(ವಿಶೇಷ ವರದಿ : ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ನ. ೧೮: ಮಡಿಕೇರಿ - ವೀರಾಜಪೇಟೆ ೬೬ ಕೆ.ವಿ. ವಿದ್ಯುತ್ ಮಾರ್ಗವು ೨೦೦೭ರಲ್ಲಿ ಸರ್ಕಾರದಿಂದ ಮಂಜೂರಾತಿ ಪಡೆದಿದ್ದು ೬.೭೫ ಕೋಟಿ ಅಂದಾಜು ಪಟ್ಟಿ ಸಲ್ಲಿಸಲಾಗಿತ್ತು. ಈ ಯೋಜನೆ ನಾನಾ ಕಾರಣದಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಜಿಲ್ಲೆಯ ಮಡಿಕೇರಿ, ವೀರಾಜಪೇಟೆ ವಿದ್ಯುತ್ ಮಾರ್ಗವನ್ನು ಆರಂಭಿಸಲು ಕೆಪಿಟಿಸಿಎಲ್‌ನ ಹಿರಿಯ ಅಧಿಕಾರಿ ಕೋದಂಡ ಪಾಣಿ ಮುಂದೆ ಬಂದಿದ್ದಾರೆ. ಜನತೆಗಾಗುತ್ತಿರುವ ನಿರಂತರ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ವಿದ್ಯುತ್ ಲೈನ್ ಹೆಚ್ಚಾಗಿ ಪ್ರಯೋಜನಕ್ಕೆ ಬರಲಿದೆ. ಆದರೆ ಚೆಸ್ಕಾಂನ ಕೆಲವು ಅಧಿಕಾರಿಗಳು ಈ ವಿದ್ಯುತ್ ಮಾರ್ಗದ ವಿಷಯದಲ್ಲಿ ಜನತೆಗೆ ಸರಿಯಾದ ಮಾಹಿತಿ ಗಳನ್ನು ನೀಡದೆ ಇರುವು ದರಿಂದ ಸಹಜವಾಗಿಯೇ ವಿದ್ಯುತ್ ಮಾರ್ಗದಲ್ಲಿ ಬರುವ ಜನರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸಂಬAಧಿತ ಅಧಿಕಾರಿ ಗಳು ಸ್ಪಷ್ಟನೆ ನೀಡಿದ್ದಾರೆ.

ಕೆಪಿಟಿಸಿಎಲ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಬೊಳಕಾರಂಡ ಕುಶಾಲಪ್ಪ ಅವರು “ಶಕ್ತಿ” ಯೊಂದಿಗೆ ಮಾತನಾಡಿ ಕೊಡಗಿನಲ್ಲಿ ವಿದ್ಯುತ್ ಸಮಸ್ಯೆಗಳು ಆಗಿಂದಾಗೆ ಎದುರಾಗು ತ್ತಿವೆ. ಕೆಲವು ಸಮಯದಲ್ಲಿ ದಿನಗಟ್ಟಲೆ ವಿದ್ಯುತ್ ಇಲ್ಲದೆ ಕೊಡಗಿನ ಜನತೆ ಕತ್ತಲಿನಲ್ಲಿಯೇ ಕಳೆದ ದಿನಗಳು ಹಲವಷ್ಟಿವೆ. ಇವುಗಳಿಗೆ ಪರಿಹಾರ ಕಂಡುಕೊಳ್ಳಲು

ಜಿಲ್ಲೆಯ ಜನತೆ ವಿಶೇಷವಾಗಿ ಮಡಿಕೇರಿ- ವೀರಾಜಪೇಟೆಯ ನಾಗರಿಕರು ಸರ್ಕಾರದಿಂದ ೨೦೦೭ರಲ್ಲಿ ಮಂಜೂರಾದ ಉದ್ದೇಶಿತ ಮಡಿಕೇರಿ-ವೀರಾಜಪೇಟೆಗೆ ೬೬ ಕೆ.ವಿ. ವಿದ್ಯುತ್ ಮಾರ್ಗ ಸದುಪಯೋಗ ಪಡಿಸಿಕೊಳ್ಳಬೇಕು. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಪ್ರಯೋಜನವಾಗಲಿದೆ.

ಕೆಲವು ಅಧಿಕಾರಿಗಳ ಇಚ್ಚಾ ಶಕ್ತಿ ಕೊರತೆಯಿಂದಾಗಿ ಇಂತಹ ಯೋಜನೆಗಳು ಕೈ ತಪ್ಪುವ ಸಾಧ್ಯತೆಗಳಿವೆ.

(ಮೊದಲ ಪುಟದಿಂದ) ಪ್ರಮುಖ ಯೋಜನೆಗಳಿಗೆ ವಿರೋಧಗಳು ವ್ಯಕ್ತವಾದಲ್ಲಿ ಇದನ್ನೇ ಪ್ರಮುಖ ಅಸ್ತç ಮಾಡಿಕೊಳ್ಳುವ ಕೆಲವು ಅಧಿಕಾರಿಗಳು ಇಂತಹ ಯೋಜನೆ ನಡೆಸಲು ಸ್ಥಳೀಯರ ವಿರೋಧವಿದೆ ಎಂಬ ಕುಂಟು ನೆಪದೊಂದಿಗೆ ಯೋಜನೆಯನ್ನು ಕೈ ಬಿಡಬಹುದು. ಇದರಿಂದ ಜಿಲ್ಲೆಯ ಜನತೆಗೆ ಅಪಾರ ನಷ್ಟ ಸಂಭವಿಸಲಿದೆ. ಮುಂದೆ ನಾಡಿನ ಜನತೆಗೆ ಈ ಯೋಜನೆ ಅವಶ್ಯಕತೆ ಎನಿಸಿದಾಗ ಯೋಜನೆಗಳು ಲಭ್ಯವಾಗುವುದಿಲ್ಲ. ಆದ್ದರಿಂದ ಭವಿಷ್ಯದ ಹಿತದೃಷ್ಟಿಯಿಂದ ಬಹುಪಯೋಗಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊಡಗಿನ ಗೋಣಿಕೊಪ್ಪ ನಿವಾಸಿ ಬೊಳಕಾರಂಡ ಕುಶಾಲಪ್ಪನವರು ವಿದ್ಯುತ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ವೇಳೆ ಮೈಸೂರಿನಿಂದ ೨೨೦ ಕೆ.ವಿ. (ಡಬಲ್ ಸೆರ್ಕ್ಯೂಟ್) ದ್ವಿ ಮಾರ್ಗದಲ್ಲಿ ಕುಶಾಲನಗರವರೆಗೆ ಹಾಗೂ ಕುಶಾಲನಗರದಿಂದ ಸುಂಟಿಕೊಪ್ಪ, ಮಡಿಕೇರಿ ೬೬ ಕೆ.ವಿ. ಲೈನ್, ಪೊನ್ನಂಪೇಟೆಯಿAದ ವೀರಾಜಪೇಟೆಗೆ ೬೬ ಕೆ.ವಿ. ಲೈನ್ ಎಳೆಯುವಾಗ ಹಾಗೂ ವಿದ್ಯುತ್ ಉಪಕೇಂದ್ರ ಸ್ಥಾಪನೆ ಮಾಡುವ ಸಂದರ್ಭ ಕೆಲವು ಬೆರಳೆಣಿಕೆಯ ಸಾರ್ವಜನಿಕರು ಹೊರತುಪಡಿಸಿ ಯಾರೂ ಕೂಡ ಈ ಬಗ್ಗೆ ವಿರೋಧ ವ್ಯಕ್ತಪಡಿಸಲಿಲ್ಲ.

ಈ ವಿದ್ಯುತ್ ಮಾರ್ಗವು ಕೊಡಗು ಹಾಗೂ ಉತ್ತರ ಕೊಡಗನ್ನು ಬೆಸೆಯುವ ವಿದ್ಯುತ್ ಪ್ರವಾಹ ಆಗಿರುತ್ತದೆ. ಇದರಿಂದ ಉತ್ತರ ಕೊಡಗಿನಲ್ಲಿ ವಿದ್ಯುತ್ ಅಡಚಣೆ ಉಂಟಾದಲ್ಲಿ ಈ ಲೈನ್ (೬೬ ಕೆ.ವಿ.) ಮುಖಾಂತರ ಉತ್ತರ ಕೊಡಗಿಗೆ ೫ ನಿಮಿಷದ ಒಳಗೆ ಅಡಚಣೆ ನಿವಾರಿಸಬಹುದು. ಅದೇ ರೀತಿಯಲ್ಲಿ ದಕ್ಷಿಣ ಕೊಡಗಿನಲ್ಲಿ ವಿದ್ಯುತ್ ಅಡಚಣೆ ಆದಲ್ಲಿ ಮಡಿಕೇರಿಯಿಂದ ವಿದ್ಯುತ್ ಪ್ರವಾಹ ಪಡೆದುಕೊಳ್ಳಬಹುದು. ಕಳೆದೆರಡು ವರ್ಷಗಳ ಹಿಂದೆ ಹುಣಸೂರು, ಪೊನ್ನಂಪೇಟೆ ಲೈನ್ ಹಾಗೂ ಉಪ ಕೇಂದ್ರದಲ್ಲಿ ಉಂಟಾದ ಅಡಚಣೆಯಿಂದ ಇಡೀ ದಕ್ಷಿಣ ಕೊಡಗು ಕಾರ್ಗತ್ತಲಿನಲ್ಲಿ ಮುಳುಗಿತ್ತು. ಈ ಲೈನ್ ಆದಲ್ಲಿ ಎಲ್ಲಾ ಅಡಚಣೆಗಳಿಗೆ ವಿದಾಯ ಹೇಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

೨೦೦೭ರಲ್ಲಿ ಕೆಪಿಟಿಸಿಎಲ್‌ನಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿದ್ದ ಕೊಡಗಿನ ಕುಶಾಲಪ್ಪನವರು ಕರ್ತವ್ಯದಲ್ಲಿದ್ದ ಸಂದರ್ಭ ಈ ಯೋಜನೆಯು ಮಂಜೂರಾಗಿತ್ತು. ರೂ. ೬.೭೫ ಕೋಟಿ ವೆಚ್ಚವನ್ನು ಇದಕ್ಕಾಗಿ ಮೀಸಲಿಡಲಾಗಿತ್ತು. ಆದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲು ತಡವಾದ ಕಾರಣ ಕೆಲಸಕ್ಕೆ ಹಿನ್ನಡೆಯಾಗಿತ್ತು. ಉದ್ಯೋಗದಲ್ಲಿದ್ದ ಹಿರಿಯ ಅಧಿಕಾರಿ ಕುಶಾಲಪ್ಪನವರು ಕೊಡಗಿನಿಂದ ಬಡ್ತಿ ಹೊಂದಿದ ಕಾರಣ ಈ ಕೆಲಸವು ಹಾಗೆಯೇ ನೆನೆಗುದಿಗೆ ಬಿದ್ದಿತ್ತು. ಪ್ರಸ್ತುತ ಈ ಕಾಮಗಾರಿಗೆ ರೂ. ೨೨ ಕೋಟಿ ವೆಚ್ಚ ತಗುಲಬಹುದು. ಈ ವಿದ್ಯುತ್ ಲೈನ್‌ಅನ್ನು ಆರಂಭಿಸಲು ಪ್ರಸ್ತುತವಿರುವ ಕೆಪಿಟಿಸಿಎಲ್‌ನ ಮುಖ್ಯ ಇಂಜಿನಿಯರ್ ಕೋದಂಡ ಪಾಣಿ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಆದರೆ ಇವರ ಅಧೀನದಲ್ಲಿರುವ ಕೆಲವು ಅಧಿಕಾರಿಗಳು ಅಷ್ಟಾಗಿ ಆಸಕ್ತಿ ವಹಿಸುತ್ತಿಲ್ಲದಿರುವುದು ಈ ಯೋಜನೆ ನೆನೆಗುದಿಗೆ ಬೀಳಲು ಕಾರಣವಾಗಿದೆ ಎನ್ನಲಾಗಿದೆ.

ಶ್ರೀಮಂಗಲ ಹಾಗೂ ಬಾಳೆಲೆಯ ಹೊಸ ವಿದ್ಯುತ್ ಉಪ ಕೇಂದ್ರಕ್ಕೆ ಈಗಾಗಲೇ ಅನುಮತಿ ಲಭಿಸಿದೆ. ಆದರೆ ಪ್ರಸ್ತುತ ಇರುವ ಹುಣಸೂರು, ಪೊನ್ನಂಪೇಟೆ ಲೈನ್‌ನಲ್ಲಿ ವಿದ್ಯುತ್ ಒತ್ತಡ ಹೆಚ್ಚಾಗಬಹುದು. ಇಂತಹ ಸಂದರ್ಭದಲ್ಲಿ ಹೊಸ ಲೈನ್‌ನಿಂದ ವೀರಾಜಪೇಟೆ ಉಪ ಕೇಂದ್ರಕ್ಕೆ ಮಡಿಕೇರಿ ಕೇಂದ್ರದಿAದ ವಿದ್ಯುತ್ ಸರಬರಾಜು ಮಾಡಿ ಸಮಸ್ಯೆಯನ್ನು ನಿವಾರಿಸಬಹುದು ಎನ್ನುವ ಚಿಂತನೆಯಿAದ ಈ ಯೋಜನೆ ರೂಪಿಸಲಾಯಿತು ಎಂದು ಹಿಂದಿನ ಅಧಿಕಾರಿ ಕುಶಾಲಪ್ಪ ಮತ್ತು ಈಗಿನ ಅಧಿಕಾರಿ ಕೋದಂಡಪಾಣಿ ವರ್ಷಗಳ ಹಿಂದೆ ಹುಣಸೂರು, ಪೊನ್ನಂಪೇಟೆ ಲೈನ್ ಹಾಗೂ ಉಪ ಕೇಂದ್ರದಲ್ಲಿ ಉಂಟಾದ ಅಡಚಣೆಯಿಂದ ಇಡೀ ದಕ್ಷಿಣ ಕೊಡಗು ಕಾರ್ಗತ್ತಲಿನಲ್ಲಿ ಮುಳುಗಿತ್ತು. ಈ ಲೈನ್ ಆದಲ್ಲಿ ಎಲ್ಲಾ ಅಡಚಣೆಗಳಿಗೆ ವಿದಾಯ ಹೇಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

೨೦೦೭ರಲ್ಲಿ ಕೆಪಿಟಿಸಿಎಲ್‌ನಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿದ್ದ ಕೊಡಗಿನ ಕುಶಾಲಪ್ಪನವರು ಕರ್ತವ್ಯದಲ್ಲಿದ್ದ ಸಂದರ್ಭ ಈ ಯೋಜನೆಯು ಮಂಜೂರಾಗಿತ್ತು. ರೂ. ೬.೭೫ ಕೋಟಿ ವೆಚ್ಚವನ್ನು ಇದಕ್ಕಾಗಿ ಮೀಸಲಿಡಲಾಗಿತ್ತು. ಆದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲು ತಡವಾದ ಕಾರಣ ಕೆಲಸಕ್ಕೆ ಹಿನ್ನಡೆಯಾಗಿತ್ತು. ಉದ್ಯೋಗದಲ್ಲಿದ್ದ ಹಿರಿಯ ಅಧಿಕಾರಿ ಕುಶಾಲಪ್ಪನವರು ಕೊಡಗಿನಿಂದ ಬಡ್ತಿ ಹೊಂದಿದ ಕಾರಣ ಈ ಕೆಲಸವು ಹಾಗೆಯೇ ನೆನೆಗುದಿಗೆ ಬಿದ್ದಿತ್ತು. ಪ್ರಸ್ತುತ ಈ ಕಾಮಗಾರಿಗೆ ರೂ. ೨೨ ಕೋಟಿ ವೆಚ್ಚ ತಗುಲಬಹುದು. ಈ ವಿದ್ಯುತ್ ಲೈನ್‌ಅನ್ನು ಆರಂಭಿಸಲು ಪ್ರಸ್ತುತವಿರುವ ಕೆಪಿಟಿಸಿಎಲ್‌ನ ಮುಖ್ಯ ಇಂಜಿನಿಯರ್ ಕೋದಂಡ ಪಾಣಿ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಆದರೆ ಇವರ ಅಧೀನದಲ್ಲಿರುವ ಕೆಲವು ಅಧಿಕಾರಿಗಳು ಅಷ್ಟಾಗಿ ಆಸಕ್ತಿ ವಹಿಸುತ್ತಿಲ್ಲದಿರುವುದು ಈ ಯೋಜನೆ ನೆನೆಗುದಿಗೆ ಬೀಳಲು ಕಾರಣವಾಗಿದೆ ಎನ್ನಲಾಗಿದೆ.

ಶ್ರೀಮಂಗಲ ಹಾಗೂ ಬಾಳೆಲೆಯ ಹೊಸ ವಿದ್ಯುತ್ ಉಪ ಕೇಂದ್ರಕ್ಕೆ ಈಗಾಗಲೇ ಅನುಮತಿ ಲಭಿಸಿದೆ. ಆದರೆ ಪ್ರಸ್ತುತ ಇರುವ ಹುಣಸೂರು, ಪೊನ್ನಂಪೇಟೆ ಲೈನ್‌ನಲ್ಲಿ ವಿದ್ಯುತ್ ಒತ್ತಡ ಹೆಚ್ಚಾಗಬಹುದು. ಇಂತಹ ಸಂದರ್ಭದಲ್ಲಿ ಹೊಸ ಲೈನ್‌ನಿಂದ ವೀರಾಜಪೇಟೆ ಉಪ ಕೇಂದ್ರಕ್ಕೆ ಮಡಿಕೇರಿ ಕೇಂದ್ರದಿAದ ವಿದ್ಯುತ್ ಸರಬರಾಜು ಮಾಡಿ ಸಮಸ್ಯೆಯನ್ನು ನಿವಾರಿಸಬಹುದು ಎನ್ನುವ ಚಿಂತನೆಯಿAದ ಈ ಯೋಜನೆ ರೂಪಿಸಲಾಯಿತು ಎಂದು ಹಿಂದಿನ ಅಧಿಕಾರಿ ಕುಶಾಲಪ್ಪ ಮತ್ತು ಈಗಿನ ಅಧಿಕಾರಿ ಕೋದಂಡಪಾಣಿ ವಿಪರೀತ ವಿದ್ಯುತ್ ಅಡಚಣೆ ಉಂಟಾಗಿತ್ತು. ಅಲ್ಲದೆ ಮಡಿಕೇರಿಯಿಂದ ಮೂರ್ನಾಡಿಗೆ ಹಳೆಯ ವಿದ್ಯುತ್ ಮಾರ್ಗವಿತ್ತು. ಹಾಗೆಯೇ ವೀರಾಜಪೇಟೆಯಿಂದ ಮೂರ್ನಾಡುವಿನವರೆಗೆ ೩೩ ಕೆ.ವಿ. ವಿದ್ಯುತ್ ಲೈನ್ ಪ್ರಸ್ತುತ ಚಾಲನೆಯಲ್ಲಿದೆ. ಇದೇ ಮಾರ್ಗವಾಗಿ ೬೬ ಕೆ.ವಿ. ಲೈನ್ ಎಳೆಯಬಹುದು ಹಾಗೂ ಅತೀ ಎತ್ತರದಲ್ಲಿ ೬೬ ಕೆ.ವಿ. ಲೈನ್ ಹರಿದು ಹೋಗುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇದರಿಂದ ಪ್ರಸ್ತುತ ವಿರೋಧ ವ್ಯಕ್ತವಾಗುತ್ತಿರುವ ಜಾಗಕ್ಕೆ ಮುಕ್ತಿ ನೀಡಬಹುದು ಎನ್ನುವ ಅಭಿಪ್ರಾಯ ಇವರದ್ದಾಗಿದೆ.

ಮಾಹಿತಿ ನೀಡುವಲ್ಲಿ ಎಡವಿದ ಅಧಿಕಾರಿಗಳು

ಪ್ರಸ್ತುತವಿರುವ ಕೆಪಿಟಿಸಿಎಲ್‌ನ ಕೆಲವು ಸ್ಥಳೀಯ ಅಧಿಕಾರಿಗಳು ಜಿಲ್ಲೆಯ ನಾಗರಿಕರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆೆ. ಕೊಡಗಿನಲ್ಲಿದ್ದ ಕಚೇರಿಯನ್ನು ಮೈಸೂರಿಗೆ ಸ್ಥಳಾಂತರಿಸಿದ ನಂತರ, ಚೆಸ್ಕಾಂ ಹಿರಿಯ ಅಧಿಕಾರಿಗಳು ಮೈಸೂರಿನಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಸಂದರ್ಭಕ್ಕನುಗುಣವಾಗಿ ಜಿಲ್ಲೆಗೆ ಆಗಮಿಸುತ್ತಾರೆ. ಇದರಿಂದಾಗಿ ಇಲ್ಲಿಯ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಾಗರಿಕರಿಗೆ ಗೊಂದಲ ಸೃಷ್ಟಿ ಮಾಡಿದಂತಾಗಿದೆ. ಚೆಸ್ಕಾಂನ ನಿಯಮದಂತೆ ವಿದ್ಯುತ್ ಲೈನ್ ಹಾದು ಹೋಗುವ ಸಂದರ್ಭ ರೈತರ ಜಮೀನನ್ನು ಬಳಕೆ ಮಾಡಿಕೊಳ್ಳುವ ಅವಕಾಶ ಎದುರಾದ ವೇಳೆ ಅಂತಹ ರೈತರಿಗೆ ಪರಿಹಾರ ನೀಡುವ ವ್ಯವಸ್ಥೆಯೂ ಕೂಡ ನಿಯಮದಲ್ಲಿದೆ. ಇವುಗಳ ಬಗ್ಗೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ನಾಗರಿಕರಿಗೆ ನೀಡದಿರುವುದರಿಂದ ವಿರೋಧದ ಮಾತುಗಳು ಸಹಜವಾಗಿ ಕೇಳಿಬರುತ್ತಿದೆ ಎನ್ನಲಾಗಿದೆ.