ಸುಂಟಿಕೊಪ್ಪ, ನ. ೨೩: ಹರದೂರು ಗ್ರಾ.ಪಂ. ವ್ಯಾಪ್ತಿಯ ಗರಗಂದೂರು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ಪದವಿಪೂರ್ವ ವಸತಿ ಶಾಲೆಯ ಶೌಚಾಲಯದ ಗುಂಡಿ ಕಲ್ಮಶ ನೀರು ಎಲ್ಲೆಡೆ ಹರಿದು ವಾತಾವರಣ ಗಬ್ಬೆದ್ದು ನಾರುವಂತಾ ಗಿದೆ ಎಂದು ಈ ಭಾಗದ ನಿವಾಸಿಗಳು ಆರೋಪಿಸಿದ್ದಾರೆ.

ಈ ವಿಭಾಗದಲ್ಲಿ ನೆಲೆಸಿರುವ ನಿವಾಸಿಗಳು ಕಲ್ಮಶ ನೀರಿನ ದುರ್ನಾ ನತದಿಂದ ಮೂಗು ಮುಚ್ಚಿಕೊಂಡು ಜೀವನ ದೂಡು ವಂತಾಗಿದೆ. ರೋಗ ರುಜಿನಗಳು ಹರಡುವ ಸಾಧ್ಯತೆ ಇದೆ. ಹಿಂದುಳಿದ ವರ್ಗಗಳ ಇಲಾಖೆಯ ವರು ಹರದೂರು ಗ್ರಾ.ಪಂ.ಯವರು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.