ಮಡಿಕೇರಿ, ನ. ೧೯: ಅವಧಿ ಪೂರ್ವ ಹೆರಿಗೆಯಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯಲ್ಲಿರುವ ಮಗುವಿನ ಚಿಕಿತ್ಸೆಗೆ ಮಾಧ್ಯಮ ಸ್ಪಂದನ ತಂಡದ ಮೂಲಕ ೧ ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ.

ಗೋಣಿಕೊಪ್ಪಲಿನ ವಿಜು - ವೀಣಾ ದಂಪತಿಯ ಮಗುವಿನ ಚಿಕಿತ್ಸೆಗೆ ಮಾಧ್ಯಮ ಸ್ಪಂದನ ತಂಡದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ದಾನಿಗಳು ೩ ದಿನದಲ್ಲಿ ೧ ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಪಾಲಕರು ಮಾಧ್ಯಮ ಸ್ಪಂದನ ತಂಡದ ಐಮಂಡ ಗೋಪಾಲ್ ಸೋಮಯ್ಯ ಗಮನ ಸೆಳೆದಿದ್ದರು.

ತಾ. ೧೫ ರಂದು ಆರ್ಥಿಕ ನೆರವು ನೀಡುವಂತೆ ಮಾಧ್ಯಮ ಸ್ಪಂದನದಿAದ ಆರ್ಥಿಕ ನೆರವು ಒದಗಿಸಿದೆ.

ಚನ್ನಂಗಿ ಹಾಡಿಯಲ್ಲಿರುವ ಇಬ್ಬರು ವಿದ್ಯಾರ್ಥಿನಿಯರು ವೀರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಪದವಿ ವ್ಯಾಸಂಗ ಮಾಡಲು ಶುಲ್ಕ ಪಾವತಿಸಲು ಕಷ್ಟಕರವಾಗಿತ್ತು. ವಿದ್ಯಾರ್ಥಿನಿಯರ ಸಂಕಷ್ಟದ ಬಗ್ಗೆ ಚನ್ನಂಗಿ ಹಾಡಿಯ ಸಿದ್ದಪ್ಪ ಮಾಧ್ಯಮ ಸ್ಪಂದನ ಗಮನ ಸೆಳೆದಿದ್ದರು. ಮಾಧ್ಯಮ ಸ್ಪಂದನ ತಂಡದ ಗ್ರೀನ್‌ಲ್ಯಾಂಡ್ ಶರೀನ್, ಜಗದೀಶ್ ರೈ ಇಬ್ಬರು ವಿದ್ಯಾರ್ಥಿನಿಯರ ಶುಲ್ಕ ಪಾವತಿಸಿದ್ದಾರೆ.