ನಾಪೋಕ್ಲು, ನ. ೨೧: ಮೈಸೂರಿನಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿಯೊಂದು (ಕೆಎ-೧೯ ಎಎ ೪೯೩೭) ಮಡಿಕೇರಿ ಸಮೀಪದ ಜೋಡುಪಾಲ ಜಲಪಾತದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಮುಗುಚಿ ಬಿದ್ದ ಘಟನೆ ನಡೆದಿದೆ. ಲಾರಿ ಮುಗುಚಿಕೊಂಡ ರಭಸಕ್ಕೆ ಲಾರಿಯ ಮುಂಭಾಗದ ಎರಡು ಚಕ್ರಗಳು ಹಾರಿ ಹೋಗಿದ್ದು, ಚಾಲಕ ಮತ್ತು ಲಾರಿಯ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.