ಕೂಡಿಗೆ, ನ. ೨೨: ಭುವನಗಿರಿ ಗ್ರಾಮದ ಶ್ರೀ ಭಕ್ತ ಕನಕದಾಸ ಸೇವಾ ಸಂಘದ ವತಿಯಿಂದ ೫೩೪ ನೇ ದಾಸರ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿ ಸಮಾರಂಭವು ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕನಕದಾಸ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕರ್ನಾಟಕ ಪ್ರದೇಶ ಕುರುಬ ಸಂಘದ ನಿರ್ದೇಶಕಿ ಹೇಮಲತಾ ಮಂಜುನಾಥ ಚಾಲನೆ ನೀಡಿದರು.

ಉದ್ಘಾಟನೆಯನ್ನು ಗೌರವ ಅಧ್ಯಕ್ಷ ಕೆ.ಕೆ. ದೊಡ್ಡಯ್ಯ ನೆರವೇರಿಸಿದರು. ಕನಕದಾಸ ಕುರಿತು ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಡಿ.ಆರ್. ಪ್ರಭಾಕರ್ ಮಾತನಾಡುತ್ತಾ

(ಮೊದಲ ಪುಟದಿಂದ) ಕನಕದಾಸರ ದಾಸ ಸಾಹಿತ್ಯ ಹಾಗೂ ಕೀರ್ತನೆಗಳು ಇಂದಿನ ಯುವಕರಿಗೆ ಮಾರ್ಗದರ್ಶನವಾಗಿದೆ. ದಾಸ್ಯ ಸಾಹಿತ್ಯ ಪರಂಪರೆಯಲ್ಲಿ ಕನಕದಾಸ ಕೀರ್ತನೆಗಳು ಅಗ್ರಸ್ಥಾನದಲ್ಲಿ ನಿಲ್ಲುತ್ತವೆ ಎಂದರು. ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಈಗಾಗಲೇ ಗುರುತಿಸಲ್ಪಟಿರುವ ಭುವನಗಿರಿ ಗ್ರಾಮದ ಜಾಗದಲ್ಲಿ ಕನಕ ಸಮುದಾಯದ ಭವನ ನಿರ್ಮಾಣಕ್ಕೆ ರೂ. ೧ ಲಕ್ಷ .

ಹಣವನ್ನು ಬಿಡುಗಡೆಗೊಳಿಸಿದ್ದಾರೆ. ಅದರ ಜೊತೆಗೆ ಸಾರ್ವಜನಿಕರ ಸಹಕಾರದೊಂದಿಗೆ ಉತ್ತಮವಾದ ಸಮುದಾಯದ ಭವನವನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಗಂಗಾಧರ್, ಸಂಘದ ಉಪಾಧ್ಯಕ್ಷ ಟಿ.ಕೆ. ವಸಂತ, ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಮಂಜುನಾಥ, ತಾಲೂಕು ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪುನೀತ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಅನಂತ್, ಚಂದ್ರು ಜಯಶೀಲ, ಪಾರ್ವತಮ್ಮ, ಭರಮಣ್ಣ ಬೆಟ್ಟಗೇರಿ ಉಪಸ್ಥಿತರಿದ್ದರು.

ಭುವನಗಿರಿ, ಸೀಗೆಹೊಸೂರು, ಜೇನುಕಲ್ಲು ಬೆಟ್ಟ, ಹಕ್ಕೆ ಕನಕದಾಸ ಸಮಾಜ ಮುಖಂಡರು ಭಾಗವಹಿಸಿದ್ದರು.