್ಮ ಗದ್ದೆಯಲ್ಲಿ ಬೆಳೆದ ಕದಿರು ತೆಗೆದು ಹುತ್ತರಿ ಆಚರಣೆ ಮಾಡುವದು ಮೊದಲಿನಿಂದಲೂ ನಡೆದು ಬಂದಿದೆ. ಬೊಳ್ಳಿಯಂಗಡ ಐನ್‌ಮನೆಯ ಹಿರಿಯರಾದ ಸಾಬು ತಮ್ಮಯ್ಯ ನೇತೃತ್ವದಲ್ಲಿ ಕುಟುಂಬಸ್ಥರ ಗದ್ದೆಯಲ್ಲಿ ಪೂಜೆ ಸಲ್ಲಿಸಿ ಕದಿರು ತೆಗೆಯಲಾಯಿತು.
ಬೊಳ್ಳಿಯಂಗಡ ಕುಟ್ಟಪ್ಪ (ಗಪುö್ಪ), ಬೊಳ್ಳಿಯಂಗಡ ದಾದೂ ಪೂವಯ್ಯ, ಪೂಣಚ್ಚ, ರಿಯಾ ಅಕ್ಕಮ್ಮ, ಸುಮಾ ದಾದು, ಕುಟುಂಬ ಸದಸ್ಯರು ಒಳಗೊಂಡAತೆ ಕಾರ್ಮಿಕರು ಹುತ್ತರಿ ಆಚರಣೆಯಲ್ಲಿ ಭಾಗವಹಿಸಿದ್ದರು.