ಚೆಟ್ಟಳ್ಳಿ, ನ. ೨೨: ಇಲ್ಲಿಗೆ ಸಮೀಪದ ಕಡಗದಾಳುವಿನ ಪುರಾತನ ಇತಿಹಾಸ ಹೊಂದಿರುವ ಕುರುಳಿ ಅಂಬಲ್ ಕೋಲ್ ತಾ. ೨೫ರಂದು ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ಹಾಗೂ ಕುರುಳಿ ಅಂಬಲ ಸಮಿತಿಯವರು ತಿಳಿಸಿದ್ದಾರೆ. ಅಪರಾಹ್ನ ೧೨ ಗಂಟೆಗೆ ಊರಿನವರು ಮಂದ್‌ನಲ್ಲಿ ಸೇರಿ ಊರು ತಕ್ಕರಾದ ಕೊರವಂಡ ಕುಟುಂಬದ ಮನೆಯಿಂದ ದುಡಿಕೊಟ್ಟ್ ಹಾಗೂ ಒಡ್ಡೋಲಗದ ಮೂಲಕ ಊರು ತಕ್ಕರನ್ನು ಮಂದ್‌ಗೆ ಕರೆತಂದು ಊರುಕೋಲ್ ಪ್ರದರ್ಶನ ನಡೆಯಲಿದೆ. ತಾ, ೨೬ ರಂದು ಶುಕ್ರವಾರ ವಿಷ್ಣುಮೂರ್ತಿ ಪೂಜೆ ನಡೆದು ರಾತ್ರಿ ಊರಿನವರು ಕೋಲನ್ನು ದೇವನೆಲೆಯಲ್ಲಿ ಒಪ್ಪಿಸುವರೆಂದು ತಿಳಿಸಿದ್ದಾರೆ.