ನಾಪೆೆÇÃಕ್ಲು, ನ. ೨೨: : ಐತಿಹಾಸಿಕ ಬಿದ್ದಾಟಂಡ ವಾಡೆ ನಾಡ್ ಮಂದ್ ಕೋಲಾಟ ತಾ. ೨೩ ಮತ್ತು ೨೪ ರಂದು ನಡೆಯಲಿದೆ. ತಾ. ೨೩ ರಂದು ದೊಡ್ಡಕೋಲು, ಮಕ್ಕಿ ದೇವಾಲಯದಿಂದ ಕಾಪಳ ಕಳಿ ವೇಷಧಾರಿಗಳೊಂದಿಗೆ ಒಡ್ಡೋಲಗವಾಗಿ ಮೆರವಣಿಗೆ ಮಂದ್ಗೆ ಬರುವುದು. ನಂತರ ಮೂರು ಊರು ಮಂದ್ನವರು ಬಿದ್ದಾಟಂಡ ವಾಡೆ ನಾಡ್ ಮಂದ್ಗೆ ಆಗಮಿಸಿ ಕೋಲಾಟ ನಡೆಸಲಾಗುವುದು. ತಾ. ೨೪ ರಂದು ಸಣ್ಣಕೋಲು ಹಬ್ಬವು ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ತಿಳಿದ್ದಾರೆ.