ಗುಡ್ಡೆಹೊಸೂರು, ನ. ೧೯: ಇಲ್ಲಿನ ಹೆದ್ದಾರಿ ಬಳಿ ಮಂಗಳೂರಿನಿAದ ಟೈಲ್ಸ್ ತುಂಬಿಸಿಕೊAಡು ಕುಶಾಲನಗರದತ್ತ ಸಾಗುತ್ತಿದ್ದ ಮಂಗಳೂರಿನ ನೋಂದಣಿ ಹೊಂದಿರುವ ಕಂಟೈನರ್ ಅವಘಡಕ್ಕೀಡಾಗಿದೆ. ಲಾರಿ ರಸ್ತೆ ಬದಿಯಲ್ಲಿ ಪಲ್ಟಿ ಆಗಿ ಚಾಲಕ ಕಮಲ್ ಅದೃಷ್ಟವಶಾತ್ ಪಾರಾಗಿದ್ದಾರೆ. ಲಾರಿಯ ಎಡಭಾಗ ಜಖಂಗೊAಡಿದೆ. ಎಡಭಾಗದಲ್ಲಿ ಜನರಿದ್ದಿದ್ದರೆ ಜೀವಕ್ಕೂ ತೊಂದರೆ ಬರುವ ಸಾಧ್ಯತೆ ಇತ್ತು.
ರಾತ್ರಿ ೧ ಗಂಟೆಗೆ ಘಟನೆ ನಡೆದಿರುವುದಾಗಿ ಕಮಲ್ ತಿಳಿಸಿದ್ದಾರೆ. ಎರಡು ಖಾಸಗಿ ಬಸ್ಗಳು ರಸ್ತೆ ಮಧ್ಯೆ ನಿಲ್ಲಿಸಿ ಚಾಲಕರು ಮಾತನಾಡುತ್ತಿದ್ದ ಸಂದರ್ಭ ಇಳಿಜಾರು ಸ್ಥಳದಲ್ಲಿ ನಿಯಂತ್ರಣ ಸಿಗಲಿಲ್ಲ ಎಂದು ಚಾಲಕ ಕಮಲ್ ವಿವರಿಸಿದರು.
- ಗಣೇಶ್ ಕುಡೆಕ್ಕಲ್