ಹ್ರಸ್ವಸ್ವರೇಣ ಕೃಕವಾಕುಗಣಸ್ಸ÷್ವರೇಣ |
ದೀರ್ಘೇಣ ಚ ಪ್ಲುತರವೇಣ ಯುತಾನ್ ಕುಕೂಕೂನ್ ||
ಉದ್ಭೋಧಯನ್ನಿವ ತನೋತಿ ಮುಹುರ್ಮುಹುಸ್ತಾ÷್ವಂ|
ಸಹ್ಯಾಚಲೇAದ್ರತನಯೇ ತವ ಸುಪ್ರಭಾತಂ ||
ಕುಕ್ಕುಟಗಳು ಗುಂಪುಗುAಪಾಗಿ ಉಷಃಕಾಲದಲ್ಲಿ ನಿನ್ನನ್ನು ಎಬ್ಬಿಸುತ್ತಿವೆಯೋ ಎಂಬAತೆ ಕೊ ಕೋ ಕೋ ಎಂದು ಹ್ರಸ್ವ ದೀರ್ಘ ಮತ್ತು ಪ್ಲುತಸ್ವರಗಳಿಂದ ಕೂಡಿ ಬಾರಿಬಾರಿಗೂ ಧ್ವನಿ ಮಾಡುತ್ತಿವೆ. ಪರ್ವತ ಶ್ರೇಷ್ಠವಾದ ಸಹ್ಯಪರ್ವತದ ಕುವರಿಯೇ ನಿನಗೆ ಸುಪ್ರಭಾತವು.
ತಾರಾಣಿ ಸಂತಿ ವಿರಲಾನಿ ದಿಶಃಪ್ರಸನ್ನಾB |
ಪಂಕೇರುಹಾಣಿ ವಿಕಚಾನಿ ಸಮೀರಣೋಪಿ ||
ಆವಾತಿ ಮಂದಮಥ ಕೂಜತಿ ಪಕ್ಷಿವೃಂದA |
ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||
ಆಗಸದಲ್ಲಿ ಚುಕ್ಕೆಗಳು ವಿರಳವಾಗುತ್ತಿವೆ. ದಿಕ್ಕುಗಳು ಪ್ರಸನ್ನವಾಗಿವೆ. ತಾವರೆ ಹೂಗಳು ಅರಳಿವೆ. ಮೆಲ್ಲನೆ ಗಾಳಿಯು ತೀಡುತ್ತಿದೆ. ಹಕ್ಕಿಗಳ ಗುಂಪು ಚಿಲಿಪಿಲಿ ಗುಟ್ಟುತ್ತಿದೆ. ಪರ್ವತೇಂದ್ರವೆನಿಸಿದ ಸಹ್ಯಪರ್ವತದ ಕುವರಿಯಾದ ಕಾವೇರಿಯೇ ನಿನಗೆ ಸುಪ್ರಭಾತವು.
ರಾತ್ರಿರ್ಗತಾ ವಿಕಸಿತಾಬ್ಜ ಮರಂದಸಿAದೌ |
ಸ್ನಾನಾಯ ಝಂಕೃತಿಮಿಷೇಣ ಮಧುವ್ರ ತಾಲಿಃ||
ಸಂಕಲ್ಪ ಮಾಚರತಿ ನೂನಮುಷಃ ಪ್ರವೃತ್ತಂ |
ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||
ರಾತ್ರಿಯು ಕಳೆದು, ಜೇನುನೊಣಗಳು ಸಾಲುಸಾಲಾಗಿ ಝೇಂಕಾರದ ನೆಪದಿಂದ ಅರಳಿದ ತಾವರೆಗಳ ಮಕರಂದಗಳ ನದಿಯಲ್ಲಿ ಸ್ನಾನಕ್ಕಾಗಿ ಸಂಕಲ್ಪವನ್ನು ಮಾಡುತ್ತಿವೆಯೋ ಎಂಬAತಿದೆ. ಉಷಃಕಾಲವು ಸಮೀಪಿಸಿತು. ಸಹ್ಯಗಿರಿಯಿಂದ ಹುಟ್ಟಿದ ಕಾವೇರಿಯೇ ನಿನಗೆ ಸುಪ್ರಭಾತವು.
ಪುಷ್ಪಂಧಯಾ ವಿಕಚಪಂಕಜಮಧ್ಯಭಾಗಾತ್ |
ನಿರ್ಗತ್ಯ ಪುಷ್ಪರಸಪಾನಮದಾವಲಿಪ್ತಃ ||
ಝಂಕಾರಿಣೋ ಮುಖರಯಂತಿ ದಿಗಂತರಾಲA |
ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||
ಮಕರಂದವನ್ನು ಕುಡಿದು, ಮದವೇರಿ ಗರ್ವಗೊಂಡ ಜೇನುನೋಣ ಗಳು ಅರಳಿದ ತಾವರೆಗಳ ಮಧ್ಯಪ್ರದೇಶದಿಂದ ಹೊರಹೊರಟು ಝೇಂಕಾರ ವನ್ನು ಮಾಡುತ್ತಾ ದಿಕ್ಕುಗಳ ಮಧ್ಯಭಾಗವನ್ನು ಪ್ರತಿಧ್ವನಿಗೈಯುವಂತೆ ಮಾಡುತ್ತಿವೆ. ಸಹ್ಯಗಿರೀಂದ್ರನ ಮಗಳೇ ನಿನಗೆ ಸುಪ್ರಭಾತವು.
ನಕ್ಷತ್ರಭೂಷಣಧರಾ ವಸನಂ ವಸಾನಾ |
ಮನ್ಶೇರುಣಂ ಚರತಿ ಪೂರ್ವದಿಗೀರ್ಷ್ಯಯೇವ ||
ತ್ವಾಂ ಮೋಹಿನೀಂ ತ್ರಿಭುವನಸ್ಯ ವಿಲೋಕಯಂತೀ |
ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||
ತ್ರಿಭುವನ ಮೋಹಿನಿಯಾದ ನಿನ್ನನ್ನು ನೋಡುತ್ತಾ ಅಸೂಯೆ ಯಿಂದಲೋ ಎಂಬAತೆ ಪೂರ್ವದಿಶೆಯೆಂಬ ಮಹಿಳೆ ಕೆಂಪಾದ ಬಟ್ಟೆಯನ್ನುಟ್ಟು, ನಕ್ಷತ್ರಗಳೆಂಬ ಆಭರಣಗಳನ್ನು ತೊಟ್ಟು ಸಂಚರಿಸುತ್ತಿರುವಳೋ ಎಂಬAತಿದೆ. (ಅಂದರೆ ಪೂರ್ವ ದಿಕ್ಕಿನ ವರ್ಣನೆ) ಪರ್ವತಗಳಲ್ಲಿ ಶ್ರೇಷ್ಠವಾದ ಸಹ್ಯಗಿರಿಯ ಮಗಳಾದ ಕಾವೇರಿಯೇ ನಿನಗೆ ಸುಪ್ರಭಾತವು.
ಕೇಕಾಂ ಮಯೂರನಿವಹಃ ಕುರುತೇ ವಿತತ್ಯ |
ಬರ್ಹಾಣಿ ನೃತ್ಯ ಕುಶಲಃ ಪುರತೋ ಭವತ್ಯಾಃ ||
ನಿದ್ರಾಂ ಜಹೀಹಿ ಕುರು ಲೋಕಮಮುಂ ಶುಭಂಯುA |
ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||
ನವಿಲುಗಳು ಸಾಮೂಹಿಕವಾಗಿ ತಮ್ಮ ಗರಿಗಳನ್ನು ಕೆದರಿ ನರ್ತನದಲ್ಲಿ ನೈಪುಣ್ಯವುಳ್ಳವುಗಳಾಗಿ ಉಷಃಕಾಲದಲ್ಲಿ ನಿನ್ನ ಮುಂದೆ ಕೇಕಾರವನ್ನು ಮಾಡುತ್ತಿದೆ. ಎಲೈ ದೇವಿಯೇ ಈ ಪ್ರಪಂಚವನ್ನು ಮಂಗಲಮಯವನ್ನಾಗಿ ಮಾಡು. ಪರ್ವತಗಳಲ್ಲಿ ಮೇಲೆನಿಸಿದ ಸಹ್ಯಗಿರಿಯ ಮಗಳೇ ನಿನಗೆ ಸುಪ್ರಭಾತವು.
ನಾಂದೀಕರಾ ಇವ ರುವಂತಿ ಕಲಂ ವಿಹಂಗಾಃ |
ಪ್ರಾಚೀಂ ವಿಶತ್ಯರುಣಯಾನ್ ಗರುಡಾಗ್ರ ಜೋಪಿ ||
ಸೌರೋದಯಾಸ್ತ ರಸರೂಪಕಸೂತ್ರಧಾರಃ |
ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||
ಹಕ್ಕಿಗಳು ನಾಂದೀಪದ್ಯವನ್ನು ಹಾಡುವವರಂತೆ ಅವ್ಯಕ್ತ ಮಧುರವಾಗಿ ಕೂಗುತ್ತಿವೆ. ಗರುಡನ ಅಣ್ಣನಾದ ಅರುಣನೂ ಕೂಡ ಸೂರ್ಯನ ಉದಯಾಸ್ತ ಸಂಬAಧದಿAದ ಕೂಡಿದ ರಸಭರಿತವಾದ ನಾಟಕದ ಪ್ರಾರಂಭದಲ್ಲಿ ಸೂತ್ರಧಾರ ನಂತಿದ್ದು ಕೆಂಪೇರಿದ ಪೂರ್ವ ದಿಕ್ಕನ್ನು ಪ್ರವೇಶಿಸುತ್ತಿರುವನು. ಗಿರಿಗಳಲ್ಲಿ ಶ್ರೇಷ್ಠವಾದ ಸಹ್ಯಗಿರಿಯಿಂದ ಜನ್ಮತಳೆದ ಕಾವೇರಿಯೇ ನಿನಗೆ ಸುಪ್ರಭಾತವು.
ಸೀಮಂತಿನೀರು ಚಿರ ಕಂಕಣನಾದಯುಕ್ತೋ |
ಗೀತಧ್ವನಿಸ್ಸುದಧಿಮಂಥನಘೋಷಪುಷ್ಪಃ ||
ಸಂಶ್ರೂಯತೇ ಪ್ರತಿಗೃಹಂ ಪ್ರವಿಬೋಧಶಂಸೀ ||
ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||
ಬೆಳಿಗ್ಗೆ ಮೊಸರನ್ನು ಕಡೆಯುವಾಗ ಕೈಗಳು ಅಲುಗಿ ಬಳೆಗಳು ಒಂದಕ್ಕೊAದು ತಗಲುವುದರಿಂದ ಉಂಟಾದ ಬಳೆಗಳ ಶಬ್ದದಿಂದ ಕೂಡಿದ ಮಹಿಳೆಯರ ಹಾಡಿನ ಶಬ್ದವು ಮನೆಮನೆಗಳಲ್ಲಿ ‘ನೀನು ಎದ್ದೇಳು’ ಎಂದು ಹೇಳುವಂತೆ ಕೇಳಿಸುತ್ತಿದೆ. ಸಹ್ಯಗಿರಿ ನಂದಿನಿಯೇ ನಿನಗೆ ಸುಪ್ರಭಾತವು.
ಲೋಕಾಃಕಳತ್ರಮಭಿರಾಮಗುಣಂ ಚ ಪುತ್ರಂ|
ಸೌಭಾಗ್ಯಮಾಯುರಧಿಕಾರಮುದಾರಕೀರ್ತಿA ||
ತ್ವಾಮರ್ಥಯಂತಿ ರಚಿತಾಂಜಲಯೋ ವಿನಮ್ರಾಃ |
ಸಹ್ಯಾಚಲೇಂದ್ರ ತನಯೇ ತವ ಸುಪ್ರಭಾತಂ ||
ಕೆಲವರು ಅಂಜಲಿಬದ್ಧರಾಗಿ, ತಲೆಯನ್ನು ಬಗ್ಗಿಸಿ, ಸದ್ಗುಣ ಮಂಡಿತೆಯಾದ ಪತ್ನಿಯನ್ನೂ, ಹಲವರು ಸುಗುಣಶಾಲಿಯಾದ ಮಗನನ್ನೂ, ಇತರರು ಸೌಭಾಗ್ಯವನ್ನೂ, ಬೇರೆ ಕೆಲವರು ಆಯುಷ್ಯವನ್ನೂ, ಅಧಿಕಾರಾಭಿಲಾಷಿಗಳು ಅಧಿಕಾರವನ್ನೂ, ಕೀರ್ತಿಯನ್ನು ಬಯಸುವವರು. ನಿಷ್ಕಲಂಕ ಕೀರ್ತಿಯನ್ನು ದಯಪಾಲಿಸೆಂದು ನಿನ್ನನ್ನು ಬೇಡುತ್ತಿರುವರು. ಬೆಟ್ಟಗಳಲ್ಲಿ ಉತ್ತಮವಾದ ಸಹ್ಯಗಿರಿಯಿಂದ ಜನಿಸಿಹ ಕಾವೇರಿಯೇ ನಿನಗೆ ಸುಪ್ರಭಾತವು.
ಪುಣ್ಯಾಪಗಾಸು ಮುಖಜಾ ವಿಹಿತಾವಗಾಹಾಃ |
ಪ್ರಾಭಾತಿಕಂ ಪರಿಸಮಾಪ್ಯ ವಿಧಿಂ ಯಥಾವತ್ ||
ತ್ವಾಮಾಶ್ರಯಂತಿ ಭಜಿತುಂ ಭುವನೇಷ್ಟದಾತ್ರೀಂ |
ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||
ಪವಿತ್ರ ನದಿಗಳಲ್ಲಿ ಭಕ್ತರು ಸ್ನಾನವನ್ನು ಮುಗಿಸಿ ವಿಧಿಪ್ರಕಾರ ಬೆಳಗಿನ ಕಾರ್ಯಕಲಾಪಗಳನ್ನು ತೀರಿಸಿ ಸಕಲ ಜನರ ಇಷ್ಟಾರ್ಥವನ್ನು ಕೊಡುವ ನಿನ್ನ ಸೇವೆಯನ್ನು ಕೈಗೊಳ್ಳಲು ನಿನ್ನನ್ನು ಆಶ್ರಯಿಸುತ್ತಿರುವರು. ಸಹ್ಯಾದ್ರಿಯಿಂದ ಹುಟ್ಟಿದ ಕಾವೇರಿಯೇ ನಿನಗೆ ಸುಪ್ರಭಾತವು.
ಮಂದಾರವೋದ್ಯ ತವ ಮಂಗಲದರ್ಶನಾಯ |
ತಿಷ್ಯಂತಿ ಪುಷ್ಪಫಲಪೂರ್ವನವೋಪಹಾರಾಃ||
ಉತ್ತಿಷ್ಠ ದೇವಿ ಮುನಿಸಂಹತಿ ಭಾಗ್ಯಲಕ್ಷಿö್ಮ |
ಸಹ್ಯಾಚಲೇಂದ್ರ ತನಯೇ ತವ ಸುಪ್ರಭಾತಂ ||
ನಿನ್ನನ್ನು ವಂದಿಸುವ ಜನರು ನಿನ್ನ ಮಂಗಲದರ್ಶನವನ್ನು ಪಡೆಯಲು ಹೊಸ ಹೂವು, ಹಣ್ಣು ಮೊದಲಾದ ಪೂಜಾ ಸಾಮಗ್ರಿಗಳನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿದ್ದಾರೆ. ದೇವಿಯೇ ಮುನಿಜನರ ಭಾಗ್ಯಲಕ್ಷಿö್ಮಯೇ ಗಿರಿಶ್ರೇಷ್ಠ ವಾದ ಸಹ್ಯಗಿರಿಯಿಂದ ಜನ್ಮತಾಳಿದ ಕಾವೇರಿಯೇ ನಿನಗೆ ಸುಪ್ರಭಾತವು.
ಚಂಚತ್ತ ರಂಗರಮಣೀಯ ಜಲಪ್ರವಾಹೇ |
ಕರ್ನಾಟದೇಶತಟನೀಮುಕುಟಾಯಮಾನೇ ||
ನೀರಾಜಿಶಾಂಘ್ರಿಯುಗಲೇ ಸುರಮೌಲಿಂತ್ನೆöÊಃ |
ಸಹ್ಯಾಚಲೇಂದ್ರ ತನಯೇ ತವ ಸುಪ್ರಭಾತಂ ||
ಚಂಚಲವಾದ ಅಲೆಗಳಿಂದ ಸುಂದರವಾದ ಜಲಪ್ರವಾಹವುಳ್ಳ, ಕನ್ನಡ ನಾಡಿನ ನದಿಗಳಿಗೆ ಕಿರೀಟಪ್ರಾಯಳಾದ ದೇವತೆಗಳು ಸಾಷ್ಟಾಂಗವೆರಗಲು ಅವರ ಕಿರೀಟದ ರತ್ನಗಳ ಪ್ರಭೆಯಿಂದ ನಿವಾಳಿಸ್ಪಲಟ್ಟ ಪಾದಗಳುಳ್ಳ, ಸಹ್ಯಾಚಲದಿಂದ ಹುಟ್ಟಿದ ಕಾವೇರಿಯೇ ನಿನಗೆ ಸುಪ್ರಭಾತವು.
ಸ್ವಸ್ಸಿಂಧುಪಾವನಜಲೇ ತರುರಮ್ಯಕೂಲೇ |
ಭೈಷಜ್ಯಕಲ್ಪಸಲಿಲೇ ಮುಷಿತಾಘಜಾಲೇ ||
ಧೂತಾಂಡಜಾದಿಗರಲೇ ವರದಾನಶೀಲೇ |
ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||
ದೇವನದಿಯಾದ ಗಂಗೆಯನ್ನು ಪವಿತ್ರಗೊಳಿಸಿದ ನೀರಿನಿಂದ ಕೂಡಿದವಳೇ, ಹುಲುಸಾಗಿ ಬೆಳೆವ ಮರಗಿಡಗಳಿಂದ ಕಂಗೊಳಿಸುತ್ತಿರುವ ದಂಡೆಗಳಿAದ ಕೂಡಿದವಳೇ, ಔಷಧದಂತಿರುವ ನೀರಿನಿಂದ ತುಂಬಿದವಳೇ, ಪಾಪರಾಶಿಯನ್ನು ಪರಿಹರಿಸುವವಳೇ, ಸರ್ಪಾದಿಗಳ ವಿಷವನ್ನು ಹೋಗಲಾಡಿಸುವವಳೇ, ಭಕ್ತರಿಗೆ ವರಗಳನ್ನು ಕೊಡುವವಳೇ, ಸಹ್ಯಾದ್ರಿಯ ಮಗಳಾದ ಕಾವೇರಿಯೇ ನಿನಗೆ ಸುಪ್ರಭಾತವು.
ಕುಂಭೋದ್ಭವಸ್ಯದಯಿತೆ ನಿಗಮಾಂತಗೀತೇ |
ಬ್ರಹ್ಮಾಚ್ಯುತೇಶವಿನುತೇ ಶ್ರಿತಪಾರಿಜಾತೆ ||
ಕಲ್ಯಾಣವೀಚಿಲಲಿತೇ ಕನಕಾಸಮೇತೇ |
ಸಹ್ಯಾಚಲೇಂದ್ರ ತನಯೇ ತವ ಸುಪ್ರಭಾತಂ ||
ಅಗಸ್ತö್ಯನ ಮಡದಿಯೇ, ವೇದಾಂತ ಪ್ರತಿಪಾದ್ಯಳೇ, ಬ್ರಹ್ಮ, ವಿಷ್ಣು, ಮಹೇಶ್ವರರಿಂದ ಹೊಗಳಲ್ಪಟ್ಟವಳೇ, ಅತ್ರಿತರ ಇಷ್ಟಾರ್ಥಗಳನ್ನು ಈಡೇರಿಸು ವವಳೇ, ಮಂಗಲಕರವಾದ ಅಲೆಗಳಿಂದ ಕಂಗೊಳಿಸುವವಳೇ, ಕನಕೆ ಮೊದಲಾದ ಉಪನದಿಗಳಿಂದ ಕೂಡಿ ಹರಿಯುವವಳೇ, ಸಹ್ಯಗಿರಿಯ ನಂದಿನಿಯಾದ ಕಾವೇರಿಯೇ ನಿನಗೆ ಸುಪ್ರಭಾತವು.
ಸರ್ವೇಶ್ವರೇಶ್ವರಿ ಪರೇ ಪರತತ್ವರೂಪೇ |
ಮುಕ್ತಿಪ್ರದೇ ಕವಿಕುಲಪ್ರತಿಭಾಸ್ವರೂಪೇ ||
ಯೋಗೀಂದ್ರ ಚಿತ್ತ ಕಮಲಾಕರರಾಜಹಂಸಿ |
ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||
ಸರ್ವೇಶ್ವರನಿಗೂ ಈಶ್ವರಿಯೇ, ಶ್ರೇಷ್ಠಳೇ ಪರಮತತ್ವರೂಪಿಣಿಯೇ, ಮೋಕ್ಷದಾಯಿನಿಯೇ, ಕವಿಗಳ ಪ್ರತಿಭಾರೂಪಿಣಿಯೇ, ಯೋಗೀಂದ್ರರ ಹೃದಯವೆಂಬ ತಾವರೆ ಕೊಳದಲ್ಲಿ ವಿಹರಿಸುವ ರಾಜಹಂಸಿಯೇ ಸಹ್ಯಗಿರಿಯಿಂದ ಉದ್ಭವಿಸಿದ ಕಾವೇರಿಯೇ ನಿನಗೆ ಸುಪ್ರಭಾತವು.
ಸಹ್ಯಾಚಲೇಂದ್ರ ತನಯಾನÀವ ಸುಪ್ರಭಾತಂ
ಯೇಹರ್ಮುಖೇ ಪ್ರತಿದಿನಂ ಮನುಜಾಃ ಪಠಂತಿ |
ವಿಂದAತಿ ತೇ ಸಕಲವಾಂಚ್ಛಿತಸಿದ್ಧಿ ಮಾಶು
ಜ್ಞಾನಂ ಚ ಮುಕ್ತಿ ಸುಲಭಂ ಪರಮಂ ಲಭಂತೇ ||
ನಿತ್ಯವೂ ಬೆಳಿಗ್ಗೆ ಯಾವ ಜನರು ಕಾವೇರಿಯ ನೂತನ ಸುಪ್ರಭಾತವನ್ನು ಪಠಣಮಾಡುತ್ತಾರೋ ಅವರು ತಮ್ಮ ಎಲ್ಲ ಇಷ್ಟಾರ್ಥಗಳನ್ನೂ ಬೇಗನೆ ಹೊಂದುವುದರ ಜೊತೆಗೆ ಮೋಕ್ಷ ಪ್ರಾಪ್ತಿಗೆ ಸುಲಭವಾದ ಜ್ಞಾನವನ್ನೂ ಹೊಂದುತ್ತಾರೆ.
ಶ್ರೀ ಪದ್ಮನಾಭತನಯೇನ ಕವೇರಕನ್ಯಾ
ಜನ್ಮಸ್ಥಲೇ ಜನಿಜುಷಾ ನವಸುಪ್ರಭಾತಂ ||
ನಾರಾಯಣೇನ ವಿದುಷಾ ರಚಿತಂ ಬುಧಾನಾಂ
ಚಿತ್ತೇ ಪ್ರಮೋದಲಹರೀಂ ವಿತನೋತು ಭೂಯಃ ||
ಶ್ರೀಯುತ ಪದ್ಮನಾಭಾಚಾರ್ಯರ ಮಗನಾದ, ಕಾವೇರಿಯು ಹುಟ್ಟುವಲ್ಲಿ ಅಂದರೆ ತಲಕಾವೇರಿಯಲ್ಲಿ ಜನ್ಮತಾಳಿದ, ಸಾಹಿತ್ಯ ವಿದ್ವಾನ್ ನಾರಾಯಣಾಚಾರ್ಯನಿಂದ ವಿರಚಿತವಾದ ಈ ಸುಪ್ರಭಾತ ಪದ್ಯಗಳು ವಿದ್ವಜ್ಜನರ ಮನಸ್ಸಿನಲ್ಲಿ ಹೆಚ್ಚುಹೆಚ್ಚಾಗಿ ಸಂತೋಷದ ಅಲೆಗಳನ್ನು ವಿಸ್ತರಿಸಲಿ.
(ಮುಗಿಯಿತು)