ಮಡಿಕೇರಿ, ನ. ೧೯: ಗಾಳಿಬೀಡು ಬಳಿಯ ಜವಾಹರ ನವೋದಯ ವಿದ್ಯಾಲಯದ ೬ನೇ ತರಗತಿಯ ಪ್ರವೇಶ ಪರೀಕ್ಷೆ ಏ.೩೦ ರಂದು ನಡೆಯಲಿದ್ದು, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲ ಪಂಕಜಾಕ್ಷನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೋದಯ ವಿದ್ಯಾಲಯವು ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಶಿಕ್ಷಣ ಸಂಸ್ಥೆಯಾಗಿದೆ. ಪ್ರತಿವರ್ಷ ೬ನೇ ತರಗತಿಗೆ ಪ್ರವೇಶ ಪಡೆಯುವ ೮೦ ವಿದ್ಯಾರ್ಥಿಗಳಲ್ಲಿ ೭೫ ಸ್ಥಾನ ಗ್ರಾಮೀಣ ಭಾಗಕ್ಕೆ ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶೇ.೨೨.೫ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೇ.೨೭ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಲ್ಲಿ ಶೇ.೩೩ರಷ್ಟು ವಿದ್ಯಾರ್ಥಿನಿಯರೇ ಇರುತ್ತಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಊಟ, ವಸತಿ, ಪಠ್ಯಪುಸ್ತಕ, ಸಮವಸ್ತç ಇತ್ಯಾದಿ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸಲಿದೆ. ಇದು ವಸತಿ ಶಾಲೆಯಾಗಿದ್ದು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇದೆ ಎಂದು ತಿಳಿಸಿದರು.

ಕನ್ನಡ ಶಿಕ್ಷಕ ಗಣೇಶ್ ಹೆಗಡೆ ಮಾತನಾಡಿ, ಕೊಡಗಿನ ಶಾಲೆಯಲ್ಲಿ ೫ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ೧-೫-೨೦೦೯ ರಿಂದ ೩೦-೪-೨೦೧೩ರ ಒಳಗೆ ಜನಿಸಿದವರಾಗಿರಬೇಕು. ಅರ್ಜಿಯಲ್ಲಿ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಲಗತ್ತಿಸಬೇಕು. ವಿದ್ಯಾರ್ಥಿ ಮತ್ತು ಪಾಲಕರು ನಿಗದಿತ ಜಾಗದಲ್ಲಿ ಸಹಿ ಮಾಡಿರಬೇಕು. ಸರಿಯಾದ ಮಾಹಿತಿಯೊಂದಿಗೆ ತಿತಿತಿ.ಟಿಚಿvoಜಚಿಥಿಚಿ.gov.iಟಿ ಈ ವೆಬ್ ವಿಳಾಸಕ್ಕೆ ಅರ್ಜಿಯನ್ನು ಅಪ್‌ಲೋಡ್ ಮಾಡಬೇಕು. ಇದೇ ತಿಂಗಳ ತಾ.೩೦ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ. ೯೬೧೧೮೬೨೮೩೫, ೯೪೮೨೫೫೭೩೨೨ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದರು.

ಪ್ರತಿ ವಿದ್ಯಾಲಯದಲ್ಲೂ ಎಲ್ಲಾ ಬೋಧನಾ ವಿಷಯದ ಶಿಕ್ಷಕರ ಜೊತೆಗೆ ದೈಹಿಕ ಶಿಕ್ಷಕರು, ಸಂಗೀತ ಶಿಕ್ಷಕರು, ಕಲಾ ಶಿಕ್ಷಕರು ಇದ್ದು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ವಲಸೆ ಯೋಜನೆಯಡಿ ಪ್ರತಿವರ್ಷ ೯ನೇ ತರಗತಿ ವಿದ್ಯಾರ್ಥಿಗಳನ್ನು ಒಂದು ವರ್ಷಗಳ ಕಾಲ ಮಧ್ಯ ಪ್ರದೇಶದ ವಿದ್ಯಾಲಯಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಲಾಗುವುದು. ಅಲ್ಲಿನ ವಿದ್ಯಾಲಯಗಳಿಂದ ಕೊಡಗಿಗೆ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಬಹು ಸಂಸ್ಕೃತಿಯ ಅರಿವು ಮೂಡಿಸುವುದು ವಲಸೆ ಪದ್ಧತಿ ಉದ್ದೇಶ ಎಂದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಶಿಕ್ಷಕ ಮಾರುತಿ, ಜೀವಶಾಸ್ತç ಶಿಕ್ಷಕ ಗಂಗಾಧರನ್ ಹಾಜರಿದ್ದರು.