ಮಡಿಕೇರಿ, ನ. ೨೧: ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷ, ಈ ಬಾರಿಯೂ ಸ್ಪರ್ಧಿಸಿದ್ದ ಲೋಕೇಶ್ ಸಾಗರ್ ವಿರುದ್ಧ ೧೩೧ ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ನೂತನ ಅಧ್ಯಕ್ಷರಾಗಿ ಗೋಣಿಕೊಪ್ಪಲುವಿನ ಕೇಶವ ಕಾಮತ್ ಚುನಾಯಿತ ರಾಗಿದ್ದಾರೆ.

ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕು ಕೇಂದ್ರಗಳಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು ೨೪೨೭ ಮತದಾರರ ಪೈಕಿ ೧೭೨೩ ಮಂದಿ ಮತ ಚಲಾವಣೆ ಮಾಡುವ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ.

ಕಳೆದ ಬಾರಿಯ ಕ.ಸಾ.ಪ ಅಧ್ಯಕ್ಷರಾಗಿದ್ದ ಬಿ.ಎಸ್. ಲೋಕೇಶ್ ಸಾಗರ್ ೭೯೦ ಮತ ಪಡೆದರೆ, ಕೇಶವ ಕಾಮತ್ ೯೨೩ ಮತಗಳನ್ನು ಗಳಿಸಿಕೊಂಡು ವಿಜಯ ಸಾಧಿಸಿದ್ದಾರೆ.

ಬೆಳಿಗ್ಗೆ ೯ ಗಂಟೆಯಿAದ ಆರಂಭಗೊAಡ ಮತದಾನ ಪ್ರಕ್ರಿಯೆ ಸಂಜೆ ೪ ಗಂಟೆ ತನಕ ನಡೆಯಿತು. ಬಳಿಕ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ದಾಖಲಾದ ಮತವನ್ನು ಒಟ್ಟುಗೂಡಿಸ ಲಾಯಿತು. ೫ ತಾಲೂಕು ಕೇಂದ್ರಗಳಲ್ಲಿ ಶಾಂತಿಯುತವಾಗಿ ಹಾಗೂ ಉತ್ಸುಕತೆಯಿಂದ ಕ.ಸಾ.ಪ. ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಮಡಿಕೇರಿ ತಾಲೂಕಿನಲ್ಲಿ ೭೬೬ ಮತಗಳ ಪೈಕಿ ೪೬೮, ಸೋಮವಾರ ಪೇಟೆ ತಾಲೂಕಿನಲ್ಲಿ ೬೪೭ ಮತಗಳ ಪೈಕಿ ೪೮೭, ವೀರಾಜಪೇಟೆ ತಾಲೂಕಿನಲ್ಲಿ ೩೦೩ ಪೈಕಿ ೨೧೬, ಪೊನ್ನಂಪೇಟೆ ತಾಲೂಕಿನಲ್ಲಿ ೨೮೭ ಪೈಕಿ ೨೧೫, ಕುಶಾಲನಗರದಲ್ಲಿ ೪೨೪ ಪೈಕಿ ೩೩೭ ಮಂದಿ ಮತದಾನ ಮಾಡಿದ್ದಾರೆ.

(ಮೊದಲ ಪುಟದಿಂದ) ಸೋಮವಾರಪೇಟೆಯಲ್ಲಿ ೪, ಪೊನ್ನಂಪೇಟೆ ಹಾಗೂ ಕುಶಾಲನಗರದಲ್ಲಿ ತಲಾ ೧, ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿ ೨ ಮತಗಳು ತಿರಸ್ಕೃತಗೊಂಡಿವೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಮಡಿಕೇರಿ ತಾಲೂಕಿನಲ್ಲಿ ೪೬೮, ಸೋಮವಾರಪೇಟೆಯಲ್ಲಿ ೪೯೦, ವೀರಾಜಪೇಟೆ ೨೧೬, ಪೊನ್ನಂಪೇಟೆ ೨೧೫, ಕುಶಾಲನಗರದಲ್ಲಿ ೩೩೭ ಸೇರಿದಂತೆ ೧೭೨೬ ಮತಗಳು ಚಲಾವಣೆಗೊಂಡವು. ೩೦ ಮತಗಳು ತಿರಸ್ಕೃತಗೊಂಡವು.

ಮತಯಾಚನೆ: ಮತಕೇಂದ್ರಗಳ ಹೊರಭಾಗದಲ್ಲಿ ಅಭ್ಯರ್ಥಿಗಳ ಪರ ಬೆಂಬಲಿಗರು ಮತದಾನಕ್ಕೆ ಬರುವವರ ಬಳಿ ಮತಯಾಚಿಸಿದರು. ಅಧ್ಯಕ್ಷ ಅಭ್ಯರ್ಥಿಗಳು ವಿವಿಧ ಮತಗಟ್ಟೆಗಳಿಗೂ ಭೇಟಿ ನೀಡಿದರು. ಉಭಯ ಕಡೆಯ ಬೆಂಬಲಿಗರು ಈ ಸಂದರ್ಭ ಆರೋಗ್ಯಕರವಾಗಿ ಮತಯಾಚಿಸುತ್ತಿ ದ್ದದ್ದು ಕಂಡುಬAತು. ಮಡಿಕೇರಿಯಲ್ಲಿ ತಾಲೂಕು ಕಚೇರಿ, ಸೋಮವಾರಪೇಟೆ ಪ.ಪಂ.ನಲ್ಲಿ, ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ, ಕುಶಾಲನಗರದ ನಾಡಕಚೇರಿಯಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.

ಸಂಭ್ರಮಾಚರಣೆ: ಕೇಶವ ಕಾಮತ್ ಗೆಲುವು ಘೋಷಣೆಯಾದಂತೆ ಬೆಂಬಲಿಗರು ಹಾರ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನೂತನ ಅಧ್ಯಕ್ಷರ ಸಹಿತ ಮೆರವಣಿಗೆ ಸಾಗಿದ ಬೆಂಬಲಿಗರು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪಟಾಕಿ ಸಿಡಿಸಿ, ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು.

ನೂತನ ಅಧ್ಯಕ್ಷ ಕೇಶವ ಕಾಮತ್ ಅವರು, ಪೊನ್ನಂಪೇಟೆ ಹೋಬಳಿ ಕಸಾಪ ಸ್ಥಾಪಕ ಅಧ್ಯಕ್ಷರಾಗಿ, ವೀರಾಜಪೇಟೆ ತಾಲೂಕು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ, ವೀರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷರಾಗಿ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ, ಗೋಣಿಕೊಪ್ಪ ಕಾವೇರಿ ದಸರಾ ಸಮಿತಿ ಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷರಾಗಿ, ಮಡಿಕೇರಿಯಲ್ಲಿ ನಡೆದ ೮೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹಾರ ಸಮಿತಿ ಸಂಚಾಲಕರಾಗಿ, ಕೊಡಗು ಜಿಲ್ಲಾ ಚೇಂಬರ್ ಬ್ಯಾಂಕ್ ಸ್ಥಾಪಕ ನಿರ್ದೇಶಕರಾಗಿ ದುಡಿದ ಅನುಭವ ಹೊಂದಿದ್ದಾರೆ.

ಪ್ರಸ್ತುತ ಕೊಡಗು ಜಿಲ್ಲಾ ಲೇಖಕ ಹಾಗೂ ಕಲಾವಿದರ ಬಳಗದ ಅಧ್ಯಕ್ಷರಾಗಿ, ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷರಾಗಿ, ಪತ್ರಿಕಾ ಭವನ ಟ್ರಸ್ಟ್ ಕೋಶಾಧಿಕಾರಿಯಾಗಿ, ಉಮಾಮಹೇಶ್ವರಿ ಭಜನಾ ಮಂಡಳಿ ಕೋಶಾಧಿಕಾರಿಯಾಗಿ, ಗೋಣಿಕೊಪ್ಪ ಟ್ರೇರ‍್ಸ್ ಟ್ರಸ್ಟ್ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸೋಮವಾರಪೇಟೆಯಲ್ಲಿ ವಿಜಯೋತ್ಸವ:

ಕಸಾಪ ಚುನಾವಣೆಯಲ್ಲಿ ಕೇಶವ ಕಾಮತ್ ಅವರು ಭರ್ಜರಿ ಜಯ ಗಳಿಸಿದ ಹಿನ್ನೆಲೆ ಸೋಮವಾರಪೇಟೆ ಪಟ್ಟಣದಲ್ಲಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಕೇಶವ ಕಾಮತ್ ಪರ ಜಯಘೋಷ ಮೊಳಗಿಸಿದರು. ಈ ಸಂದರ್ಭ ಕೆ.ಎ. ಆದಂ, ಎಸ್.ಡಿ. ವಿಜೇತ್, ಬಿ.ಇ. ಜಯೇಂದ್ರ, ಹೆಚ್.ಎ. ನಾಗರಾಜು, ರಾಜಪ್ಪ, ರಘು ಸೇರಿದಂತೆ ಇತರರು ಹಾಜರಿದ್ದರು.