ಮಡಿಕೇರಿ, ನ. ೨೧: ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಹಾಕತ್ತೂರು ಮ್ಯಾಂಚೆಸ್ಟರ್ ಎಫ್.ಸಿ ವತಿಯಿಂದ ಕಾಲ್ಚೆಂಡು ಪಂದ್ಯಾವಳಿ ಡಿಸೆಂಬರ್ ೧೮, ೧೯ ಮತ್ತು ೨೦ ರಂದು ನಡೆಯಲಿದೆ.
ಮುಕ್ತ ಕಾಲ್ಚೆಂಡು ಪಂದ್ಯಾವಳಿ ೬+೨ ಆಟಗಾರರ ತಂಡದ ಮಾದರಿಯಲ್ಲಿ ಹಾಕತ್ತೂರಿನ ಕುವೆಂಪು ಶಾಲಾ ಮೈದಾನದಲ್ಲಿ ನಡೆಯಲಿದ್ದು, ಮೊದಲು ನೋಂದಾಯಿಸಿಕೊAಡ ೪೦ ತಂಡಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರಥಮ ಬಹುಮಾನ ರೂ. ೨೫ ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರೂ. ೧೭ ಸಾವಿರ ನಗದು ಹಾಗೂ ಟ್ರೋಫಿ ಮತ್ತು ತೃತೀಯ ಬಹುಮಾನ ೫ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು.
ತಂಡಗಳನ್ನು ಡಿ. ೧೫ ರ ಸಂಜೆ ೪ ಗಂಟೆಯೊಳಗೆ ನೋಂದಾಯಿಸಿ ಕೊಳ್ಳಬೇಕು. ಮೈದಾನ ಶುಲ್ಕ ರೂ. ೨ ಸಾವಿರವಾಗಿದ್ದು, ರೂ. ೫೦೦ನ್ನು ಮುಂಗಡವಾಗಿ ಪಾವತಿ ಮಾಡಿ ತಂಡದ ಇರುವಿಕೆಯನ್ನು ದೃಢಪಡಿಸಿಕೊಳ್ಳಬೇಕು.
ತಂಡಗಳ ನೋಂದಾಣಿಗೆ ೯೪೮೨೭ ೮೪೧೪೮, ೯೪೮೩೩ ೧೩೧೭೭, ಸಂಖ್ಯೆಗಳನ್ನು ಸಂಪರ್ಕಿಸ ಬಹುದಾಗಿದೆ.