ಕುಶಾಲನಗರ, ನ. ೨೧: ಶನಿವಾರಸಂತೆಯಲ್ಲಿ ಮಹಿಳೆಯರು ಪ್ರತಿಭಟನೆ ಸಂದರ್ಭ ಘೋಷಣೆ ಕೂಗಿದ ಪ್ರಕರಣ ಸಂಬAಧ ಸತ್ಯಾಸತ್ಯತೆಯ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯಾಗಬೇಕಿದೆ ಎಂದು ಬಿ.ಜೆ.ಪಿ. ಮಂಡಲ ವಕ್ತಾರ ಕೆ.ಜಿ. ಮನು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಾಯಕರ ಮೇಲೆ ದೂರು ದಾಖಲಿಸಿದ್ದು, ಅದನ್ನು ವಾಪಸ್ ಪಡೆದು ಮತೀಯ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ತಪ್ಪಿದಲ್ಲಿ ಸೋಮವಾರ ಹಿಂದೂಪರ ಸಂಘಟನೆಗಳು ಕರೆ ನೀಡಿರುವ ಡಿವೈಎಸ್ಪಿ ಕಚೇರಿ ಮುತ್ತಿಗೆ ಕಾರ್ಯಕ್ರಮಕ್ಕೆ ಬಿಜೆಪಿ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ನಗರ ಬಿಜೆಪಿ ಪ್ರಮುಖ್ ಉಮಾಶಂಕರ, ಮಂಡಲ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ಕುಶಾಲನಗರ ಪಪಂ ಸದಸ್ಯ ಅಮೃತ್‌ರಾಜ್, ಕುಶಾಲನಗರ ಶಕ್ತಿ ಕೇಂದ್ರದ ಸಹ ಪ್ರಮುಖ ಶಿವಾಜಿ ಇದ್ದರು.