ಮಡಿಕೇರಿ, ನ. ೨೧: ಇತಿಹಾಸ ಪ್ರಸಿದ್ಧ ಬೊಟ್ಟಿಯತ್ ಮೂರು ನಾಡಿನ ಕೈಮುಡಿಕೆ ಪುತ್ತರಿ ಕೋಲ್ ಮಂದ್ ತಾ. ೨೨ ರಂದು (ಇಂದು) ಮಧ್ಯಾಹ್ನ ೨.೩೦ಕ್ಕೆ ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.
ಬೊಟ್ಟಿಯತ್ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡಿಗೆ ಸೇರಿದ ಕೈ ಮುಡಿಕೆ ಪುತ್ತರಿ ಕೋಲ್ಮಂದ್ ಮಧ್ಯಾಹ್ನ ೨.೩೦ಕ್ಕೆ ಸೇರಿ ಮೂರು ನಾಡಿನವರು ಸಾಮೂಹಿಕ ಕೋಲಾಟ ಮಾಡುವ ಮೂಲಕ ಚಾಲನೆ ದೊರೆಯಲಿದೆ. ಮಳೆಯ ಕಾರಣ ಈ ಬಾರಿ ಸರಳವಾಗಿ ಮಂದ್ ಆಚರಿಸಲು ನಿರ್ಧರಿಸಲಾಗಿದ್ದು, ಕೇವಲ ಸಂಪ್ರದಾಯಕ್ಕೆ ಮಾತ್ರ ಒತ್ತುಕೊಡಲಾಗುತ್ತದೆ ಎಂದು ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.