ಗುಡ್ಡೆಹೊಸೂರು, ನ. ೨೩: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಸಹಕಾರ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಮುರುಳಿ ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ಶಾಲಾ ಆವರಣದಲ್ಲಿ ನಡೆಯಿತು.

ಈ ಸಂದರ್ಭ ವೇದಿಕೆಯಲ್ಲಿ ಉಪಾಧ್ಯಕ್ಷ ಬಿ.ಎಸ್. ಧನಪಾಲ್ ಹಾಗೂ ನಿರ್ದೇಶಕರಾದ ಡಿ.ಎಲ್. ಮಹೇಶ್ಚಂದ್ರ, ಪಿ.ಬಿ. ಅಶೋಕ್, ಬಿ.ಎನ್. ಕಾಶಿ, ಕೆ.ಡಿ. ದಾದಪ್ಪ, ಬಿ.ಎನ್. ರಾಜಪ್ಪ, ಆರ್.ಕೆ. ಚಂದ್ರ, ಕೆ.ಜಿ. ಲೋಕನಾಥ್, ಜೆ.ಹೆಚ್. ಕೃಷ್ಣ, ಹೆಚ್.ಎನ್. ಕಮಲಮ್ಮ, ಎಸ್.ಬಿ. ಅನಿತಾ ಹಾಗೂ ಡಿ.ಸಿ.ಸಿ. ಬ್ಯಾಂಕಿನ ಅಧಿಕಾರಿ ಅಜಿತ್ ಅವರು ಉಪಸ್ಥಿತರಿದ್ದರು.

ಸಂಘದ ಮಾಜಿ ಅಧ್ಯಕ್ಷ ಎ.ವಿ. ಶಾಂತಕುಮಾರ್, ಭುವನ್, ಶಿವಕುಮಾರ್, ನಂಗಾರು ಜಗ್ಗ, ರತೀಶ್ ಮುಂತಾದವರು ಸಂಘದ ಅಭಿವೃದ್ಧಿಯ ಬಗ್ಗೆ ಆಡಳಿತ ಮಂಡಳಿಯ ನಡುವೆ ಚರ್ಚೆ ಮಾಡಿದರು. ಈ ಸಂದರ್ಭ ಮಾತನಾಡಿದ ಭುವನ್ ಸಂಘವು ಮೂರು ಶಾಖೆಗಳನ್ನು ಹೊಂದಿದ್ದು, ಮುಖ್ಯ ಶಾಖೆ ನಂಜರಾಯ ಪಟ್ಟಣದಲ್ಲಿದ್ದು, ಉಳಿದ ಎರಡು ಶಾಖೆಗಳನ್ನು ಪ್ರತ್ಯೇಕಿಸುವಂತೆ ಅಂದರೆ ಗುಡ್ಡೆಹೊಸೂರು ಮತ್ತು ವಾಲ್ನೂರು ಶಾಖೆಗಳಾಗಿ ವಿಂಗಡಿಸಿಕೊಡುವAತೆ ಮಹಾಸಭೆಯಲ್ಲಿ ಒತ್ತಾಯಿಸಲಾಯಿತು.

ಈ ಬೇಡಿಕೆಯನ್ನು ಸಂಬAಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಗಮನ ಸೆಳೆಯುವುದಾಗಿ ಅಧ್ಯಕ್ಷ ಮುರುಳಿ ಮಾದಯ್ಯ ಸಭೆಯಲ್ಲಿ ತಿಳಿಸಿದರು.

ಈ ಸಂದರ್ಭ ಸಂಘದ ವ್ಯಾಪ್ತಿಗೆ ಒಳಪಡುವ ಎಲ್ಲಾ ಶಾಲೆಯ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಅಲ್ಲದೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮೂರು ಸ್ವಸಹಾಯ ಸಂಘಗಳಿಗೆ ಬಹುಮಾನ ನೀಡಲಾಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ಧನಂಜಯ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು, ಕಳೆದ ಬಾರಿ ಶೇ. ೧೦ ಡಿವಿಡೆಂಡ್ ನೀಡಲಾಗಿತ್ತು. ಆದರೆ ಈ ಬಾರಿ ಲಾಭದಲ್ಲಿ ಶೇ. ೧೨ ಡಿವಿಡೆಂಟ್ ನೀಡಲು ನಿರ್ಧರಿಸಲಾಯಿತು.

ಸಂಘವು ಒಟ್ಟು ೪೫ ಲಕ್ಷ ಹಣದ ಲಾಭದಲ್ಲಿದೆ. ಸಂಘವು ಒಟ್ಟು ೨,೧೦೦ ಮಂದಿ ಸದಸ್ಯರನ್ನು ಹೊಂದಿದೆ.