ಸುಂಟಿಕೊಪ್ಪ, ನ. ೨೩: ಪುಷ್ಪಗಿರಿ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರುಗಳು ಆಡಳಿತ ಮಂಡಳಿಯ ಕಾರ್ಯವೈಖರಿಯ ವಿರುದ್ಧ ತಿರುಗಿ ಬಿದ್ದು ಸಭೆ ಗೊಂದಲದ ಪ್ರಸಂಗ ಎದುರಾಯಿತು.
ಸೋಮವಾರಪೇಟೆ ಕ್ಲಬ್ ರಸ್ತೆಯ ಪುಷ್ಪಗಿರಿ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಯ ವಾರ್ಷಿಕ ಮಹಾಸಭೆ ಸುಂಟಿಕೊಪ್ಪದ ಗುಂಡುಗುಟ್ಟಿ ಮಂಜನಾಥಯ್ಯ ಸಹಕಾರ ಭವನದಲ್ಲಿ ಅಧ್ಯಕ್ಷ ಎಂ.ಎಸ್. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸದಸ್ಯರುಗಳಾದ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಐಗೂರಿನ ಎಂ.ಎನ್. ಅಶೋಕ್, ಕಿರಗಂದೂರಿನ ಹೆಚ್.ಬಿ. ಶಿವಕುಮಾರ್, ನಾಕೂರಿನ ಮಂಜುನಾಥ ಮೊದಲಾದ ರೈತರು ಉತ್ಪಾದಿಸಿದ ವಸ್ತುಗಳ ಮಾರಾಟಕ್ಕೆ ಇಲ್ಲಿ ಅವಕಾಶ ಇಲ್ಲ; ಮಾದಾಪುರದಲ್ಲಿ ನಡೆದ ಸಭೆಯಲ್ಲೂ ಬೈಲಾ ಪ್ರತಿ ನೀಡಲು ಒತ್ತಾಯಿಸಿದರೂ ನೀಡಲಿಲ್ಲ. ತೋಟಗಾರಿಕೆ ಬೆಳೆಗೆ ಕೇಂದ್ರದ ಎಫ್.ಓ.ದಿಂದ ಪ್ರಯೋಜನವಾಗಲಿದೆ ಎಂದು ನಾವುಗಳು ಈ ಸಂಸ್ಥೆಗೆ ಸೇರಿದ್ದು ಆಡಳಿತ ಮಂಡಳಿಯಿAದ ನಮಗೆ ಸ್ಪಂದನ ಸಿಗುತ್ತಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಅಧ್ಯಕ್ಷ ದೇವಯ್ಯ ಅವರು ಸಮಜಾಯಿಷಿಕೆ ನೀಡಲು ಮುಂದಾದರೂ ಸದಸ್ಯರುಗಳ ಆಕ್ರೋಶ ನಿಲ್ಲಲಿಲ್ಲ. ಕೊನೆಗೆ ಹೇಗೋ ಸಮಾಧಾನಪಡಿಸಿದ ಬಳಿಕ ಸಭೆ ಮುಂದುವರಿಯಿತು.
ಸದಸ್ಯರುಗಳಾದ ಎಂ.ಸಿ. ಗಣೇಶ, ಬಾರನ ಪ್ರಮೋದ್, ಸಂಸ್ಥೆಯ ಉಪಾಧ್ಯಕ್ಷ ಎ.ಎಸ್. ರತೀಶ, ವ್ಯವಸ್ಥಾಪಕ ಸತೀಶ, ನಿರ್ದೇಶಕರುಗಳಾದ ಕೆ.ಎಸ್. ಅಯ್ಯಣ, ಬಿ.ಜಿ. ಜವಾಹರ್, ಕೆ.ಎಂ. ಕೃಷ್ಣ ಕುಮಾರ್, ಬಿ.ಎಸ್. ಸುರೇಶ್, ಎ.ಎನ್. ಜೋಯಪ್ಪ ಇದ್ದರು.
ಡಾ. ಶಶಿಕಾಂತ ರೈ, ದೇವಿ ಪ್ರಸಾದ್, ಬಾಲಕೃಷ್ಣ ರೈ, ಕೆ.ಪಿ. ವಸಂತ್ ಹಾಗೂ ಜಗನ್ನಾಥ್ ರೈ ಮತ್ತಿತರರು ಇದ್ದರು.