ಕಡಂಗ, ನ. ೨೨: ನರಿಯಿಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ ಸಮೀಪದ ಎಡಪಾಲ ಗ್ರಾಮದ ಕಾವೇರಿ ನದಿಯ ಸೇತುವೆಯ ದಡದಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕಲು ಬಂದಿದ್ದ ಟ್ರಾö್ಯಕ್ಟರ್ ಚಾಲಕನನ್ನು ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಎಡಪಾಲ ತರಾಟೆಗೆ ತೆಗೆದುಕೊಂಡರು.
ಇನ್ನು ಮುಂದೆ ಇದೇ ಈ ರೀತಿ ತ್ಯಾಜ್ಯ ವಸ್ತುಗಳನ್ನು ಕಾವೇರಿ ನದಿಯ ದಡದಲ್ಲಿ ಹಾಕಿದರೆ ಪೊಲೀಸ್ರಿಗೆ ಒಪ್ಪಿಸಲಾಗುವುದು ಪಂಚಾಯಿತಿ ವತಿಯಿಂದ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ದಡದಲ್ಲಿ ಸುರಿದ ತ್ಯಾಜ್ಯವಸ್ತುಗಳನ್ನು ಅಲ್ಲಿಂದ ಚಾಲಕ ವಾಪಾಸ್ ಕೊಂಡೊಯ್ದು ಈ ಸಂದರ್ಭ ಎಡಪಾಲ ಗ್ರಾಮಸ್ಥರು ಹಾಜರಿದ್ದರು. -ನೌಫಲ್ ಕಡಂಗ