ಮಡಿಕೇರಿ, ನ.೧೯: ಸಂಪಾಜೆ ಬಳಿಯ ಕಲ್ಲುಗುಂಡಿ ಸರ್ಕಾರಿ ಶಾಲೆಗೆ ಹಳೇ ವಿದ್ಯಾರ್ಥಿಗಳು ಒಟ್ಟು ೨,೪೧,೭೪೧ ರೂ. ಹಣ ಸಂಗ್ರಹಿಸಿ, ಅದರಲ್ಲಿ ೪ ಸಿಸಿಟಿವಿ, ೧ ಇನ್ವರ್ಟರ್, ತಲಾ ೨೬ ಬೆಂಚ್-ಡೆಸ್ಕ್, ೮ ಫ್ಯಾನ್ ಕೊಡುಗೆ ನೀಡಿದ್ದಾರೆ. ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಕೊಡುಗೆಯಾಗಿ ನೀಡಿದ ಎಲ್ಲ ವಸ್ತುಗಳ ಹಸ್ತಾಂತರ ಕಾರ್ಯಕ್ರಮವು ಇತ್ತೀಚೆಗೆ ನೆರವೇರಿತು.

ಸಂಪಾಜೆಯ ಕಲ್ಲುಗುಂಡಿಯಲ್ಲಿರುವ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಕೊಂದಲಕಾಡು ನಾರಾಯಣ್ ಭಟ್ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.

ನಂತರ ನಮ್ಮೂರ ಶಾಲೆ ಉಳಿಸೋಣ ವಾಟ್ಸಪ್ ಗ್ರೂಪ್‌ನ ರೂವಾರಿ ಹೇಮಂತ್ ಸಂಪಾಜೆ ಪ್ರಾಸ್ತಾವಿಕ ಮಾತನಾಡಿ, ಧನ ಸಂಗ್ರಹಕ್ಕೆ ಎದುರಾದ ಸವಾಲು, ಅದನ್ನು ಮೆಟ್ಟಿನಿಂತು ನಡೆದ ದಾರಿ. ಕೊನೆಗೆ ಸಿಕ್ಕಿದ ಯಶಸ್ಸು, ಸ್ನೇಹಿತರ ಸಹಕಾರ ಸೇರಿದಂತೆ ಎಲ್ಲ ವಿಚಾರದ ಬಗ್ಗೆ ವಿವರಿಸಿದರು.

ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)ನ ನಿವೃತ್ತ ಎಜಿಎಂ ಮುಂಡAಡ ಸಿ.ನಾಣಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆ ಕಲಿಯುವುದರ ಜೊತೆಗೆ, ಓದಿದ ನಂತರ ಸಮಾಜಕ್ಕೆ ಯಾವ ಕೊಡುಗೆ ನೀಡುತ್ತಾರೆ ಎಂಬುದು ಮುಖ್ಯ, ಸಂಪಾಜೆಯಲ್ಲಿ ಶುರುವಾದ ಹಳೇ ವಿದ್ಯಾರ್ಥಿಗಳ ಮಾದರಿ ನಡೆ ಸ್ಫೂರ್ತಿದಾಯಕ ಎಂದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಪ್ರಾಥಮಿಕ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ ಮಧುಸೂಧನ್, ಹಳೆ ವಿದ್ಯಾರ್ಥಿಗಳ ತಂಡದ ನಾಯಕರುಗಳಾದ ವಿನಯ್ ಸುವರ್ಣ, ಶರತ್ ಕೈಪಡ್ಕ, ಹೈಸ್ಕೂಲ್ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಆಚಾರ್ಯ, ಮುಖ್ಯೋಪಾಧ್ಯಾಯರಾದ ಚಂದ್ರಾವತಿ ಉಪಸ್ಥಿತರಿದ್ದರು. ದೈಹಿಕ ಶಿಕ್ಞಣ ಶಿಕ್ಷಕ ಧನಂಜಯ್ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ಹಾಜರಿದ್ದರು.

ಸಾರ್ವಜನಿಕವಾಗಿ ಮನವಿ ಮಾಡಲಾಗಿತ್ತು. ಹಣವನ್ನು ಮಗುವಿನ ತಂದೆ ವಿಜು ಖಾತೆಗೆ ಜಮಾ ಮಾಡಲಾಗಿದೆ. ೯ ದಿನದ ಹಿಂದೆ ಜನಿಸಿರುವ ಮಗು ಚೇತರಿಸಿಕೊಳ್ಳುತ್ತಿದ್ದು, ನಾಲ್ಕು ದಿನದಲ್ಲಿ ಐಸಿಯು ಘಟಕದಿಂದ ವಾರ್ಡ್ಗೆ ಸ್ಥಳಾಂತರವಾಗಲಿದೆ ಎಂದು ಮಗುವಿನ ಪಾಲಕರು ಮಾಹಿತಿ ನೀಡಿದ್ದಾರೆ.

ವ್ಯಾಸಂಗಕ್ಕೆ ಸಹಾಯ ಹಸ್ತ: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜೇನುಕುರುಬ ಕುಟುಂಬದ ಇಬ್ಬರು ವಿದ್ಯಾರ್ಥಿನಿಯರಿಗೆ ಪದವಿ ವ್ಯಾಸಂಗ ಮಾಡಲು ಮಾಧ್ಯಮ ಸ್ಪಂದನ ತಂಡ

ಶಾಲಾ-ಕಾಲೇಜುಗಳ ಆಧಾರ್ ದೃಢೀಕರಣ

ಮಡಿಕೇರಿ, ನ. ೧೯: ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಎನ್‌ಎಸ್‌ಪಿ (hಣಣಠಿs://sಛಿhoಟಚಿಡಿshiಠಿs. gov.iಟಿ) ವಿದ್ಯಾರ್ಥಿ ವೇತನ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜಾರಿಯಲ್ಲಿದ್ದು, ಈ ಅರ್ಜಿಗಳನ್ನು ಪರಿಶೀಲಿಸಲು ಶಾಲಾ ಹಾಗೂ ಕಾಲೇಜುಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ನೋಡಲ್ ಅಧಿಕಾರಿಗಳಿಂದ ಆಧಾರ್ ದೃಢೀಕರಣ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಈ ಕುರಿತು ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಕೂಡಲೇ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಆಧಾರ್ ದೃಢೀಕರಣ ಮಾಡಿಕೊಳ್ಳುವುದು ಹಾಗೂ ಆನ್‌ಲೈನ್ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಹಂತಕ್ಕೆ ವರ್ಗಾಯಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪಿ.ಪಿ. ಕವಿತ ತಿಳಿಸಿದ್ದಾರೆ.