ಮಡಿಕೇರಿ, ನ. ೨೩: ಸೇವಾ ಭಾರತಿ ವತಿಯಿಂದ ತುರ್ತು ಚಿಕಿತ್ಸಾ ವಾಹನ ಸಮರ್ಪಣೆ ಕಾರ್ಯಕ್ರಮ ತಾ. ೨೪ ರಂದು (ಇಂದು) ಬೆಳಿಗ್ಗೆ ೧೦.೩೦ ಗಂಟೆಗೆ ಭಾರತೀಯ ವಿದ್ಯಾ ಭವನದಲ್ಲಿ ನಡೆಯಲಿದೆ. ವನವಾಸಿ ಕಲ್ಯಾಣ ಕರ್ನಾಟಕದ ಅಧ್ಯಕ್ಷ ಚೆಕ್ಕೇರ ಮನು ಕಾವೇರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಂಗಳೂರ ವಿಭಾಗ ರಾಷ್ಟಿçÃಯ ಸ್ವಯಂಸೇವಕ ಸಂಘದ ಸಂಘಚಾಲಕ ಗೋಪಾಲ ಚೆಟ್ಟಿಯಾರ್ ಲೋಕಾರ್ಪಣೆ ಮಾಡುವರು. ದಕ್ಷಿಣಪ್ರಾಂತ ಸಂಘ ಚಾಲಕ ಡಾ. ವಾಮನ್ ಶೆಣೈ ಉಪಸ್ಥಿತರಿರುವರು.