ಸೋಮವಾರಪೇಟೆ, ನ. ೨೧ ಕೊಡಗು ಜಿಲ್ಲಾ ಹಿಂದೂ ಮಲಯಾಳ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾದ ವಿ.ಎಂ. ವಿಜಯ ಅವರನ್ನು ಸೋಮವಾರಪೇಟೆ ತಾಲೂಕು ಹಿಂದೂ ಮಲಯಾಳ ಸಮಾಜದ ಪರವಾಗಿ ಸನ್ಮಾನಿಸ ಲಾಯಿತು. ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕು ಘಟಕದ ಪದಾಧಿಕಾರಿ ಗಳು, ನೂತನ ಜಿಲ್ಲಾಧ್ಯಕ್ಷರನ್ನು ಸನ್ಮಾನಿಸಿದರು. ತಾಲೂಕು ಉಪಾಧ್ಯಕ್ಷ ಎನ್.ಆರ್. ಅಜೀಶ್, ಮಾಲಂಬಿ ಗಂಗಾಧರ್, ಸ್ಥಾಪಕಾಧ್ಯಕ್ಷ ಪಿ.ಡಿ. ಪ್ರಕಾಶ್, ಕಾರ್ಯದರ್ಶಿ ಅಯ್ಯಪ್ಪ, ಖಜಾಂಚಿ ಎ.ಕೆ. ಶಿವದಾಸ್ ಸೇರಿದಂತೆ ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.