ಗೋಣಿಕೊಪ್ಪ ವರದಿ, ನ. ೨೧: ಹೆಗ್ಗಳ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಷಯ ಬುಟ್ಟಿ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಲಾಯಿತು.

ಮನೆಯಂಗಳದಲ್ಲಿ ಬೆಳೆದ ತರಕಾರಿಯನ್ನು ವಿದ್ಯಾರ್ಥಿಗಳು ತಂದು ದಾಸೋಹಕ್ಕೆ ನೀಡಿದರು. ಹಂಚಿ ತಿನ್ನುವುದರಿಂದ ಸಂತಸವಿದೆ ಎಂಬ ಸಂದೇಶ ಸಾರಿದರು. ಪಾಲಕರು ಕೂಡ ಭಾಗವಹಿಸಿದ್ದರು. ಮುಖ್ಯಶಿಕ್ಷಕಿ ಬಿ.ಎಂ. ಸುನಿತಾ ಇದ್ದರು.