*ಗೋಣಿಕೊಪ್ಪ, ನ. ೧೯: ಚಾಚಾ ನೆಹರು, ಸುಭಾಷ್ ಚಂದ್ರ ಬೋಸ್, ಝಾನ್ಸಿರಾಣಿ ಲಕ್ಷ್ಮಿಬಾಯಿ, ಒನಕೆ ಓಬವ್ವ, ಕೃಷ್ಣ, ವೈದ್ಯ ಮತ್ತು ಕೊರೊನಾ ಹೀಗೆ ಹಲವು ವೇಷಗಳನ್ನು ತೊಟ್ಟು ಪುಟಾಣಿ ವಿದ್ಯಾರ್ಥಿಗಳು ಮಕ್ಕಳ ದಿನವನ್ನು ಸಂಭ್ರಮದಿAದ ಆಚರಿಸಿದರು.

ಗೋಣಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಒಂದರಿAದ ನಾಲ್ಕನೇ ತರಗತಿ ವಿದ್ಯಾರ್ಥಿಗಳು ಛದ್ಮವೇಷ ಹಾಗೂ ಐದರಿಂದ ಏಳನೇ ತರಗತಿ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ನೆಹರು ದಿನಾಚರಣೆಯ ಸಂಭ್ರಮದಿAದ ಆಚರಿಸಿದರು.

ಇದೇ ಸಂದರ್ಭ ವಿದ್ಯಾರ್ಥಿಗಳು ಕುಳಿತುಕೊಳ್ಳಲು ದಾನಿಗಳಾದ ಮಹೇಂದ್ರ ಅವರು ೨೫ಕ್ಕೂ ಹೆಚ್ಚು ಕುರ್ಚಿಗಳನ್ನು ದಾನವಾಗಿ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಜಿ ಮೋಹನ್, ಶಾಲೆಯ ಎಲ್‌ಕೆಜಿ, ಯುಕೆಜಿ ಸಮಿತಿಯ ಅಧ್ಯಕ್ಷ ಸಿಡಿ ಮಾದಪ್ಪ, ದಾನಿಗಳಾದ ಬಿ.ಎ ಮಹೇಂದ್ರ, ಶಾಲೆಯ ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷೆ ಕೆ.ಆರ್ ಶಾಂತಿ, ಗೋಣಿಕೊಪ್ಪಲು ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿಗಳಾದ ಜ್ಯೋತಿಶ್ವರಿ, ಶಾಲೆಯ ಮುಖ್ಯ ಶಿಕ್ಷಕ ಬಿ.ಆರ್ ಸತೀಶ್, ಪೋಷಕರು, ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಶಿಕ್ಷಕಿ ಎಂ.ಸಿ ಇಂದಿರಾ, ಸ್ವಾಗತ ಶಾಲೆಯ ದೈಹಿಕ ಶಿಕ್ಷಕ ಟಿ.ಡಿ ರಮಾನಂದ ನೆರವೇರಿಸಿದರು.