ಸೋಮವಾರಪೇಟೆ,ನ.೧೮: ಇಲ್ಲಿನ ಜೇನು ಕೃಷಿ ಸಹಕಾರ ಸಂಘದ ಕಟ್ಟಡದಲ್ಲಿರುವ ನ್ಯಾಯಬೆಲೆ ಅಂಗಡಿಗೆ ವಿತರಣೆಯಾಗಿದ್ದ ಹುಳು ಮಿಶ್ರಿತ ಅಕ್ಕಿಯನ್ನು ವಾಪಾಸ್ಸು ಪಡೆಯಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಇಲಾಖೆಯ ಆಹಾರ ನಿರೀಕ್ಷಕರಾದ ಎಂ.ಆರ್.ಮAಜುನಾಥ್ ಹೇಳಿದ್ದಾರೆ. ಅಕ್ಕಿಯಲ್ಲಿ ಹುಳುಗಳು ಕಂಡುಬAದಿದ್ದರ ಬಗ್ಗೆ ತಾ. ೧೮ರಂದು ವರದಿ ಪ್ರಕಟವಾದ ಬೆನ್ನಲ್ಲೇ ಗಮನ ಹರಿಸಿರುವ ಅಧಿಕಾರಿಗಳು, ಹುಳುಗಳು ಉತ್ಪತ್ತಿಯಾಗಿದ್ದ ಅಕ್ಕಿಯನ್ನು ವಾಪಸ್ ಪಡೆದು, ನ್ಯಾಯಬೆಲೆ ಅಂಗಡಿಗೆ ಉತ್ತಮ ಗುಣಮಟ್ಟದ ಅಕ್ಕಿ ವಿತರಿಸಿದ್ದಾರೆ. ಈ ಅಂಗಡಿ ವ್ಯಾಪ್ತಿಯ ಎಲ್ಲಾ ಪಡಿತರದಾರರು ಗುಣಮಟ್ಟದ ಅಕ್ಕಿಯನ್ನು ಪಡೆಯಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.