ಗೋಣಿಕೊಪ್ಪ ವರದಿ, ನ. ೧೯ : ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ವತಿಯಿಂದ ಮಂಡ್ಯ ಪಿ.ಇ.ಎಸ್ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಿರಿಯರ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ೧೫ ವರ್ಷದೊಳಗಿನ ವಿಭಾಗದಲ್ಲಿ ಮಾಚಂಗಡ ಲಕ್ಷ್ ಚಂಗಪ್ಪ, ಬೊಪ್ಪಂಡ ದಿಯಾ ಭೀಮಯ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಲಕ್ಷ್ ಚಂಗಪ್ಪ ಬಾಲಕರ ಡಬಲ್ಸ್ ವಿಭಾಗದಲ್ಲಿ ಪ್ರಥಮ, ಸಿಂಗಲ್ಸ್ನಲ್ಲಿ ತೃತೀಯ, ಮಿಶ್ರ ಡಬಲ್ಸ್ನಲ್ಲಿ ಬೊಪ್ಪಂಡ ದಿಯಾ ಭೀಮಯ್ಯ-ಲಕ್ಷ್ ಚಂಗಪ್ಪ ಜೋಡಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಲಕ್ಷ್ ಚಂಗಪ್ಪ, ಬಾಳೆಲೆ ಗ್ರಾಮದ ಮಾಚಂಗಡ ಪ್ರಾರ್ಥನ, ರೋಶನ್ ಅಯ್ಯಪ್ಪ ದಂಪತಿ ಪುತ್ರ ಮೈಸೂರು ಮರಿಮಲ್ಲಪ್ಪ ಶಾಲೆಯ ೯ ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಬೊಪ್ಪಂಡ ದಿಯಾ ಭೀಮಯ್ಯ, ಮೈಸೂರು ಪ್ರಗತಿ ಎಲಿಟ್ ಪಬ್ಲಿಕ್ ಶಾಲೆಯ ೮ ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಬೊಪ್ಪಂಡ ಕುಸುಮ, ಭೀಮಯ್ಯ ದಂಪತಿ ಪುತ್ರಿ. ಇವರುಗಳಿಗೆ ಮೇದುರ ಅರುಣ್ ಪೆಮ್ಮಯ್ಯ ತರಬೇತು ನೀಡುತ್ತಿದ್ದಾರೆ.