ಕಣಿವೆ, ನ. ೨೪ : ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಅಳುವಾರದಲ್ಲಿರುವ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಸರ್ಕಾರದ ಅವಕೃಪೆ ಯಿಂದಾಗಿ ಆರಂಭಕ್ಕೂ ಮುನ್ನವೇ ಮುಚ್ಚುವ ಹಂತ ತಲುಪಿದೆ ಎನ್ನಲಾಗುತ್ತಿದೆ. ಬೀದರ್‌ನಲ್ಲಿರುವ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ದೊಡ್ಡ ಅಳುವಾರದ ಸಂಸ್ಥೆಗೆ ಈ ಕುರಿತಾಗಿ ಮಾಹಿತಿ ರವಾನೆಯಾಗಿದೆ ಎಂದು ತಿಳಿದು ಬಂದಿದೆ. ಸುಮಾರು ೯೦ ಎಕರೆ ವಿಶಾಲ ವಿಸ್ತೀರ್ಣದಲ್ಲಿ ೨೦೦೭ - ೨೦೦೮ ರಲ್ಲಿ ತಲೆಎತ್ತಿದ್ದ ಈ ಸಂಸ್ಥೆ ಕೊಡಗು ಜಿಲ್ಲೆಯ ಉನ್ನತ ಶಿಕ್ಷಣ ರಂಗಕ್ಕೆ ಗರಿ ಮೂಡಿಸಿ ದಂತಿತ್ತು. ಇದೀಗ ಬಹುದೊಡ್ಡ ಸಂಸ್ಥೆಯೊAದು ಜಿಲ್ಲೆಯಿಂದ ಕೈಬಿಟ್ಟು ಹೋಗಲು ಅಣಿಯಾಗುತ್ತಿರುವುದು ಜಿಲ್ಲೆಯ ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಗಿದೆ.

೨೦೦೭ - ೨೦೦೮ ರ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ದೊಡ್ಡ ಅಳುವಾರದಲ್ಲಿ ತಲೆ ಎತ್ತಿ ನಿಲ್ಲ ಬೇಕಿದ್ದ ಈ ವನ್ಯಜೀವಿ ಹಾಗೂ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ೮ ಕೋಟಿ ಅನುದಾನವನ್ನು ಮೀಸಲಿಡಲಾಗಿತ್ತು. ಈಗಾಗಲೇ ಬಿಡುಗಡೆಯಾದ ರೂ. ೨-೫೦ ಕೋಟಿ ಹಣದಲ್ಲಿ ಸಂಶೋಧನಾ ಸಂಸ್ಥೆಯ ಕಚೇರಿ, ಸಂಶೋಧನಾ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯ ಕಟ್ಟಡ ಹಾಗೂ ೮೯.೪೬ ಎಕರೆ ವಿಶಾಲ ವಿಸ್ತೀರ್ಣದಲ್ಲಿ ಸುಮಾರು ೨೩೬೫ ಮೀಟರ್‌ಗಳಷ್ಟು ದೂರದ ತಡೆಗೋಡೆ ನಿರ್ಮಿಸಲಾಗಿತ್ತು. ಹಾಗೆಯೇ ಸಂಶೋಧನಾ ಸಂಸ್ಥೆಗೆ ಓರ್ವ ನಿರ್ದೇಶಕರು ಹಾಗೂ ಮೂಲವೇತನ ಪಡೆವ ಓರ್ವ ಸಹಾಯಕ ಸಿಬ್ಬಂದಿ ಮತ್ತು ಪ್ರಯೋಗಾಲಯದ ನುರಿತ ತಜ್ಞರ ನೇಮಕ ಮಾಡಿದ್ದು ಹೊರತುಪಡಿಸಿ ೧೪ ವರ್ಷಗಳು ಕಳೆದರೂ ಕೂಡ ಇದುವರೆಗೂ

(ಮೊದಲ ಪುಟದಿಂದ) ಸರ್ಕಾರ ಬೇರಾವ ಸಿಬ್ಬಂದಿಗಳನ್ನು ನೇಮಕ ಮಾಡಿಲ್ಲ.

ಜೊತೆಗೆ ಕುಶಾಲನಗರ ಶನಿವಾರಸಂತೆ ಮುಖ್ಯ ರಸ್ತೆಯ ಭೈರಪ್ಪನಗುಡಿಯಿಂದ ಸಂಶೋಧನಾ ಕೇಂದ್ರದವರೆಗೆ ಇರುವ ಎರಡೂವರೆ ಕಿ.ಮೀ. ಸಂಪರ್ಕ ರಸ್ತೆಯನ್ನು ಕೂಡ ಅಭಿವೃದ್ಧಿ ಪಡಿಸಲಿಲ್ಲ.

ಪಶುವೈದ್ಯಕೀಯ ಹಾಗೂ ವನ್ಯಜೀವಿಗಳಿಗೆ ಸಂಬAಧಿಸಿದAತೆ ಅಧ್ಯಯನ ಹಾಗೂ ಸಂಶೋಧನೆ ನಡೆಸಬೇಕಾದ ಪ್ರಾಧ್ಯಾಪಕರುಗಳು ಹಾಗೂ ಸಹಾಯಕ ಪ್ರಾಧ್ಯಾಪಕರುಗಳ ನೇಮಕವೂ ಈವರೆಗೂ ಆಗಿಲ್ಲ.

ಸಂಸ್ಥೆಯ ಆಡಳಿತ ಭವನ, ಗ್ರಂಥಾಲಯ, ಸಿಬ್ಬಂದಿ ವಸತಿಗೃಹ ಗಳು, ಉಪಹಾರ ಗೃಹ ಮೊದಲಾದ ಕಟ್ಟಡಗಳ ಕಾಮಗಾರಿ ಬಾಕಿಯಿತ್ತು. ಹಾಗಾಗಿ ಕೊಡಗಿನ ನಿಸರ್ಗ ಸುಂದರ ಹಸಿರು ಪರಿಸರದ ವಿಶಾಲ ಪ್ರದೇಶ ದಲ್ಲಿ ತಲೆಎತ್ತಿ ನಿಂತಿರುವ ಈ ಸಂಶೋಧನಾ ಕೇಂದ್ರದಲ್ಲಿ ಸೂಕ್ತ ತರಬೇತಿ ಹಾಗೂ ಅಧ್ಯಯನ ನಡೆಸಲು ಪ್ರವೇಶ ಪಡೆಯುವ ಸಂಶೋಧನಾ ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲ ಪ್ರಾಥಮಿಕ ಸಲಕರಣೆಗಳು ಕೂಡ ಅಲಭ್ಯವಾದ ಹಿನ್ನೆಲೆಯಲ್ಲಿ ಈ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸುವ ಚಿಂತನೆ ಯಲ್ಲಿ ಸಂಬAಧಿತ ಇಲಾಖೆ ಇದೆ ಎನ್ನಲಾಗುತ್ತಿದೆ.

ಘಟಕದ ಮೂಲ ಉದ್ದೇಶ ಏನಿತ್ತು?

ದೊಡ್ಡ ಅಳುವಾರದ ಈ ವನ್ಯಜೀವಿ ಸಂಶೋಧನಾ ಕೇಂದ್ರದಲ್ಲಿ ಪಶುವೈದ್ಯಕೀಯ ಪದವೀಧರರಿಗೆ ವನ್ಯಜೀವಿ ವಿಭಾಗದಲ್ಲಿ ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿ ನೀಡುವುದು. ವನ್ಯಜೀವಿ ವಿಜ್ಞಾನದಲ್ಲಿ ಸಂಶೋಧನೆ ಕಾರ್ಯ ಕೈಗೊಳ್ಳು ವುದು, ವನ್ಯಜೀವಿ ವಿಷಯದಲ್ಲಿ ಕರ್ತವ್ಯ ನಿರತ ಪಶುವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡುವುದು. ಕಾಡು ಪ್ರಾಣಿ ಗಳ ಮರಣೋತ್ತರ ವನ್ಯಜೀವಿಗಳ ಸಂರಕ್ಷಣೆ ಕುರಿತು ರೈತರಿಗೆ ಹಾಗೂ ಸಾರ್ವಜನಿಕರಿಗೆ ಅಗತ್ಯವಾದ ಅರಿವು ಮೂಡಿಸುವ ಉದ್ದೇಶ ಹೊಂz Àಲಾಗಿತ್ತು.

ಕೇಂದ್ರ ಕಚೇರಿ ಇದಾಗಿದೆ : ಕುಶಾಲನಗರ ತಾಲೂಕಿನ ದೊಡ್ಡ ಅಳುವಾರದಲ್ಲಿ ಇರುವ ಈ ವನ್ಯಜೀವಿ ಸಂಶೋಧನಾ ಘಟಕ ರಾಜ್ಯದ ಪ್ರಮುಖ ಕೇಂದ್ರ ಕಚೇರಿ ಕೂಡ ಆಗಿತ್ತು. ಈಗಾಗಲೇ ರಾಜ್ಯದ ಎರಡನೇ ಸೈನಿಕ ಶಾಲೆ, ಎರಡನೇ ಕ್ರೀಡಾ ಶಾಲೆ ಕೂಡಿಗೆ ಯಲ್ಲಿದೆ. ಹಾಗೂ ಮಂಗಳೂರು ವಿಶ್ವ ವಿದ್ಯಾಲಯದ ಯೂನಿವರ್ಸಿಟಿ ಕ್ಯಾಂಪಸ್ ಕೂಡ ಇದೇ ದೊಡ್ಡ ಅಳುವಾರದ ವನ್ಯಜೀವಿ ಸಂಶೋಧನಾ ಕೇಂದ್ರಕ್ಕೆ ಹೊಂದಿ ಕೊಂಡೇ ಇದೆ. ಹಾಗಾಗಿ ಜಿಲ್ಲೆಗೆ ಸರ್ಕಾರದಿಂದ ಬಂದAತಹ ಯೋಜನಾ ಘಟಕಗಳು ಬೇರೆಡೆಗೆ ಹಿಂದಿರುಗದAತೆ ಅಥವಾ ಸ್ಥಗಿತ ವಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಕೊಡಗು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆಯ ಸಂಸದರು ಹಾಗೂ ಶಾಸಕರದ್ದಾಗ ಬೇಕಿದೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ದಶಕಗಳಿಂದಲೂ ಕಾಡುತ್ತಿರುವ ವನ್ಯಮೃಗಗಳು ಹಾಗೂ ಮಾನವರ ನಡುವಿನ ಸಂಘರ್ಷಕ್ಕೂ ಈ ವನ್ಯಜೀವಿ ಸಂಶೋಧನಾ ಕೇಂದ್ರದ ಸಂಶೋಧನಾ ವಿದ್ಯಾರ್ಥಿ ಗಳ ಆದ್ಯತಾ ವಿಷಯವಾಗಿರುವುದ ರಿಂದ ಕಾಡಾನೆ ಹಾಗೂ ಮಾನವ ಸಂಘರ್ಷ ತಡೆಗೆ ಈ ಕೇಂದ್ರದಿAದ ಮುಂದಿನ ದಿನಗಳಲ್ಲಿ ಸೂಕ್ತ ಪರಿಹಾರ ದೊರಕುವ ಆಶಾಭಾವನೆ ಯಲ್ಲಿ ಜಿಲ್ಲೆಯ ಕೃಷಿಕರಿದ್ದಾರೆ. ಹಾಗಾಗಿ ಈ ವನ್ಯ ಜೀವಿ ಸಂಶೋಧನಾ ಘಟಕವನ್ನು ಜಿಲ್ಲೆಯಲ್ಲಿಯೇ ಉಳಿಸಿಕೊಳ್ಳುವ ಮೂಲಕ ಸರ್ಕಾರದಿಂದ ದೊರಕ ಬೇಕಾದ ಅಗತ್ಯ ಮೂಲ ಸೌಕರ್ಯ ಗಳನ್ನು ಒದಗಿಸಲು ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳು ಮಾಡ ಬೇಕಿದೆ.

-ಕೆ.ಎಸ್.ಮೂರ್ತಿ, ಕುಶಾಲನಗರ.