ಮಡಿಕೇರಿ, ನ. ೨೨ : ಚೆಟ್ಟಳ್ಳಿಯಲ್ಲಿ ಸ್ಥಳೀಯರು ಸಂಭ್ರಮದಿAದ ಪುತ್ತರಿ ನಮ್ಮೆಯನ್ನು ಆಚರಿಸುತ್ತಿರುವಾಗ ಮನೆಯ ಗೇಟಿನೊಳಗೆ ನುಗ್ಗಿದ ಪೊಲೀಸ್ ಪೇದೆಯೊಬ್ಬರು ಹೆಂಗಸರು ಮಕ್ಕಳು ಇರುವಾಗ ಮನೆಯವ ರೊಂದಿಗೆ ಅವಾಚ್ಯ ಪದಗಳನ್ನು ಬಳಸಿ ಪಟಾಕಿಯನ್ನು ಸಿಡಿಸಬಾರದು ಇತರರಿಗೆ ತೊಂದರೆಯಾಗುತ್ತೆ ಎಂದು ಗದರಿಸಿರುವುದನ್ನು ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ತೀವ್ರವಾಗಿ ಖಂಡಿಸಿದೆ. ಕೂಡಲೇ ಈತ ಜನಾಂಗದ ಕ್ಷಮೆ ಕೇಳಬೇಕು ಹಾಗೂ ಪೊಲೀಸ್ ಪೇದೆಯ ಮೇಲೆ ಶಿಸ್ತು ಕ್ರಮ ಕೈಗೊಂಡು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಸಮಾಜದ ಅಧ್ಯಕ್ಷರುಗಳಾದ ಮಾತಂಡ ಮೊಣ್ಣಪ್ಪ ಹಾಗೂ ಚಮ್ಮಟೀರ ಪ್ರವೀಣ್ ಉತ್ತಪ್ಪ ಒತ್ತಾಯಿಸಿ, ಖಂಡಿಸಿದ್ದಾರೆ.
ಕೊರವೇ ಖಂಡನೆ
ಚೆಟ್ಟಳ್ಳಿಯಲ್ಲಿ ಸಾಂಪ್ರದಾಯಿಕ ಪುತ್ತರಿ ಹಬ್ಬವನ್ನು ಆಚರಿಸುತ್ತಿದ್ದ ವೇಳೆ ಪಟಾಕಿ ಸಿಡಿಸಲು ತಡೆಯೊಡ್ಡಿದ ಪೊಲೀಸ್ ಸಿಬ್ಬಂದಿಯೊಬ್ಬರು ಅವಾಚ್ಯ ಪದಗಳನ್ನು ಬಳಸಿ ಅಗೌರವ ತೋರಿದ ಪ್ರಕರಣ ಖಂಡನೀಯವೆAದು ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.