ಮಡಿಕೇರಿ,ನ.೧೯: ಹಲ್ಲೆ, ಗಲಭೆ ಮೂಲಕ ಜಿಲ್ಲೆಯಲ್ಲಿ ಅಶಾಂತಿ ಉಂಟು ಮಾಡಿ ಕೋಮು ಸಾಮರಸ್ಯ ಕದಡುತ್ತಿರುವವರ ವಿರುದ್ಧ ಸಂಬAಧಿಸಿದ ಆಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸುನ್ನಿ ಮಹಲ್ ಫೆಡರೇಶನ್ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಕಾರ್ಯದರ್ಶಿ ಸಿ.ಎಂ.ಹಮೀದ್ ಮೌಲವಿ, ಕೊಡಗು ಶಾಂತಿ ಹಾಗೂ ಪ್ರೀತಿಗೆ ಹೆಸರುವಾಸಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಕೆಲವು ಸಂಘಟನೆಗಳು ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಸಂಘಟನೆಯೊAದು ಬಂದ್ಗೆ ಕರೆ ಕೊಟ್ಟ ಸಂದರ್ಭ ಬಂದ್ ಮಾಡುವದನ್ನು ತಡೆಯಬಹುದಿತ್ತು. ಅದನ್ನು ಮಾಡಿಲ್ಲ, ಪೊಲೀಸ್ ಇಲಾಖೆ ಕೂಡ ಸಂಘಟನೆ ಪರವಾಗಿದೆ ಎಂದು ಆರೋಪಿಸಿದರು.
ಶನಿವಾರಸಂತೆಯಲ್ಲಿ ಶಾಲಾ ಮಕ್ಕಳ ಮೇಲೆ ಕೂಡ ಹಲ್ಲೆ ಮಾಡಲಾಗಿದೆ, ಇನ್ನು ಮುಂದಕ್ಕೆ ಇಂತಹ ಶಾಂತಿ ಕದಡುವ, ದೇಶದ್ರೋಹದ ದುಷ್ಕೃತ್ಯಗಳಿಗೆ ಆಸ್ಪದ ನೀಡುವುದಿಲ್ಲವೆಂದು ಹೇಳಿದರು. ಶಾಸಕರು ಕೂಡ ಈ ವಿಚಾರದಲ್ಲಿ ಮೌನ ತಾಳಿದ್ದಾರೆ. ಶಾಂತಿ ಕದಡುವ ಕೆಲಸಕ್ಕೆ ಕೈಹಾಕದಂತೆ ಶಾಸಕರು ಕೂಡ ಸಂಘಟಕರಿಗೆ ತಿಳಿಹೇಳಬೇಕು, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಯಾವದೇ ಕಾರ್ಯಕ್ರಮ, ಸಭೆಗಳಿಗೆ ನಾವುಗಳು ಬೆಂಬಲ ಕೊಡುತ್ತೇವೆ ಎಂದು ಹೇಳಿದರು.
ಎಸ್ಎಮ್ಎಫ್ ಸದಸ್ಯ ತಮ್ಲಿಕ್ ದಾರಿಮಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಎಲ್ಲರೂ ಜಾತಿ, ಮತ ಮರೆತು ಒಟ್ಟಾಗಿ ಕೆಲಸ ಮಾಡಿದ್ದೇವೆ, ಆದರೆ ಇದೀಗ ಕೆಲವರು ಜಾತಿಯ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇದೀಗ ಚುನಾವಣೆ ಬರುತ್ತಿದ್ದು, ರಾಜಕೀಯದ ಕರಾಳ ಕೈಗಳು ಇಂತಹ ಘಟನೆಗಳ ಹಿಂದೆ ಇವೆ ಎಂದು ಹೇಳಿದರು. ಧರ್ಮದ ನಡುವೆ ವೈಮನಸ್ಸು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ, ಧರ್ಮದ ಹೆಸರಿನಲ್ಲಿ ಹಲ್ಲೆ, ವಾಹನ ಅಡ್ಡಗಟ್ಟಿ ಹಲ್ಲೆ ಮಾಡುವ ಪ್ರಕರಣಗಳಾಗುತ್ತಿವೆ. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಘಟನೆಗಳಾಗದಂತೆ ತಡೆಯಬೇಕಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಎಸ್ಎಮ್ಎಫ್ನ ಪ್ರಧಾನ ಕಾರ್ಯದರ್ಶಿ ಸಿ.ಎಂ. ಅಬ್ದುಲ್ ಕರೀಂ, ಉಪಾಧ್ಯಕ್ಷ ಉಮ್ಮರ್ ಫೈಝಿ, ಹಸನ್ ಕುಂಙÂ ಹಾಜಿ, ಹಾರೂನ್ ಹಾಜಿ ಇದ್ದರು.