ಆಲೂರುಸಿದ್ದಾಪುರ, ನ. ೨೧: ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಭಾನುವಾರ ಸೌಹಾರ್ದತೆಯ ಶಾಂತಿ ಸಭೆ ನಡೆಯಿತು. ಪಟ್ಟಣದಲ್ಲಿ ಕಳೆದ ೧೫ ದಿನಗಳ ಹಿಂದೆ ನಡೆದ ಗಲಭೆಗಳಿಗೆ ಸಂಬAಧ ಪಟ್ಟಂತೆ ಪೊಲೀಸ್ ಠಾಣೆಯಲ್ಲಿ ಕುಶಾಲನಗರ ಡಿವೈಎಸ್‌ಪಿ ಶೈಲೇಂದ್ರ ಅಧ್ಯಕ್ಷತೆಯಲ್ಲಿ ಎಲ್ಲಾ ಸಮುದಾಯದ ಪ್ರಮುಖರನ್ನು ಕರೆಸಿ ಸೌಹಾರ್ದತೆಯ ಶಾಂತಿ ಸಭೆಯನ್ನು ಏರ್ಪಡಿಸಲಾಗಿತ್ತು.
ಶನಿವಾರಸಂತೆಯಲ್ಲಿ ಹಿಂದೂ ಮುಸ್ಲಿಮರು ಹಲವಾರು ವರ್ಷಗಳಿಂದಲೂ ಸಹೋದರತ್ವದಿಂದ ಜೀವನ ಸಾಗಿಸುತ್ತಿದ್ದಾರೆ; ಆದರೆ ೧೫ ದಿನಗಳಿಂದ ಪಟ್ಟಣದಲ್ಲಿ ನಡೆದಿರುವುದು ಕೋಮು ಗಲಭೆಯಲ್ಲ, ಹಿಂದೂ ಮುಸ್ಲಿಂ ಜಟಾಪಟಿಯೂ ಅಲ್ಲ ಪಟ್ಟಣದ ಒಂದು ಕುಟುಂಬಕ್ಕೆ ಸಂಬAಧ ಪಟ್ಟ ವಿಚಾರವಾಗಿದ್ದು ಇದೊಂದು ಕೋಮು ಗಲಭೆಯಂತೆ ಬಿಂಬಿತಗೊAಡಿದೆ ಇದನ್ನು ಯಾರೂ ಸಹ ಕೋಮು ಗಲಭೆಯಂತೆ ಕದಡಬೇಡಿ ಎಂದು ಪ್ರಮುಖರು ಶಾಂತಿ ಸಭೆಯಲ್ಲಿ ಅಭಿಪ್ರಾಯಪಟ್ಟರು.
ಶಾಂತಿ ಸಭೆಯಲ್ಲಿ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಹಾಲಪ್ಪ ಮಾತನಾಡಿ-ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಎಂಬ ಬೇಧಭಾವ ಇಲ್ಲದೆ ಸಹೋದರತ್ವದಲ್ಲಿ ಜೀವನ ನಡೆಸುತ್ತಿದ್ದೇವೆ, ಹಿಂದೂ ಸಮುದಾಯದ ದೇವಾಲಯಗಳಿಗೆ ಮುಸ್ಲಿಂ ಜನರು ಸಹಕಾರ ನೀಡುತ್ತಾರೆ. ಅದೇ ರೀತಿಯಲ್ಲಿ ಮುಸ್ಲಿಂ ಸಮುದಾಯದ ಕಾರ್ಯಕ್ರಮಗಳಿಗೆ ಹಿಂದೂ ಸಮುದಾಯದವರೂ ಸಹಕಾರ ನೀಡುತ್ತಿದ್ದು, ಈಗ ನಡೆದಿರುವ ಘಟನೆಗಳ ಬಗ್ಗೆ ಪೊಲೀಸರು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಅನಂತ್‌ಕುಮಾರ್ ಮಾತನಾಡಿ, ಇಲ್ಲಿ ಹಿಂದೂ ಮುಸ್ಲಿಂ ಎಂಬ ವಿಷಬೀಜ ಬಿತ್ತಿ ಎರಡು ಸಮುದಾಯದವರಲ್ಲಿ ಒಡಕು ತರುತ್ತಿರುವವರ ವಿರುದ್ದ ಕ್ರಮಕ್ಕೆ ಮುಂದಾಗಬೇಕು, ಪಟ್ಟಣದಲ್ಲಿ ಉಭಯ ಸಮುದಾಯದವರು ಒಗ್ಗಟ್ಟಾಗಿ ಜೀವನ ನಡೆಸಿಕೊಂಡು ಬರುತ್ತಿದ್ದು ಕೆಲವರಿಂದ ಶಾಂತಿ ಕದಡುವ ಕೆಲಸವಾಗುತ್ತಿದ್ದು ಇಂತಹವರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು.
ಶನಿವಾರಸAತೆ ಗ್ರಾ.ಪಂ. ಸದಸ್ಯ ಎಸ್.ಎನ್. ರಘು ಮಾತನಾಡಿ, ಪಟ್ಟಣದಲ್ಲಿ ನಡೆದಿರುವುದು ಹಿಂದೂ ಮುಸ್ಲಿಂ ಗಲಭೆಯಲ್ಲ, ಇಲ್ಲಿನ ಒಂದು ಮುಸ್ಲಿಂ ಕುಟುಂಬದಿAದ ಮಾತ್ರ ಇಲ್ಲಿ ಶಾಂತಿ ಕದಡುತ್ತಿದೆ ಇದು ಮುಸ್ಲಿಂ ಸಮುದಾಯದವರಿಗೂ ಗೊತ್ತಿದೆ. ಈ ನಿಟ್ಟಿನಲ್ಲಿ ಪೊಲೀಸರು ಶಾಂತಿ ಕದಡುತ್ತಿರುವ ವ್ಯಕ್ತಿಗಳನ್ನು ನಿಯಂತ್ರಿಸಿದರೆ ಇನ್ನು ಮುಂದೆ ಇಂತಹ ಘಟನೆ ಮರುಕಳಿಸುವುದಿಲ್ಲ. ಆದರೆ ಇದನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವರು ಕೋಮು ಗಲಭೆಯಂತೆ ಬಿಂಬಿಸುತ್ತಿದ್ದಾರೆ ಎಂದರು.
ದುAಡಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ಬಾಸ್ ಮಾತನಾಡಿ, ಪಟ್ಟಣದಲ್ಲಿ ನಡೆದಿರುವುದು ಕೋಮು ಗಲಭೆಯಲ್ಲ, ಕುಟುಂಬವೊAದಕ್ಕೆ ಸಂಬAಧಪಟ್ಟ ಘಟನೆಯಾಗಿದೆ. ಹಲವಾರು ವರ್ಷಗಳಿಂದ ಇಲ್ಲಿ ಹಿಂದೂ-ಮುಸ್ಲಿA ಸಹೋದರರಂತೆ ಜೀವನ ನಡೆಸುತ್ತಿದ್ದು ಇಲ್ಲಿ ಯಾವತ್ತೂ ಸಹ ಕೋಮು ಗಲಭೆ ನಡೆದಿಲ್ಲ ಇದನ್ನು ಪೊಲೀಸರು ಗಮನಿಸಬೇಕಾಗಿದೆ. ಇನ್ನು ಮುಂದೆಯೂ ಸಹ ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದರು.
ಮುಸ್ಲಿA ಸಮುದಾಯದ ಹಿರಿಯ ವಜೀರ್ ಮಾತನಾಡಿ, ಇಲ್ಲಿ ಹಿಂದೂ ಮುಸ್ಲಿಂ ಎಂದೂ ಯಾವತ್ತೂ ವಿಂಗಡಣೆಯಾಗಿಲ್ಲ. ಇಲ್ಲಿ ವ್ಯಾಪಾರ ವಹಿವಾಟುಗಳನ್ನು ಉಭಯ ಸಮುದಾಯದವರು ಸೇರಿಕೊಂಡು ಒಟ್ಟಾಗಿ
(ಮೊದಲ ಪುಟದಿಂದ) ನಡೆಸಿಕೊಂಡು ಬರುತ್ತಿದ್ದೇವೆ ಎಂದರು. ಕೊಡ್ಲಿಪೇಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಔರಂಗಜೇಬ್ ಮಾತನಾಡಿ, ಅಲ್ಪ ಸಂಖ್ಯಾತರ ಮಕ್ಕಳಿಗೆ ಭದ್ರತೆ ಇಲ್ಲ ದಂತಾಗಿದ್ದು ಈ ನಿಟ್ಟಿನಲ್ಲಿ ಪೊಲೀಸರು ಜನಜಂಗುಳಿ ಇರುವ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸು ವಂತೆ ಮನವಿ ಮಾಡಿದರು.
ಶನಿವಾರಸಂತೆ ಗ್ರಾ.ಪಂ. ಸದಸ್ಯ ಸರ್ದಾರ್ ಆಹಮ್ಮದ್ ಇಲ್ಲಿ ನಡೆದಿರುವ ಪ್ರಕರಣವನ್ನು ಕೂಲಂಕುಷವಾಗಿ ಪೊಲೀಸರು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಗ್ರಾ.ಪಂ. ಅಧ್ಯಕ್ಷೆ ಸರೋಜ, ವಕೀಲ ಜಗದೀಶ್, ಶಿಕ್ಷಕ ಜಯಕುಮಾರ್, ದಲಿತ ಮುಖಂಡರಾದÀ ಈರಪ್ಪ, ವೀರೇಂದ್ರ ಶಾಂತಿ ಸಭೆಯಲ್ಲಿ ಮಾತನಾಡಿದರು.
ಕುಶಾಲನಗರ ಡಿವೈಎಸ್‌ಪಿ ಪಿ. ಶೈಲೇಂದ್ರ ಮಾತನಾಡಿ, ಈ ಹಿಂದೆ ನಡೆದ ಘಟನೆ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಪಕ್ಷಪಾತ ಇಲ್ಲದೆ ತನಿಖೆ ನಡೆಸುತ್ತದೆ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಪೋಷಕರು ಮತ್ತು ಶಿಕ್ಷಕರು ಮೊಬೈಲ್ ಬಳಕೆಯನ್ನು ನಿಯಂತ್ರಿಸಬೇಕು, ಮೊಬೈಲ್‌ಗಳಲ್ಲಿ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳದೆ ಫಾರ್ವಡ್ ಮೆಸೇಜ್‌ಗಳನ್ನು ಹಂಚಿಕೊAಡು ಕಾಲಹರಣ ಮಾಡುತ್ತಿರುವುದು ಘಟನೆಗಳಾಗಿ ಪರಿವರ್ತನೆ ಯಾಗುತ್ತಿರುವುದು ದುರಂತ ಎಂದರು.
ಪ್ರತಿಯೊAದು ವಿಷಯಗಳಿಗೂ ಗುಂಪು ಗುಂಪಾಗಿ ಬಂದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡುವುದನ್ನು ನಿಲ್ಲಿಸಬೇಕು. ಏನೇ ಸಮಸ್ಯೆ ಆದರೂ ಒಂದರೆಡು ಜನರು ಠಾಣೆಗೆ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಪೊಲೀಸರು ಯಾರ ಪರವೂ ಅಲ್ಲ; ವಿರೋಧವೂ ಅಲ್ಲ. ಕಾನೂನಿನ ಚೌಕಟ್ಟಿನಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದರು. ಪಟ್ಟಣದ ಜನಜಂಗುಳಿ ಇರುವ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಭರವಸೆ ನೀಡಿದರು.
ಶಾಂತಿ ಸಭೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ವಕೀಲ ಜಗದೀಶ್, ಶಿಕ್ಷಕ ಜಯಕುಮಾರ್, ಶಾಂತವೇರಿ ವಸಂತ್, ಡಿ.ಬಿ. ಧರ್ಮಪ್ಪ ಹಾಗೂ ೪೦ ಕ್ಕಿಂತ ಹೆಚ್ಚಿನ ಹಿಂದೂ, ಮುಸ್ಲಿಂ ಸಮುದಾಯದ ಪ್ರಮುಖರು ಪಾಲ್ಗೊಂಡಿದ್ದರು. ಶನಿವಾರಸಂತೆ ಸಿಐ ಪರಶಿವಮೂರ್ತಿ, ಸೋಮವಾರಪೇಟೆ ಸಿಐ ಮಹೇಶ್, ಕುಶಾಲನಗರ ಸಿಐ ಮಹೇಶ್, ಪ್ರದೀಪ್, ಲೋಕೇಶ್ ಮುಂತಾದವರಿದ್ದರು.
ವರದಿ: ಕೆ.ಎನ್. ದಿನೇಶ್