ನಾಪೋಕ್ಲು, ನ. ೨೪: ನರಿಯಂದಡದಲ್ಲಿ ತಾ. ೨೩ ರ ರಾತ್ರಿ ಸುರಿದ ಭಾರಿ ಮಳೆಗೆ ನರಿಯಂದಡ ಸಮೀಪದ ಪಾರಾಣೆ - ಚೆಯ್ಯಂಡಾಣೆ ಮುಖ್ಯ ರಸ್ತೆಯ ಶಾನೂಬೋಗರ ಲೋಕೇಶ್ ಎಂಬವರ ಮನೆಯ ಬಳಿಯಲ್ಲಿ ಬರೆ ಜರಿದು ಮಣ್ಣು ರಸ್ತೆಯಲ್ಲಿ ತುಂಬಿದ್ದು ಈ ರಸ್ತೆಯಲ್ಲಿ ಸಂಚಾರ ಕಡಿತಗೊಂಡಿತ್ತು. ವಾಹನಗಳು ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡ ಚೆಯ್ಯಂಡಾಣೆ ಬಿ.ಜೆ.ಪಿ. ಶಕ್ತಿ ಕೇಂದ್ರದ ಅಧ್ಯಕ್ಷ ಪೊಕ್ಕುಳಂಡ್ರ ಧನೋಜ್ ಪಂಚಾಯಿತಿ ಅಧ್ಯಕ್ಷರಿಗೆ ತಿಳಿಸಿದ ಮೇರೆಗೆ ಕೂಡಲೇ ಕಾರ್ಯಪ್ರವೃತರಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಅವರು ಜೆ.ಸಿ.ಬಿ. ತರಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇವರ ಕಾರ್ಯವನ್ನು ನಾಗರಿಕರು ಪ್ರಶಂಸಿಸಿದ್ದಾರೆ.