ಮಡಿಕೇರಿ, ನ. ೨೧: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಡವ ಸ್ನಾತಕೋತ್ತರ ಪದವಿ ಕೋರ್ಸ್ ಪ್ರಾರಂಭಿಸುವ ಸಂಬAಧ ಪಠ್ಯಕ್ರಮ ತಯಾರಿಸುವ ಸಭೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಮಿತಿ ಸದಸ್ಯರಾದ ಬಾಚರಣಿಯಂಡ ಪಿ. ಅಪ್ಪಣ್ಣ, ಬಾಚರಣಿಯಂಡ ರಾಣು ಅಪ್ಪಣ್ಣ, ಡಾ. ಎಂ.ಪಿ. ರೇಖಾ ಹಾಗೂ ಡಾ. ನಡಿಕೇರಿಯಂಡ ಪೂವಯ್ಯ, ಡಾ. ಸೋಮಣ್ಣ ಅವರು ಭಾಗವಹಿಸಿ ೨ ವರ್ಷಕ್ಕೆ ಇರುವ ಪಠ್ಯಕ್ರಮವನ್ನು ತಯಾರಿಸುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದರು. ಈ ಶೈಕ್ಷಣಿಕ ವರ್ಷವೇ ಸ್ನಾತಕೋತ್ತರ ಕೋರ್ಸ್ನ್ನು ಪ್ರಾರಂಭಿಸಲು ಪ್ರಯತ್ನ ಮಾಡಲಾಗುವುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.