ಕುಶಾಲನಗರ, ನ. ೨೧: ಕಾವೇರಿ ನದಿ ಸಂರಕ್ಷಣೆ ಹಾಗೂ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಸರ್ವೆ ಕಾರ್ಯ ನಡೆಸಲು ತಾ. ೨೨ ರಂದು (ಇಂದು) ದೆಹಲಿ ವಿಶೇಷ ತಜ್ಞರ ತಂಡ ಕುಶಾಲನಗರಕ್ಕೆ ಭೇಟಿ ನೀಡಲಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಮಂಗಳೂರಿನಿAದ ಆಗಮಿಸಿರುವ ಖಾಸಗಿ ಸಂಸ್ಥೆಯ ತಜ್ಞರ ತಂಡ ಈಗಾಗಲೇ ನದಿ ದಂಡೆಯ ಮತ್ತು ರಾಫ್ಟ್ ಮೂಲಕ ಸರ್ವೆ ಕಾರ್ಯ ನಡೆಸುತ್ತಿದೆ.
ದೆಹಲಿಯಿಂದ ಆಗಮಿಸುವ ತಂಡದಿAದ ಕಾವೇರಿ ಮತ್ತು ಹಾರಂಗಿ ನದಿ ಭಾಗದ ಏರಿಯಲ್ ಸರ್ವೆ ಕಾರ್ಯ ನಡೆಯುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.