*ತಿತಿಮತಿ/ಗೋಣಿಕೊಪ್ಪಲು, ನ. ೨೧: ಸಮೀಪದ ದೇವರಪುರ ತಿತಿಮತಿ ರಸ್ತೆಯಲ್ಲಿ ೨ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ವೀರಾಜಪೇಟೆ ತೆಲುಗರ ಬೀದಿಯ ಚಂದ್ರಕಲಾ (೪೫) ಮೃತಪಟ್ಟವರಾಗಿದ್ದು, ಮೃತರ ಮಕ್ಕಳಾದ ಸಚಿನ್ ಹಾಗೂ ಪವನ್, ಚಾಲಕ ಮಧುಸೂದನ್

(ಮೊದಲ ಪುಟದಿಂದ) ಗಾಯಗೊಂಡಿದ್ದಾರೆ. ಸಚಿನ್, ಪವನ್ ಹಾಗೂ ಚಂದ್ರಕಲಾ ಕಾರಿನಲ್ಲಿ ವೀರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಭದ್ರಗೋಳದ ಬಳಿ ಎದುರಿನಿಂದ ವೇಗವಾಗಿ ಬಂದ ಕಾರೊಂದಕ್ಕೆ ಸ್ಥಳಾವಕಾಶ ಮಾಡಿಕೊಡಲು ಮುಂದಾದಾಗ ಅಪಘಾತ ಸಂಭವಿಸಿದ್ದು, ಗಾಯಗೊಂಡ ಚಂದ್ರಕಲಾ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಸಚಿನ್ ಹಾಗೂ ಪವನ್‌ರವರುಗಳನ್ನು ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ. ಗೋಣಿಕೊಪ್ಪಲು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.